More

  ಮೋದಿಜಿಗೆ ಯೋಗಾ ಟೀಚರ್​ ಆಗ್ತಿನೆಂದ ಖ್ಯಾತ ನಟಿ; ತಮಾಷೆಯಾಗಿ ಹೇಳಿ ಸಂಕಷ್ಟಕ್ಕೆ ಸಿಲುಕಿದ್ಲು

  – ನಟಿ ವಿರುದ್ಧ ಮೀರತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

  ಮುಂಬೈ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಮತ್ತು ಅಶ್ಲೀಲ ವರ್ತನೆ ತೋರಿದ ಬಾಲಿವುಡ್​​ ನಟಿ ರಾಖಿ ಸಾವಂತ್ ವಿರುದ್ಧ ಮೀರತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  ರಾಖಿ ಸಾವಂತ್ ತನಗೆ ಅನಿಸಿದ್ದನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ಸಾಮಾನ್ಯವಾಗಿ ಮುಂಬೈ ಪಾಪರಾಜಿಯೊಂದಿಗೆ ತನ್ನ ಮನರಂಜಿಸಲು ಮಾತನಾಡುತ್ತಾರೆ. ಹೀಗೆ ಹೇಳಿರುವ ಮಾತಿನಿಂದ ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

  ವಿಡಿಯೋದಲ್ಲಿ ಏನಿದೆ?: ಮೋದಿಜಿ, ನನ್ನನ್ನು ನಿಮ್ಮ ಯೋಗ ತರಬೇತುದಾರನನ್ನಾಗಿ ಇರಿಸಿಕೊಳ್ಳಿ. ನಾನು ನಿಮ್ಮ ಆರೋಗ್ಯವನ್ನು ನೋಡಿಕೊಳ್ಳುತ್ತೇನೆಂದು ಹೇಳಿದ್ದಾರೆ. ಯೋಗ ಮಾಡುವುದು ಹೀಗೆ ಎಂದು ಪೋಸ್​ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್​​ ಆಗಿದೆ. ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಸುದ್ದಿ ವರದಿಗಳ ಪ್ರಕಾರ, ಗೌರವಾನ್ವಿತ ನಾಯಕನ ಹಿತಾಸಕ್ತಿಗೆ ವಿರುದ್ಧವಾದ ಅಸಭ್ಯತೆ ಮತ್ತು ಅಸಭ್ಯತೆಯನ್ನು ಹೊಂದಿದೆ. ನಟಿ ತನ್ನ ಹೇಳಿಕೆ ಮತ್ತು ವಿಡಿಯೋದಲ್ಲಿ ದೇಶದ ಪ್ರಧಾನ ನಾಯಕನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಯುಪಿಯ ಮೀರತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  ಬಿಗ್​ಬಾಸ್​ 17ಗೆ ಕಾಂಟ್ರವರ್ಸಿ ಜೋಡಿ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಜೋಡಿ ಎಂಟ್ರಿ ಕೊಡಲಿದ್ದಾರಂತೆ. ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ಕೆಲವರು ಈಗ ಬಿಗ್​ಬಾಸ್​ಗೆ  ಮಜಾ ಬರುತ್ತದೆ ಎಂದಿದ್ದರು.  ಇನ್​ಸ್ಟಾಗ್ರಾಮ್​ನಲ್ಲಿ ಈ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ನಟಿ ರಾಖಿ ಅವರು ಖುದ್ದು ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಸುಳ್ಳು ಸುದ್ದಿ. ನಾನು ದುಬೈನಲ್ಲಿ ಇದ್ದೇನೆ. ನನ್ನ ಹೆಸರು ಹೇಳಿಕೊಂಡು ಆದಿಲ್​ ಖಾನ್​ ಪ್ರಚಾರ ಗಿಟ್ಟಿಸಿಕೊಳ್ಳಲು ಬಯಸುತ್ತಿದ್ದಾನೆ. ನಾನು ಯಾವುದೇ ಕಾರಣಕ್ಕೂ ಬಿಗ್​ಬಾಸ್​ಗೆ ಹೋಗುತ್ತಿಲ್ಲ. ಈ ಗಾಳಿ ಸುದ್ದಿಯನ್ನು ನಂಬಬೇಡಿ ಎಂದು ಕಮೆಂಟ್​ ಸೆಕ್ಷನ್​ನಲ್ಲಿ ಹೇಳಿದ್ದಾರೆ. ಅದೇ ಇನ್ನೊಂದೆಡೆ, ನಟಿ ನಾನು ಬಿಗ್​ಬಾಸ್​ಗೆ ಬರಲು ರೆಡಿ ಆದರೆ ಆದಿಲ್​ ಖಾನ್​ ನನ್ನ ಸುತ್ತಲೂ ಇರಬಾರದು ಎಂದಿದ್ದಾರೆ. ಆದ್ದರಿಂದ ರಾಖಿ ಹೇಳಿಕೆಯಲ್ಲಿ ಗೊಂದಲವಿದ್ದು, ಏನಾಗುತ್ತದೆ ಎಂದು ಬಿಗ್​ಬಾಸ್​ ಪ್ರೇಮಿಗಳು ಕಾತರದಿಂದ ಕಾಯ್ತಿದ್ದಾರೆ.

  ಆನಂದ್ ಮಹೀಂದ್ರಾ ವಿಡಿಯೋ ಶೇರ್​ ಮಾಡ್ತಿದ್ದಂತೆ ವ್ಯಕ್ತಿಯೊಬ್ಬನಿಗೆ ಬಿತ್ತು 10,000 ರೂ. ದಂಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts