More

    ದೀಪಿಕಾ ಪಡುಕೋಣೆ ನಟನೆಯ ‘ಸಿಂಗಮ್ ಅಗೇನ್’​ ಚಿತ್ರದ ಫಸ್ಟ್​​ ಲುಕ್​ ಓಟ್​, ಲೇಡಿ ಸಿಂಗಂ ಶಕ್ತಿ ಶೆಟ್ಟಿ..!

    Lady Singham First look: ಮುಂಬೈ: ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಎಗೇನ್ ಚಿತ್ರದ ನಿರ್ದೇಶಕರು ಭಾನುವಾರ ದೀಪಿಕಾ ಪಡುಕೋಣೆ ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ನಟಿ ಖಡಕ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಶಕ್ತಿ ಶೆಟ್ಟಿ ಎಂಬ ಹೆಸರಿನ ಅವರ ಕೈಯಲ್ಲಿ ಗನ್ ಹಿಡಿದಿದ್ದಾರೆ.


    ಇನ್‌ಸ್ಟಾಗ್ರಾಂನಲ್ಲಿ ಈ ಕುರಿತಂತೆ ಪೋಸ್ಟ್​​ ಒಂದನ್ನ ಶೆರ್​ ಮಾಡಿರುವ ರೋಹಿತ್​ ಶೆಟ್ಟಿ, ಈಕೆ ನಮ್ಮ ಲೇಡಿ ಸಿಂಗಂ ಶಕ್ತಿ ಶೆಟ್ಟಿ… ಈಕೆ ನಮ್ಮ ಪೊಲೀಸ್ ಪ್ರಪಂಚದ ಅತ್ಯಂತ ಹಿಂಸಾತ್ಮಕ ಅಧಿಕಾರಿ’ ಎಂದು ಕ್ಯಾಪ್ಶನ್​ ಬರೆದಿದ್ದಾರೆ.


    ಆಕೆ ಅನೇಕ ಅಪರಾಧಿಗಳ ಕುಳಿತು, ಅವರಲ್ಲಿ ಒಬ್ಬರಿಗೆ ತನ್ನ ಗನ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ. ಅಜಯ್ ದೇವಗನ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ರೋಹಿತ್ ಶೆಟ್ಟಿ ಅವರ ಸಿಂಬಾ ಚಿತ್ರದ ಭಾಗವಾಗಿದ್ದ ರಣವೀರ್ ಸಿಂಗ್ ಕೂಡ ನಟಿಸಿದ್ದಾರೆ. ಅವರು ಇನ್‌ಸ್ಪೆಕ್ಟರ್ ಸಂಗ್ರಾಮ್ ಭಲೇರಾವ್ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಕೂಡ ಇದ್ದಾರೆ.


    ಸಿಂಗಂ ಸರಣಿಯ ಮೂರನೇ ಚಿತ್ರ ಇದಾಗಿದ್ದು, 011ರಲ್ಲಿ ಸಿಂಗಂ ಸಿನಿಮಾ ತೆರೆಕಂಡಿತ್ತು. ನಂತರ ಸಿಂಗಮ್ ರಿಟರ್ನ್ಸ್ (2014) ನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕರೀನಾ ಕಪೂರ್ ಮತ್ತು ರಣವೀರ್ ಸಿಂಗ್ ಮೊದಲ ಬಾರಿಗೆ ಒಟ್ಟಿಗೆ ತೆರೆಹಂಚಿಕೊಂಡಿದ್ದರು.


    ಸಿಂಗಂ ಎಗೇನ್ ಸಿನಿಮಾ 2024ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts