More

    12ಕ್ಕೂ ಹೆಚ್ಚು ಭಾಷೆಗಳಲ್ಲಿ ಆರ್​ಆರ್​ಆರ್​ ಬಿಡುಗಡೆ …

    ಮುಂಬೈ: ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಚಿತ್ರದ ಡಿಜಿಟಲ್​ ಮತ್ತು ಸ್ಯಾಟಿಲೈಟ್​ ಹಕ್ಕುಗಳನ್ನು ಜೀ ಸಂಸ್ಥೆಯು 325 ಕೋಟಿ ಕೊಟ್ಟು ಖರೀದಿಸಿದೆ ಎಂಬ ಸುದ್ದಿ ಕಳೆದ ವಾರವೇ ಕೇಳಿಬಂದಿತ್ತು. ಆದರೆ, ಈ ವಿಷಯವಾಗಿ ಜೀ ಸಂಸ್ಥೆಯಾಗಲೀ, ಚಿತ್ರತಂಡದವರಾಗಲೀ ಯಾವುದೇ ಅಧಿಕೃತ ಮಾಹಿತಿಯನ್ನು ಸಹ ನೀಡಿರಲಿಲ್ಲ. ಈಗ ಚಿತ್ರತಂಡದವರಿಂದಲೇ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಡಿಜಿಟಲ್​ ಮತ್ತು ಸ್ಯಾಟಿಲೈಟ್​ ಹಕ್ಕುಗಳನ್ನು ಜೀ ಸಂಸ್ಥೆ ಖರೀದಿಸಿರುವುದು ನಿಜ ಎಂದು ಒಪ್ಪಿಕೊಂಡಿದೆ. ಆದರೆ, ಈ ಡೀಲ್​ ಎಷ್ಟು ಕೋಟಿ ರೂ.ಗಳಿಗೆ ಆಗಿದೆ ಎಂಬ ವಿಷಯವನ್ನು ಚಿತ್ರ ತಂಡ ಬಹಿರಂಗಪಡಿಸುವುದಕ್ಕೆ ಹೋಗಿಲ್ಲ.

    ಇದನ್ನೂ ಓದಿ: ಎಂಜಿಎಂ ಖರೀದಿಸಲು ಒಪ್ಪಿದ ಅಮೇಜಾನ್​ … ರೇಟ್​ ಕೇಳಿದರೆ ಬೆಚ್ಚಿ ಬೀಳ್ತೀರಿ

    ಆರ್​ಆರ್​ಆರ್​ ಚಿತ್ರವು ಭಾರತದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಐದೂ ಭಾಷೆಗಳ ಸ್ಯಾಟಿಲೈಟ್​ ಮತ್ತು ಡಿಜಿಟಲ್​ ಹಕ್ಕುಗಳನ್ನು ವಿವರವನ್ನು ಚಿತ್ರತಂಡ ಘೋಷಿಸಿದೆ. ಓಟಿಟಿ ವಿಷಯದಲ್ಲಿ ಹೇಳುವುದಾದರೆ, ಆರ್​ಆರ್​ಆರ್​ ಚಿತ್ರದ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರಗಳು ಜೀ5ನಲ್ಲಿ ಸ್ಟ್ರೀಮ್​ ಆಗಲಿದೆ. ಇನ್ನು, ಹಿಂದಿ ಅವತರಣಿಕೆಯು ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗಲಿದೆ. ಅದೇ ರೀತಿ, ಸ್ಯಾಟಿಲೈಟ್​ ಹಕ್ಕುಗಳ ವಿಷಯದಲ್ಲೂ ಜೀ ಮತ್ತು ಸ್ಟಾರ್​ ವಾಹಿನಿಗಳಲ್ಲಿ ಈ ಚಿತ್ರದ ಬೇರೆಬೇರೆ ಅವತರಣಿಕೆಗಳು ಪ್ರಸಾರವಾಗಲಿವೆ.

    ವಿಶೇಷವೆಂದರೆ, ಆರ್​ಆರ್​ಆರ್​ ಚಿತ್ರವು ಒಟ್ಟಾರೆ 10ಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುವುದರ ಜತೆಗೆ ಇಂಗ್ಲೀಷ್​, ಪೋರ್ಚುಗೀಸ್​, ಕೊರಿಯನ್​, ಟರ್ಕಿಶ್​ ಮತ್ತು ಸ್ಪಾನಿಶ್​ ಭಾಷೆಗಳಿಗೂ ಚಿತ್ರ ಡಬ್​ ಆಗುತ್ತಿದ್ದು, ಈ ಫಾರಿನ್​ ಭಾಷೆಗಳ ಓಟಿಟಿ ಹಕ್ಕುಗಳನ್ನು ನೆಟ್​ಫ್ಲಿಕ್ಸ್​ ಈಗಾಗಲೇ ಖರೀದಿಸಿದೆ.

    ಇದನ್ನೂ ಓದಿ: ಚಿತ್ರನಟ ಸಂಜಯ್‌ ದತ್‌ಗೆ ಸಿಕ್ಕಿತು ದುಬೈನ ಗೋಲ್ಡನ್‌ ವೀಸಾ- ಟ್ವಿಟರ್‌ನಲ್ಲಿ ಮಾಹಿತಿ

    ಸದ್ಯಕ್ಕೆ 10 ಭಾಷೆಗಳ ಘೋಷಣೆ ಮಾತ್ರ ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಎರಡು ಭಾಷೆಗಳಿಗೆ ಡಬ್​ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರವು ರಷ್ಯನ್​ ಮತ್ತು ಜಾಪನೀಸ್​ ಭಾಷೆಗಳಿಗೂ ಡಬ್​ ಆಗಿ, ಬಿಡುಗಡೆಯಾಗಿತ್ತು. ಚಿತ್ರ ಅಲ್ಲಿ ಸೂಪರ್​ ಹಿಟ್​ ಆದ ಕಾರಣ, ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೂ ಬೇಡಿಕೆ ಬರುತ್ತಿದ್ದು, ಸದ್ಯದಲ್ಲೇ ಆರ್​ಆರ್​ಆರ್​ ಸಹ ರಷ್ಯನ್​ ಮತ್ತು ಜಾಪನೀಸ್​ ಭಾಷೆಗಳಿಗೂ ಡಬ್​ ಆಗಲಿದೆ ಎಂದು ಹೇಳಲಾಗುತ್ತಿದೆ.

    ಸುಖೀ ದಾಂಪತ್ಯದ ಗುಟ್ಟು ಬಿಟ್ಟುಕೊಟ್ಟ ಪ್ರಿಯಾಂಕಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts