More

    ನಾನು ಹಣ ಪಡೆದಿಲ್ಲ, ಆಣೆ ಮಾಡಲು ಧರ್ಮಸ್ಥಳಕ್ಕೆ ಬರುವೆ… ಸಿಎಂ ಸಮ್ಮುಖದಲ್ಲೇ ಮುನಿರತ್ನ ಸವಾಲು

    ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಸಮರದಲ್ಲಿ ಪ್ರಮುಖ ಮೂರು ಪಕ್ಷಗಳು ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿವೆ. ಎಲ್ಲ ಪಕ್ಷಗಳೂ ಅಂತಿಮ ಹಂತದ ಕಸರತ್ತು ನಡೆಸಿವೆ. ಶುಕ್ರವಾರ ಇಡೀ ದಿನ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್​ ಮತ್ತು ನಟಿ ಅಮೂಲ್ಯ ಭರ್ಜರಿ ಪ್ರಚಾರ ನಡೆಸಿದ್ದರು. ಶನಿವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕ್ಷೇತ್ರ ಸುತ್ತಾಡಿ ಮುನಿರತ್ನ ಪರ ಮತಯಾಚಿಸಿದರು.

    ಆರ್ ಆರ್ ನಗರ ಕ್ಷೇತ್ರದ 9 ವಾರ್ಡ್​ಗಳ ಪೈಕಿ 6 ವಾರ್ಡ್​ನ ಗಲ್ಲಿಗಲ್ಲಿ ಸುತ್ತಿ ಮುನಿರತ್ನ ಪರ ಸಿಎಂ ಹಾಗೂ ಸಚಿವರ ದಂಡು ಮತಯಾಚಿಸಿತು. ಪ್ರತಿ ವಾರ್ಡ್​ನಲ್ಲೂ ಸಿಎಂ ಭಾಷಣ ಮಾಡಿ ಕ್ಷೇತ್ರದ ಅಭಿವೃದ್ಧಿಯ ಕನಸು ಬಿಚ್ಚಿಟ್ಟರು. ಇನ್ನು, ಉಪ ಚುನಾವಣಾ ಕದನದ ನಂತರ ಸಂಪುಟ ಸರ್ಜರಿಯ ಸುಳಿವು ನೀಡಿದ ಸಿಎಂ, ಆರ್ ಆರ್ ನಗರದಲ್ಲಿ ಮುನಿರತ್ನ ಗೆದ್ದ ತಕ್ಷಣ ಮಂತ್ರಿ ಆಗ್ತಾರೆ ಎಂದು ಸ್ಪಷ್ಟ ಭರವಸೆ ನೀಡಿದರು.

    ನಾನು ಹಣ ಪಡೆದಿಲ್ಲ, ಆಣೆ ಮಾಡಲು ಧರ್ಮಸ್ಥಳಕ್ಕೆ ಬರುವೆ... ಸಿಎಂ ಸಮ್ಮುಖದಲ್ಲೇ ಮುನಿರತ್ನ ಸವಾಲುಚುನಾವಣಾ ಪ್ರಚಾರದ ವೇಳೆ ಮುನಿರತ್ನಗೆ ಸಚಿವ ಸ್ಥಾನ ಪಕ್ಕಾ ಎಂಬುದನ್ನು ಸಿಎಂ ಬಹಿರಂಗವಾಗಿ ಸ್ಪಷ್ಟಪಡಿಸಿದರು. ಹಾಗೆಯೇ ಆಪರೇಷನ್ ಕಮಲ ವೇಳೆ ನಾನು ಹಣ ಪಡೆದಿಲ್ಲ. ಎಲ್ಲಿಬೇಕಾದರೂ ಪ್ರಮಾಣ ಮಾಡುತ್ತೇನೆ ಎಂದು ವಿರೋಧಿಗಳಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಸವಾಲು ಎಸೆದರು.

    ಆಪರೇಷನ್ ಕಮಲದಲ್ಲಿ ಮುನಿರತ್ನ ಹಣ ಪಡೆದಿದ್ದಾರೆ. ಈ ಹಣವನ್ನು ಚುನಾವಣೆ ಗೆಲ್ಲಲು ಬಳಸುತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಆರೋಪಕ್ಕೆ ತಿರುಗೇಟು ನೀಡಿದ ಮುನಿರತ್ನ, ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿತ್ತು. ಈ ಕಾರಣಕ್ಕಾಗಿ ಬಿಜೆಪಿಗೆ ಬಂದೆ. ನಾನು ಪಕ್ಷಾಂತರ ಮಾಡುವಾಗ ಹಣ ಪಡೆದಿಲ್ಲ. ಈ ಬಗ್ಗೆ ಧರ್ಮಸ್ಥಳ ಸೇರಿದಂತೆ ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ ಎಂದರು. (ದಿಗ್ವಿಜಯ ನ್ಯೂಸ್)

    ‘ನನ್ನ ಬಾಯಿಯಿಂದ ಬರೋದು ಅಕ್ಷರಶಃ ಸತ್ಯವಾಗುತ್ತೆ…’

    ನಾನು ಮಾಜಿ ಡಿಸಿಎಂ ಅಣ್ಣನ ಮಗಳು… ಮದುವೆ ಆಗದಿದ್ರೆ ರೇಪ್​ ಕೇಸ್​ ಹಾಕ್ತೀನಿ: ಬೆಚ್ಚಿಬೀಳಿಸುತ್ತೆ ಆಕೆಯ ಹಿಸ್ಟರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts