More

    ತಾಯಿ ಕುರಿತು ಕಾಂಗ್ರೆಸ್​ ನಾಯಕರ ಹೇಳಿಕೆ ನೆನೆದು ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮುನಿರತ್ನ

    ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯ ಕಣ ದಿನೇದಿನೆ ರಂಗೇರುತ್ತಿದ್ದು, ನಾಯಕರ ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ. ಪ್ರತಿಪಕ್ಷದ ನಾಯಕರು ತಾಯಿ ಬಗ್ಗೆ ಮಾತನಾಡಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಕಣ್ಣೀರಾಕಿದ್ದಾರೆ.

    ಚುನಾವಣಾ ಪ್ರಚಾರದ ನಡುವೆ ಮಾಧ್ಯಮದವರೊಂದಿಗೆ ಮಾತನಾಡಿದ ಮುನಿರತ್ನರವರು ನಿನ್ನೆ ಸಂಜೆ ಯಶವಂತಪುರದ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯನವರ ಭಾಷಣಕ್ಕೆ ಅಡ್ಡಿಪಡಿಸಿದ ವಿಚಾರಕ್ಕೆ ಸ್ಪಷ್ಟನೆ ನೀಡಿದರು.

    ದೇಶದ ಎಲ್ಲಾ ಕಡೆ ಒಂದು ಪಕ್ಷದ ನಾಯಕರು ಹೋದಾಗ ಪ್ರತಿಪಕ್ಷದವರು ತಮ್ಮ ನಾಯಕರ ಹೆಸರನ್ನು ಹೇಳಿ ಜಿಂದಾಬಾದ್ ಕೂಗುವುದು ಸಾಮಾನ್ಯ. ಹಿಂದೆ ನಾನು ಮತ್ತು ಸಿದ್ದರಾಮಯ್ಯ ಒಂದು ವಾಹನದಲ್ಲಿ ಇದ್ದಾಗ, ಬಿಜೆಪಿ ಯುವ ಮೋರ್ಚಾದವರು ನಮ್ಮ ಮುಂದೆ ಬಂದು ಮೋದಿ ಜಿಂದಾಬಾದ್ ಅಂತಾ ಕೂಗಿದ್ದರು. ಸ್ವಲ್ಪ ಹೊತ್ತು ಕೂಗಿಬಿಡಲಿ ಬಿಡ್ರಣ್ಣಾ ಎಂದು ಎಂದು ನಾನೇ ಸಮಾಧಾನ ಮಾಡಿದ್ದೆ ಎಂದು ಹೇಳಿದರು.

    ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್​ ತಂದೆ ವಿಶ್ವನಾಥ್​ ಬಂಧನ..!

    ಮುನಿರತ್ನ ಅವರು ತಮ್ಮ ತಾಯಿಯನ್ನು ‌ಮಾರಾಟ ಮಾಡಿಬಿಟ್ಟಿದ್ದಾರೆ ಎಂದು ಒಬ್ಬರು ಮಾತನಾಡುತ್ತಾರೆ. ಈ ರೀತಿ ಮಾತಾಡಬಹುದಾ? ಇಂತಹ ಮಾತನ್ನಾಡಿದ್ದಕ್ಕೆ ನಮ್ಮ ಕಾರ್ಯಕರ್ತರು ಧರಣಿ‌ ಮಾಡಿದ್ದಾರೆ. ಆದರೆ, ಯಾರ ಮೇಲೂ ಹಲ್ಲೆ ಮಾಡಿಲ್ಲ. ಆ ಪದವನ್ನು ವಾಪಸ್ ಪಡೆಯಬೇಕು ಎಂದು ಧರಣಿ ಮಾಡಿದ್ದಾರಷ್ಟೇ ಎಂದು ತಿಳಿಸಿದರು.

    ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರಿಗೆ ಹೇಳುವುದೇನೆಂದರೆ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲು ನೀವು ಸ್ವತಂತ್ರರಿದ್ದೀರಿ. ತೀರಿ ಹೋಗಿರುವ ನನ್ನ ತಾಯಿಯನ್ನು ಮಾರಾಟ ಮಾಡಿದ್ದೇನೆಂದು ಹೇಳ್ತೀರಾ, ನನ್ನ ತಾಯಿ ತೀರಿ ಹೋಗಿ ಇಪ್ಪತ್ತೈದು ವರ್ಷ ಆಗಿದೆ. ಶಾಸಕನಾಗಿ ಹತ್ತು ವರ್ಷ ಆಗಿದೆ. ಇಪ್ಪತ್ತೈದು ವರ್ಷಗಳ ಹಿಂದೆ ತೀರಿ ಹೋಗಿರುವ ತಾಯಿಯನ್ನು ಮಾರಾಟ ಮಾಡಿದ್ದೇನೆ ಎಂದು ಹೇಳುವುದು‌ ನಿಮಗೆ ಶೋಭೆ ತರುತ್ತಾ? ನೀವು ಮಾತಾಡ್ತಿರೋದು ಒಳ್ಳೆಯ ಮಾತುಗಳಾ? ಜನ್ಮ ಕೊಟ್ಟ ತಾಯಿ ಬಗ್ಗೆ ಮಾತಾಡ್ತಿರಲ್ಲಾ ಸರಿನಾ? ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ನನ್ನ ಬಗ್ಗೆ ಮಾತಾಡಿ, ಬೇಡ ಅನ್ನಲ್ಲ ಆದರೆ, ನಮ್ಮ ತಾಯಿಯ ಬಗ್ಗೆ ಮಾತನಾಡಬೇಡಿ ಎಂದರು. ಸತ್ತು ಹೋಗಿರುವವರನ್ನು ಎಲ್ಲಿಂದ ಮಾರಾಟ ಮಾಡಲಿ ನಾನು? ಎಲ್ಲಿಂದ ತರಲಿ ನಾನು? ಎಂದು ಪ್ರಶ್ನಿಸಿದರು. (ದಿಗ್ವಿಜಯ ನ್ಯೂಸ್​)

    ಸೌದಿಯಿಂದ ಭಾರತಕ್ಕೆ ಅಬ್ಬಾ ಎನ್ನುವಷ್ಟು ಭರ್ಜರಿ ಗಿಫ್ಟ್​​… ನಲುಗಿ ಹೋದ ಪಾಕಿಸ್ತಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts