More

    ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ತರಗತಿಯಲ್ಲೇ ಪ್ರಾಣ ಬಿಟ್ಟ ಶಿಕ್ಷಕ

    ಆಂಧ್ರಪ್ರದೇಶ: ಕೆಲವು ವರ್ಷಗಳಿಂದ ಹೃದಯಾಘಾತದಿಂದ ಪ್ರಾಣ ಕಳೆದು ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಶಿಕ್ಷಕರೊಬ್ಬರು ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಪಿ. ವೀರಬಾಬು (45) ಮೃತ. ಇವರು ತರಗತಿಯಲ್ಲಿದ್ದ ವೇಳೆ ಹೃದಯಾಘಾತದಿಂದ ಕುಸಿದು ಕುರ್ಚಿಯಲ್ಲಿ ಕುಳಿತು ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ವೆಟಪಾಲೆಂ ಮಂಡಲದ ವಕವರಿ ಪಾಲೆಂ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.

    ಇದನ್ನೂ ಓದಿ: ಪತಿಯ ಗುಪ್ತಾಂಗವನ್ನು ಕೊಡಲಿಯಿಂದ ಕತ್ತರಿಸಿ ಮುಗಿಸಿದ 5ನೇ ಹೆಂಡತಿ ಅರೆಸ್ಟ್

    ಶಿಕ್ಷಕರು ಏಕಾಏಕಿ ಕುಸಿದು ಬಿದದ್ದನ್ನು ನೋಡಿದ ಮಕ್ಕಳು ಶಾಲೆಯ ಇತರ ಶಿಕ್ಷಕರಿಗೆ ಮಾಹಿತಿ ನೀಡಿದರು. ಶಿಕ್ಷಕರು 108 ಆಂಬ್ಯುಲೆನ್ಸ್ ಗೆ ಕರೆ ಮಾಡಿದರು. ಆಂಬ್ಯುಲೆನ್ಸ್ ನಲ್ಲಿದ್ದ ಹೆಲ್ತ್ ಕೇರ್ ಉದ್ಯೋಗಿಯೊಬ್ಬರು ಶಿಕ್ಷಕರ ನಾಡಿಮಿಡಿತವನ್ನು ಪರಿಶೀಲಿಸಿದ್ದು, ಆದರೆ ಅವರು ಅದಾಗಲೇ ಮೃತಪಟ್ಟಿದ್ದರು. ಈ ಘಟನೆ ಮಕ್ಕಳನ್ನು ಬೆಚ್ಚಿ ಬೀಳಿಸಿದೆ. ಶಿಕ್ಷಕರ ಸಾವಿನಿಂದ ಶಾಲಾ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಹಠಾತ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ ಘಟನೆಗಳ ಸರಣಿ ತೆಲುಗು ರಾಜ್ಯಗಳಲ್ಲಿ ಮುಂದುವರೆದಿದೆ.

    ಪಾತ್ರೆ ತೊಳೆಯುತ್ತಿರುವಾಗ ಮೈ ಮೇಲೆ ಎಗರಿದ ಕೋತಿಗಳ ಹಿಂಡು; 70 ವರ್ಷದ ವೃದ್ಧೆ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts