More

    ಆರ್.ಆರ್.ನಗರದಲ್ಲಿ ರಾಯಲ್ ಮಾರ್ಟ್: ಮನೆಬಳಕೆ ವಸ್ತುಗಳು, ಹಣ್ಣು-ತರಕಾರಿಗೆ 12ರವರೆಗೆ ಸಿಗಲಿದೆ ರಿಯಾಯಿತಿ

    ಬೆಂಗಳೂರು: ನಗರದ ಪ್ರತಿಷ್ಠಿತ ಮಾಲ್‌ಗಳಲ್ಲಿ ಒಂದಾಗಿರುವ ‘ರಾಯಲ್ ಮಾರ್ಟ್’ ತನ್ನ 30ನೇ ಶಾಖೆಯನ್ನು ರಾಜರಾಜೇಶ್ವರಿ ನಗರದಲ್ಲಿ (ಹಲಗೆ ವಡೇರಹಳ್ಳಿ) ಆರಂಭಿಸಿದೆ. ನೂತನವಾಗಿ ಆರಂಭಿಸಿರುವ ಮಾಲ್‌ಗೆ ಭಾನುವಾರ ಚಾಲನೆ ನೀಡಲಾಯಿತು.

    ಮಾಲ್‌ನ ವ್ಯವಸ್ಥಾಪಕ ನಿರ್ದೇಶಕ ನಸೀರ್, ನಿರ್ದೇಶಕರಾದ ಸಲೀಂ, ನೌಫಲ್, ಕಟ್ಟಡ ಮಾಲೀಕರಾದ ಡಾ. ಸುರೇಶ್‌ ಹಾಗೂ ಸಮತಾ ಸುರೇಶ್ ಅವರು ಮಾಲ್‌ನ ವಹಿವಾಟಿಗೆ ಚಾಲನೆ ನೀಡಿದರು.

    ಇದನ್ನೂ ಓದಿ: ಕಮಿಷನ್​ ಕೊಡ್ತೀವಿ, ಮಾಂಗಲ್ಯ ಮರಳಿ ಕೊಡ್ತೀರಾ? ಬಿಜೆಪಿ ನಾಯಕರಿಗೆ ಸುರ್ಜೆವಾಲಾ ಪ್ರಶ್ನೆ  

    ಬಳಿಕ ಮಾತನಾಡಿದ ಸಲೀಂ, ರಾಯಲ್ ಮಾಲ್ ಬೇರೆ ಮಾಲ್‌ಗಳಿಗಿಂತ ವಿಭಿನ್ನವಾಗಿದೆ ಮತ್ತು ಕಲೆಕ್ಷನ್‌ಗಳಲ್ಲಿಯೂ ಜಾಸ್ತಿ ಇದೆ. ಬೆಲೆಯಲ್ಲಿಯೂ ಇತರೆ ಮಾಲ್ ಗಳಿಗೆ ಹೋಲಿಸಿಕೊಂಡರೆ ಕಡಿಮೆ ಇದೆ. ಗ್ರಾಹಕರ ಸ್ನೇಹಿಯಾಗಿದೆ ಎಂದು ಹೇಳಿದರು. ಕೆಲವು ಮಾಲ್‌ಗಳು ಹಣ್ಣು-ತರಕಾರಿಗೆ ಮಾತ್ರ ಸೀಮಿತವಾಗಿದೆ. ಆದರೆ ನಮ್ಮಲ್ಲಿ ಹಣ್ಣು- ತರಕಾರಿ, ದವಸ-ಧಾನ್ಯಗಳು, ಟೆಕ್ಸ್‌ಟೈಲ್ಸ್ ಸೇರಿ ಎಲ್ಲ ರೀತಿಯ ವಸ್ತುಗಳು ದೊರೆಯಲಿವೆ. ಒಂದೇ ಸೂರಿನಡಿ ಮನೆಬಳಕೆಯ ಪದಾರ್ಥಗಳು ದೊರೆಯಲಿವೆ ಎಂದು ಮಾಹಿತಿ ನೀಡಿದರು.

    100 ಮಾಲ್ ಗುರಿ: 2010ರಲ್ಲಿ ಪದ್ಮನಾಭನಗರದಲ್ಲಿ ರಾಯಲ್ ಮಾಲ್ ಆರಂಭಿಸಲಾಯಿತು. ಆದಾದ ಬಳಿಕ ನಗರದ ವಿವಿಧೆಡೆ ಆರಂಭಿಸಲಾಗಿದೆ. ಇದು 30ನೇ ಶಾಖೆಯಾಗಿದ್ದು, 100 ಶಾಖೆಯನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

    ಕಟ್ಟಡ ಮಾಲೀಕರಾದ ಸಮತಾ ಮಾತನಾಡಿ, 16 ಸಾವಿರ ಚದರ ಅಡಿ ವಿಸ್ತೀರ್ಣದ 3 ಅಂತಸ್ತಿನ ಕಟ್ಟಡವಾಗಿದೆ. ಗ್ರಾಹಕರು ಮಾಲ್‌ಗೆ ಬರಲು ಸಾರಿಗೆ ಸೇರಿ ಇತರ ಮೂಲಸೌಕರ್ಯಗಳು ದೊರೆಯಲಿವೆ. ರಾಜರಾಜೇಶ್ವರಿ ನಗರದಲ್ಲಿ ಹೊಸ ರೀತಿಯ ಮಾಲ್ ಆರಂಭವಾಗುತ್ತಿರುವುದು ಖುಷಿಯ ವಿಚಾರವಾಗಿದೆ ಎಂದರು.

    ಇದನ್ನೂ ಓದಿ: ಚಪ್ಪಲಿ ಬಿಡುವ ವಿಚಾರಕ್ಕೆ ಜಗಳ; ಪ್ರಾಣ ಕಳೆದುಕೊಂಡ ನೆರೆ ಮನೆಯ ವ್ಯಕ್ತಿ

    12 ರೂ.ಗೆ ಟೊಮ್ಯಾಟೊ, ಈರುಳ್ಳಿ, ಆಲೂಗಡ್ಡೆ
    ಮಾಲ್ ಹೊಸದಾಗಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾ.12ರವರೆಗೆ ಟೊಮ್ಯಾಟೊ, ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಕೆ.ಜಿ.ಗೆ ಕೇವಲ 12 ರೂ.ಗಳಿಗೆ ನೀಡಲಾಗುತ್ತಿದೆ. ಇದೇ ರೀತಿ ಹತ್ತಾರು ಮನೆಬಳಕೆ ವಸ್ತುಗಳಿಗೆ ರಿಯಾಯಿತಿ ನೀಡಲಾಗಿದೆ ಎಂದು ಮಾಲ್‌ನ ವ್ಯವಸ್ಥಾಪಕ ನಿರ್ದೇಶಕ ನಸೀರ್ ತಿಳಿಸಿದರು.

    ಶೂಟಿಂಗ್ ವೇಳೆ ನಟ ಅಮಿತಾಭ್ ಬಚ್ಚನ್​ಗೆ ಗಾಯ; ಆಸ್ಪತ್ರೆಗೆ ದಾಖಲು

    ಮಹಾರಾಷ್ಟ್ರದ ಹೆದ್ದಾರಿಗೆ 200 ಮೀಟರ್ ವೆರೆಗೆ ಬಿದಿರಿನ ತಡೆಗೋಡೆ ನಿರ್ಮಾಣ

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts