More

    ಸುಶೀಲ್‌ಕುಮಾರ್ ಬಗ್ಗೆ ಸುಳಿವು ನೀಡಿ, 1 ಲಕ್ಷ ರೂ. ಬಹುಮಾನ ಗೆಲ್ಲಿ!

    ನವದೆಹಲಿ: ಯುವ ಪೈಲ್ವಾನ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ 2 ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಬಗ್ಗೆ ಸುಳಿವು ನೀಡುವವರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ದೆಹಲಿ ಪೊಲೀಸರು ಸೋಮವಾರ ಪ್ರಕಟಿಸಿದ್ದಾರೆ.

    ಪ್ರಕರಣದ ಮತ್ತೋರ್ವ ಆರೋಪಿ ಅಜಯ್ ಬಗೆಗಿನ ಮಾಹಿತಿಗೆ 50 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದೂ ತಿಳಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೆ ಸುಶೀಲ್ ಕುಮಾರು ಮತ್ತು ಇತರ 6 ಆರೋಪಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಯಾಗಿದೆ. ದೆಹಲಿ-ಎನ್‌ಸಿಆರ್ ಜತೆಗೆ ನೆರೆಹೊರೆಯ ರಾಜ್ಯಗಳಲ್ಲಿ ಸುಶೀಲ್ ಕುಮಾರ್‌ಗೆ ಶೋಧ ಕಾರ್ಯ ಮುಂದುವರಿದಿದೆ.

    ಇದನ್ನೂ ಓದಿ: ತೆಂಡುಲ್ಕರ್ ಪೋಸ್ಟರ್ ಹರಿದು ಹಾಕಿದ್ರು ಬಾಲಿವುಡ್ ನಟಿ ಹುಮಾ ಖುರೇಷಿ, ಮುಂದೇನಾಯ್ತು?

    ಇತ್ತೀಚೆಗೆ ಛತ್ರಶಾಲಾ ಸ್ಟೇಡಿಯಂ ಹೊರಗೆ ಕುಸ್ತಿಪಟುಗಳ ನಡುವೆ ಜಗಳ ಏರ್ಪಟ್ಟಾಗ 23 ವರ್ಷದ ಕುಸ್ತಿಪಟು ಕೊಲೆಯಾಗಿತ್ತು ಮತ್ತು ಇಬ್ಬರಿಗೆ ಗಂಭೀರ ಗಾಯವಾಗಿತ್ತು. ಎಫ್​ಐಆರ್ ದಾಖಲಾಗುತ್ತಿದ್ದಂತೆ ಸುಶೀಲ್ ತಲೆಮರೆಸಿಕೊಂಡಿದ್ದರು. 37 ವರ್ಷದ ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದರೆ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆದ್ದಿದ್ದರು. ಆದರೆ ಈ ಪ್ರಕರಣದ ಬಳಿಕ ಅವರ ವರ್ಚಸ್ಸು ಸಾಕಷ್ಟು ಕುಸಿತ ಕಂಡಿದೆ.

    ಘಟನೆ ನಡೆದ ವೇಳೆ ಸುಶೀಲ್ ಕುಮಾರ್ ಸ್ಥಳದಲ್ಲಿದ್ದರು ಎಂದು ಏಟು ತಿಂದ ಕುಸ್ತಿಪಟುಗಳು ಈಗಾಗಲೆ ದೂರಿದ್ದಾರೆ. ಹೀಗಾಗಿ ಐಪಿಸಿ ಕಾಯ್ದೆಯ ವಿವಿಧ ಸೆಕ್ಷನ್‌ನಡಿ ಸುಶೀಲ್ ಕುಮಾರ್ ಮತ್ತು ಅಜಯ್, ಪ್ರಿನ್ಸ್ ದಲಾಲ್, ಸೋನು ಸಾಗರ್, ಅಮಿತ್ ಮತ್ತು ಇತರರ ವಿರುದ್ಧ ಪ್ರಕರಣದ ದಾಖಲಾಗಿದೆ. ಪ್ರಕರಣದಲ್ಲಿ ಸುಶೀಲ್ ವಿರುದ್ಧ ಲುಕ್‌ಔಟ್ ನೋಟಿಸ್ ಕೂಡ ಜಾರಿಯಾಗಿತ್ತು.

    ಚೆಂಡು ವಿರೂಪ ಬೌಲರ್‌ಗಳಿಗೂ ಗೊತ್ತಿತ್ತು ಎಂದ ಬ್ಯಾಂಕ್ರಾಫ್ಟ್​; ಪ್ರಕರಣ ಮರುತನಿಖೆ?

    ಕರೊನಾ ವಿರುದ್ಧ ಭಾರತದ ಹೋರಾಟವನ್ನು ಬೆಂಬಲಿಸುತ್ತ ಮ್ಯಾಥ್ಯೂ ಹೇಡನ್ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts