More

    ಫುಟ್ಬಾಲ್ ಸ್ಟೇಡಿಯಂನಲ್ಲಿ ರೌಡಿ ಶೀಟರ್ ಹತ್ಯೆ ಪ್ರಕರಣ: ಸಿಸಿಟಿವಿಯಲ್ಲಿ ಸೆರೆಯಾಯ್ತು ಮಹತ್ವದ ಸಾಕ್ಷಿ…

    ಬೆಂಗಳೂರು: ಫುಟ್​ಬಾಲ್​ ಆಟವಾಡಲು ಬಂದಿದ್ದ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಕೊಠಡಿ ಬಾಗಿಲು ಮುರಿದು ಒಳನುಗ್ಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಯಿಂದ ಮಹತ್ವದ ಸಾಕ್ಷಿ ಲಭ್ಯವಾಗಿದೆ.

    ಫುಟ್ ಬಾಲ್ ಸ್ಟೇಡಿಯಂನಲ್ಲಿ ರೌಡಿಶೀಟರ್ ಭೀಕರ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಸಿಸಿಟಿವಿ ದೃಶ್ಯದಿಂದ ಮಾಹಿತಿ ಲಭ್ಯವಾಗಿದೆ. ದೃಶ್ಯಾವಳಿಯಲ್ಲಿ ಐದು ಜನ ಹಂತಕರು ಲಾಂಗ್-ಮಚ್ಚುಗಳನ್ನು ಹಿಡಿದು ನುಗ್ಗುತ್ತಿರುವ ದೃಶ್ಯ ಸೆರೆಯಾಗಿದೆ.

    ಪ್ರಕರಣದ ಹಿನ್ನೆಲೆ:

    ಕಮಿಷನರೇಟ್ ರಸ್ತೆ ಶಾಂತಲನಗರದಲ್ಲಿ ಇರುವ ರಾಜ್ಯ ಫುಟ್‌ಬಾಲ್ ಅಸೋಸಿಯೇಷನ್ (ಕೆಎಸ್‌ಎಫ್​ಎ) ಆವರಣದಲ್ಲಿ ಭಾನುವಾರ ಮಧ್ಯಾಹ್ನ 4 ಗಂಟೆಯಲ್ಲಿ ಈ ಕೃತ್ಯ ನಡೆದಿತ್ತು. ಪುಲಿಕೇಶಿನಗರದ ಅರವಿಂದ್ ಅಲಿಯಾಸ್ ಲೀ (30) ಮೃತಪಟ್ಟ ರೌಡಿ. ಹಳೇ ವೈಷಮ್ಯಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಐದಾರು ಮಂದಿಯ ಗ್ಯಾಂಗ್ ದಾಳಿ ನಡೆಸಿರುವುದು ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ.

    ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಅರವಿಂದ್ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು. ಅಲ್ಲದೆ, ಭಾರತೀನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗೆ ಜಾಮೀನು ಪಡೆದು ಹೊರಬಂದ ಅರವಿಂದ್, ಫುಟ್‌ಬಾಲ್ ತಂಡವೊಂದರ ವ್ಯವಸ್ಥಾಪಕನಾಗಿದ್ದ.

    ಫುಟ್‌ಬಾಲ್ ಸ್ಟೇಡಿಯಮ್​ನಲ್ಲಿ ರೌಡಿಯ ಚೆಂಡಾಡಿ ಕೊಂದರು!; ಕೆಎಸ್‌ಎಫ್​​ಎ ರೆಫ್ರಿ ಕೊಠಡಿಯಲ್ಲಿ ಅಡಗಿದ್ದರೂ ಬಿಡದ ಪುಂಡರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts