ಮುನಿರತ್ನಗೆ ಕೊನೆಗೂ ಘೋಷಣೆಯಾಯ್ತು ಬಿಜೆಪಿ ಟಿಕೆಟ್!

Munirathna
Published on

ಬೆಂಗಳೂರು: ಹಲವು ದಿನಗಳ ಕುತೂಹಲದ ನಿರೀಕ್ಷೆಯ ನಂತರ ಮುನಿರತ್ನ ಅವರಿಗೆ ಕೊನೆಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ.

ಅವರ ವಿರುದ್ಧ ಬಿಜೆಪಿಯವರೇ ಆದ ತುಳಸಿ ಮುನಿರಾಜು ಅವರು ಕಳೆದ ಚುನಾವಣೆಯ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಮಧ್ಯಾಹ್ನ ವಜಾ ಮಾಡಿದಾಗಲೇ ಮುನಿರತ್ನ ಅವರಿಗೆ ಟಿಕೆಟ್ ಖಚಿತ ಎಂಬುದು ದೃಢಪಟ್ಟಿತ್ತು. ಇದೀಗ ಸಂಜೆ ಬಿಜೆಪಿಯ ಕೇಂದ್ರ ಕಚೇರಿ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಮುನಿರತ್ನ ಅವರಿಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ‘ನಕಲಿ ನಕಲಿ ಎಂಬುದನ್ನು ಕೇಳಿ ಕೇಳಿ ಬಹಳ ನೊಂದುಕೊಂಡಿದ್ದೆ- ಈಗ ಕಳಂಕ ಮುಕ್ತ ನಾನು’!

ಉತ್ತರ ಪ್ರದೇಶದ ಆರು, ನಾಗಾಲ್ಯಾಂಡ್‌ನ ಒಂದು ಮತ್ತು ಕರ್ನಾಟಕದ ಎರಡು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಒಟ್ಟಿಗೇ ಘೋಷಿಸಲಾಗಿದ್ದು, ಅದರಲ್ಲಿ ರಾಜರಾಜೇಶ್ವರಿ ನಗರ ಮತ್ತು ಶಿರಾ ಅಭ್ಯರ್ಥಿಗಳ ಹೆಸರುಗಳಿವೆ. ಶಿರಾ ಉಪಚುನಾವಣೆಗೆ ಡಾ. ರಾಜೇಶ್‌ಗೌಡ ಅಭ್ಯರ್ಥಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net