More

    ಉತ್ತರಕಾಶಿ ಸುರಂಗದಲ್ಲಿನ ಕಾರ್ಮಿಕರ ಹೊರತರಲು ಬಂದವು 2 ರೋಬೋಟ್ – ದಕ್ಷ್ ಸಹೋದರರ ಕಾರ್ಯವೈಖರಿ ಹೇಗಿರಲಿದೆ?

    ವಾರಣಾಸಿ: ಉತ್ತರಾಖಂಡದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಎರಡು ರಿಮೋಟ್ ಆಪರೇಟೆಡ್ ವಾಹನ(ರೋಬೋಟ್​)ಗಳನ್ನು ಕಳುಹಿಸಿದೆ. ಅತ್ಯಂತ ಸವಾಲಿನ ಪರಿಸ್ಥಿತಿಗಳಿಂದಾಗಿ 11 ದಿನದಿಂದ ಮಂದ ಗತಿಯಲ್ಲಿ ಕಾರ್ಯಾಚರಣೆ ಸಾಗುತ್ತಿರುವುದರಿಂದ ಈ ವಾಹನಗಳನ್ನು ಕಳುಹಿಸಿದೆ.

    ಇದನ್ನೂ ಓದಿ: ಮೋದಿಜಿಗೆ ಯೋಗಾ ಟೀಚರ್​ ಆಗ್ತಿನೆಂದ ಖ್ಯಾತ ನಟಿ; ತಮಾಷೆಯಾಗಿ ಹೇಳಿ ಸಂಕಷ್ಟಕ್ಕೆ ಸಿಲುಕಿದ್ಲು
    ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿದ್ದು, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ.

    ಅಂದಿನಿಂದ ಕಾರ್ಮಿಕರನ್ನು ಹೊರತರುವ ಕಾರ್ಯಾಚರಣೆಯನ್ನು ಉತ್ತರಕಾಶಿ ಸಿಲ್ಕ್ಯಾರಾ ಬಳಿ ನಡೆಸಲಾಗುತ್ತಿದೆ. ಆದರೆ ಭೂವಿನ್ಯಾಸ ಮತ್ತು ಮಣ್ಣಿನ ಸ್ವಭಾವದಿಂದಾಗಿ, ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಿಧಾನಗತಿಯಲ್ಲಿ ಸಾಗಿವೆ. ಹೀಗಾಗಿ ಕಾರ್ಯಾಚರಣೆ ತ್ವರಿತಗೊಳಿಸುವ ಸಲುವಾಗಿ ಅಧಿಕಾರಿಗಳ ಕೋರಿಕೆಯ ಮೇರೆಗೆ ಡಿಆರ್​ಡಿಒ ದಕ್ಷ್ ಮಿನಿ ಮತ್ತು ದಕ್ಷ್ ಸ್ಕೌಟ್ ಎಂಬ ರಿಮೋಟ್ ಚಾಲಿತ ವಾಹನಗಳನ್ನು ಕಳುಹಿಸಿದೆ.

    ದಕ್ಷ್ ಮಿನಿ ರಿಮೋಟ್ ವಾಹನವಾಗಿದ್ದು ಸೀಮಿತ ಜಾಗದಲ್ಲಿ ಬಳಸಬಹುದಾಗಿದೆ. ಇದು ಒಮ್ಮೆ ಚಾರ್ಜ್‌ ಆದರೆ 2ಗಂಟೆ ಕಾರ್ಯನಿರ್ವಹಿಸುತ್ತದೆ.ಇದನ್ನು 20 ಕೆಜಿಯಷ್ಟು ಭಾರವನ್ನು ಎತ್ತಲು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ನಿರ್ವಹಿಸಲು ಬಳಸಬಹುದು. ಇದರಲ್ಲಿನ ಹೈರೆಸಲ್ಯೂಶನ್ ಕ್ಯಾಮೆರಾಗಳು ಕಾರ್ಯಾಚರಣೆ ನಿಖರವಾಗಿ ನಿರ್ವಹಿಸಲು ಅನುಕೂಲವಾಗಿವೆ ಎನ್ನಲಾಗುತ್ತಿದೆ.

    ಇನ್ನು ದಕ್ಷ್ ಸ್ಕೌಟ್ ಕಣ್ಗಾವಲು ರೋವರ್ ಆಗಿದೆ. ಇದು ಯಾವುದೇ ರೀತಿಯ ಮೇಲ್ಮೈಯಲ್ಲಿ ಸರಾಗವಾಗಿ ಮೆಟ್ಟಿಲುಗಳನ್ನು ಹತ್ತುವುದು, ಇಳಿಜಾರಿನಲ್ಲಿ ಸುಲಭವಾಗಿ ಇಳಿಯಬಲ್ಲದು. ರೋವರ್ 360 ಡಿಗ್ರಿ ವೀಕ್ಷಣೆಗಾಗಿ ಕ್ಯಾಮೆರಾಗಳನ್ನು ಹೊಂದಿದೆ. ಸ್ಕೌಟ್ ಗಡಿಯಾರದಂತೆ ಸುತ್ತಿ ಕೆಲಸ ಮಾಡುವುದರ ಜತೆಗೆ ಬಾಂಬ್ ಡಿಫ್ಯೂಸಲ್‌ನಷ್ಟು ಸುಧಾರಿತ ಸಾಮರ್ಥ್ಯ ಹೊಂದಿದೆ.

    ಈ ಎರಡು ರೋವರ್‌ಗಳಿಗೆ ದೊಡ್ಡ ಪ್ಲಸ್ ಅವುಗಳ ಪೋರ್ಟಬಿಲಿಟಿಯಾಗಿದೆ. ಎರಡರ ಮಾಸ್ಟರ್ ನಿಯಂತ್ರಣವು ಬ್ಯಾಕ್​ ಪ್ಯಾಕ್​ನಲ್ಲಿದ್ದು, ಎಲ್ಲಿಯಾದರೂ ಸಾಗಿಸಬಹುದು. ರಕ್ಷಣಾ ತಂಡಗಳು ಈ ರೋವರ್ ಅನ್ನು ಹೇಗೆ ಬಳಸಲು ಯೋಜಿಸುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಡಿಆರ್​ಡಿಒ ಅಧಿಕಾರಿಗಳು ಕಾರ್ಯಾಚರಣೆಗೆ ಸೂಕ್ತವೆಂದು ವಿಶ್ವಾಸ ವ್ಯಕ್ತಪಡಿಸುತ್ತಿವೆ.

    ಪ್ರಸ್ತುತ ಕಾರ್ಮಿಕರನ್ನು ಹೊರತರಲು ಅಗತ್ಯದಷ್ಟು ಅಗಲವಾದ ಪೈಪ್ ಅಳವಡಿಕೆ ಕಾರ್ಯವು ಅರ್ಧದಷ್ಟು ಮಾಡಲಾಗಿದೆ. ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

    ಪ್ರಧಾನಿ ಮೋದಿಯವರ ಈ ಕನಸು ನನಸಾಗಲು ಭಾರತೀಯರ ಚಿನ್ನದ ವ್ಯಾಮೋಹ ಅಡ್ಡಿಯಾಗಿದೆಯೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts