More

    ರೋಹಿತ್​​​​ರಿಂದ ನಾಯಕತ್ವ ಕಿತ್ತುಕೊಂಡಿದ್ದೇ ತಡ ಲಕ್ಷಾಂತರ ಫಾಲೋವರ್ಸ್‌ ಕಳೆದುಕೊಂಡ ಮುಂಬೈ ಇಂಡಿಯನ್ಸ್; ಜೆರ್ಸಿಗೂ ಬೆಂಕಿ ಹಚ್ಚಿದ ಅಭಿಮಾನಿಗಳು

    ನವದೆಹಲಿ: ಮುಂಬೈ ಇಂಡಿಯನ್ಸ್ ತಮ್ಮ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ನಾಯಕನನ್ನಾಗಿ ನೇಮಿಸಿದೆ. ಇದೀಗ ಕ್ರೀಡಾ ಪ್ರೇಮಿಗಳ ಕೋಪ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. X ನಲ್ಲಿ #ShameOnMI ನಿರಂತರವಾಗಿ ಟ್ರೆಂಡಿಂಗ್ ಆಗುತ್ತಿದೆ. ರೋಹಿತ್ ಶರ್ಮಾ 2013 ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ತಂಡ 5 ಬಾರಿ ಚಾಂಪಿಯನ್ ಆಗಿದೆ. ರೋಹಿತ್‌ನಿಂದಾಗಿ ಮುಂಬೈ ಇಂಡಿಯನ್ಸ್ ಅಪಾರ ಅಭಿಮಾನಿಗಳನ್ನು ಹೊಂದಿದೆ.

    ಬೆಂಕಿ ಹಚ್ಚಿದ ಅಭಿಮಾನಿಗಳು
    ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕಿದ್ದಕ್ಕಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ಜೆರ್ಸಿಗೆ ಬೆಂಕಿ ಹಚ್ಚಿದ ವಿಡಿಯೋವನ್ನು ಅಭಿಮಾನಿಯೊಬ್ಬರು ಶೇರ್ ಮಾಡಿದ್ದಾರೆ.

    ಕಡಿಮೆಯಾದ ಅನುಯಾಯಿಗಳು
    ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕಿರುವ ಪರಿಣಾಮ ಮುಂಬೈ ಇಂಡಿಯನ್ಸ್‌ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿಯೂ ಅದು ಗೋಚರಿಸುತ್ತಿದೆ. ಹಾರ್ದಿಕ್ ಅವರನ್ನು ನಾಯಕನನ್ನಾಗಿ ಮಾಡುವವರೆಗೂ ಮುಂಬೈ ಇಂಡಿಯನ್ಸ್‌, ಇನ್ಸ್ಟಾಗ್ರಾಮ್​​​​​ನಲ್ಲಿ 13.2 ಮಿಲಿಯನ್ ಅನುಯಾಯಿಗಳನ್ನು ಹೊಂದಿತ್ತು. 24 ಗಂಟೆಗಳು ಕಳೆದಿಲ್ಲ, ಅನುಯಾಯಿಗಳು 12.8 ಮಿಲಿಯನ್ ತಲುಪಿದ್ದಾರೆ. ಎಕ್ಸ್‌ನಲ್ಲಿಯೂ ಸಹ, ಮುಂಬೈನ ಅನುಯಾಯಿಗಳು 8.6 ಮಿಲಿಯನ್‌ನಿಂದ ಕೇವಲ 8.2 ಮಿಲಿಯನ್‌ಗೆ ಇಳಿದಿದ್ದಾರೆ. ಅಭಿಮಾನಿಗಳ ಕೋಪ ನೋಡಿದರೆ ಮತ್ತಷ್ಟು ಫಾಲೋವರ್ಸ್ ಕಳೆದುಕೊಳ್ಳುವ ನಿರೀಕ್ಷೆ ಇದೆ.

    ಅಭಿಮಾನಿಗಳು ಹೇಳುತ್ತಿರುವುದೇನು?
    ಮುಂಬೈ ಇಂಡಿಯನ್ಸ್ ಅಭಿಮಾನಿಗಳು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕಿರುವುದಕ್ಕೆ ಕೋಪ ಮಾಡಿಕೊಂಡಿದ್ದಾರೆ. ರೋಹಿತ್ ಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂಬುದು ಅಭಿಮಾನಿಗಳ ನಂಬಿಕೆ. ಈ ಕಾರಣಕ್ಕೆ ಅಭಿಮಾನಿಗಳ ಕೋಪ ಇನ್ನಷ್ಟು ಹೆಚ್ಚಾಗಿದೆ. ಈ ಬಗ್ಗೆ ರೋಹಿತ್ ಶರ್ಮಾ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವ ಬದಲಾವಣೆ; ಫ್ರಾಂಚೈಸಿ ನೀಡಿದ ಕಾರಣ ಹೀಗಿದೆ…

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts