More

    ಮಹಾರಾಷ್ಟ್ರದ ಹೆದ್ದಾರಿಗೆ 200 ಮೀಟರ್ ವೆರೆಗೆ ಬಿದಿರಿನ ತಡೆಗೋಡೆ ನಿರ್ಮಾಣ

    ಮುಂಬೈ: ಅಪಘಾತದ ಭೀಕರತೆಯನ್ನು ತಡೆಯಲು ಹೆದ್ದಾರಿ ಬದಿ ತಡೆಗೋಡೆಗಳಿಗೆ ಬಲಿಷ್ಠವಾದ ಸ್ಟೀಲ್, ಅಲ್ಯುಮಿನಿಯಂ, ಸಿಮೆಂಟ್ ಬಳಸಲಾಗುತ್ತದೆ. ಆದರೆ ಇದೆ ಮೊದಲ ಬಾರಿಗೆ ಬಿದಿರಿನಿಂದ ಹೆದ್ದಾರಿ ತಡೆಗೋಡೆ ನಿರ್ಮಿಸಲಾಗಿದೆ.

    ಮಹಾರಾಷ್ಟ್ರದ ಚಂದ್ರಾಪುರ ಹಾಗೂ ಯಾವತ್ಮಲ್ ಜಿಲ್ಲೆಗಳನ್ನು ಕೂಡಿಸುವ ವಾನಿ–ವರೋರಾ ರಾಷ್ಟ್ರೀಯಹೆದ್ದಾರಿಯಲ್ಲಿ ಬಿದಿರಿನಿಂದ ನಿರ್ಮಿಸಲಾದ 200 ಮೀಟರ್ ವರೆಗಿನ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಆತ್ಮ ನಿರ್ಭರ ಭಾರತ್ ಪರಿಕಲ್ಪನೆಯಡಿ ಈ ಬಿದಿರಿನ ತಡೆಗೋಡೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದೆ.

    ಇದನ್ನೂ ಓದಿ: ಕೆಮ್ಮಿನ ಸಿರಪ್ ಕುಡಿದು ಮಕ್ಕಳು ನಿಧನ; ಮಹಾರಾಷ್ಟ್ರದ 6 ಕಂಪನಿಗಳ ಲೈಸೆನ್ಸ್​ ರದ್ದು!

    ಟ್ವೀಟ್ ಮಾಡಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ‘ಇದೊಂದು ಗುರುತರ ಸಾಧನೆ. ಬಿದಿರಿನ ತಡೆಗೋಡೆಯು ಕಬ್ಬಿಣ ಅಥವಾ ಇನ್ನಾವುದೇ ವಸ್ತುವಿನ ಪುನರ್ ಬಳಕೆಗಿಂತ ಎರಡು ಪಟ್ಟು ಪುನರ್ ಬಳಕೆ ಶಕ್ತಿಯನ್ನು ಹೊಂದಿದೆ. ಇದೊಂದು ಪರಿಸರ ಸ್ನೇಹಿ ನಡೆಯಾಗಿದ್ದು, ಸ್ಟೀಲ್‌ ತಡೆಗೋಡೆಗೆ ಇದು ಸಂಪೂರ್ಣ ಪರ್ಯಾಯವಾಗಬಲ್ಲದು ಎಂದು ತಿಳಿಸಿದ್ದಾರೆ.

    ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ತರಗತಿಯಲ್ಲೇ ಪ್ರಾಣ ಬಿಟ್ಟ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts