More

    ‘ನಕಲಿ ನಕಲಿ ಎಂಬುದನ್ನು ಕೇಳಿ ಕೇಳಿ ಬಹಳ ನೊಂದುಕೊಂಡಿದ್ದೆ- ಈಗ ಕಳಂಕ ಮುಕ್ತ ನಾನು’!

    ಬೆಂಗಳೂರು: ನಕಲಿ ವೋಟರ್ ಗುರುತು ಪತ್ರಗಳ ಆಪಾದನೆಯ ಕಳಂಕದಿಂದ ಮುಕ್ತನಾಗಿರುವೆ. ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿರುವೆ. ಆರ್ ಆರ್ ನಗರ ಟಿಕೆಟ್ ಕೊಡುವ ವಿಚಾರ ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟದ್ದು. ತುಳಸಿ ಮುನಿರಾಜು ಗೌಡರ ಅರ್ಜಿ ವಜಾಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಗ್ಗೆ ಮಾಜಿ ಶಾಸಕ ಮುನಿರತ್ನ ನಾಯ್ಡು ಸುದ್ದಿಗಾರರಿಗೆ ಮಂಗಳವಾರ ನೀಡಿದ ಪ್ರತಿಕ್ರಿಯೆ.

    ಸತ್ಯ ಗೆದ್ದಿದೆ, ನ್ಯಾಯದ ಪರವಾಗಿ ತೀರ್ಪು ಪ್ರಕಟವಾಗಿದೆ. ಸುಳ್ಳು ಆರೋಪಗಳಿಂದ ಬಹಳ ನೊಂದಿದ್ದೆ. ಆದರೆ, ಸುಪ್ರೀಂ ಕೋರ್ಟ್ ಆದೇಶ ಹೊರಬರುವ ತನಕ ತಾಳ್ಮೆಯಿಂದ ಎಲ್ಲವನ್ನು ಸಹಿಸಿಕೊಂಡಿರುವೆ. ಈ ಸಹನೆಯೇ ನನ್ನನ್ನು ಕಳಂಕದಿಂದ ಮುಕ್ತಗೊಳಿಸಿ, ನಿರಾಳವಾಗುವಂತೆ ಮಾಡಿದೆ, ಸತ್ಯವೇನೆಂಬುದು ಬಹಿರಂಗವಾಗಿದೆ‌.

    ಇದನ್ನೂ ಓದಿ: ಖಾತೆ ಬದಲಾವಣೆ ವಿಚಾರ: ಶ್ರೀರಾಮುಲುಗೆ ಸಿಎಂ ಭೇಟಿಗೆ ಕೊನೆಗೂ ಸಿಕ್ತು ಅವಕಾಶ

    ಯಾರ ಬಗ್ಗೆ ಮಾತಾಡಲ್ಲ
    ತುಳಸಿ ಮುನಿರಾಜು ಗೌಡ ಪಕ್ಷದ ಹಳೆಯ ಕಾರ್ಯಕರ್ತ ಅವರ ಬಗ್ಗೆ ಏನನ್ನು ಮಾತನಾಡುವುದಿಲ್ಲ. ಆರ್ ಆರ್ ನಗರ ಮರು ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬಯಸಿರುವೆ. ಪಕ್ಷದ ಸಾಮಾನ್ಯ ಕಾರ್ಯಕರ್ತ ನಾನು. ಮುಂದಿನದು ವರಿಷ್ಠರ ನಿರ್ಧಾರಕ್ಕೆ ಬಿಟ್ಟದ್ದು ಎಂದು ಮುನಿರತ್ನ ಅತ್ಯಂತ ಆತ್ಮ ವಿಶ್ವಾಸದಿಂದ ನುಡಿದರು.

    ಇದನ್ನೂ ಓದಿ: ಸರ್ಕಾರಿ ಸಂಪನ್ಮೂಲ ದುರುಪಯೋಗದ ಆರೋಪ: ಇಮ್ರಾನ್ ಖಾನ್​ಗೆ​ ಸುಪ್ರೀಂ ನೋಟಿಸ್ !

    ಕುಸುಮಾ ನನ್ನ ಮಗಳಿದ್ದಂತೆ
    ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಬಗ್ಗೆ ಏನನ್ನೂ ಹೇಳಲ್ಲ. ನನ್ನ ಇಬ್ಬರು ಹೆಣ್ಣು ಮಕ್ಕಳ ಜತೆಗೆ ಆಕೆಯೂ ಒಬ್ಬರು. ಸ್ಪರ್ಧಿಸಲು ಎಲ್ಲರಿಗೂ ಅವಕಾಶವಿದೆ. ಅದರಂತೆ ಅವರೂ ಸ್ಪರ್ಧಿಸಿದ್ದಾರೆ. ಡಿ ಕೆ ಬ್ರದರ್ಸ್ ಜಾತಿ ಕಾರ್ಡ್ ಇನ್ನೊಂದು ಮಗದೊಂದು ಏನೇ ಇರಲಿ, ಬೆಂಗಳೂರಿಗೆ ಜಾತಿ ಎಂಬುದಿಲ್ಲ. ಅಭಿವೃದ್ಧಿಯೇ ಗೆಲುವಿನ ಮಾನದಂಡ. ಕ್ಷೇತ್ರದ ಅಧಿದೇವತೆ ರಾಜರಾಜೇಶ್ವರಿ ಕೃಪೆಯಿಂದ ಎಲ್ಲ ಸಂಕಷ್ಟಗಳು ಬಗೆಹರಿದಿವೆ. ಕ್ಷೇತ್ರದ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮತದಾರಪ್ರಭು ಗುರುತಿಸುವ ವಿಶ್ವಾಸವಿದೆ ಎಂದು ಮುನಿರತ್ನ ಹೇಳಿದರು.

    ಮುನಿರತ್ನಗೆ ಬಿಗ್​ ರಿಲೀಫ್: ತುಳಸಿ ಮುನಿರಾಜು ಅವರ ಅರ್ಜಿ ವಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts