More

    ಕೆಎಲ್ ರಾಹುಲ್‌ಗೆ ಉಪನಾಯಕ ಪಟ್ಟ, ಹೊಸ ಕೋಚ್ ದ್ರಾವಿಡ್ ಒಲವು

    ನವದೆಹಲಿ: ಹಾಲಿ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಚುಟುಕು ಕ್ರಿಕೆಟ್ ನಾಯಕತ್ವಕ್ಕೆ ವಿದಾಯ ಹೇಳಲಿದ್ದು, ಅವರ ಉತ್ತರಾಧಿಕಾರಿಯಾಗಿ ರೋಹಿತ್ ಶರ್ಮ ನೇಮಕಗೊಳ್ಳುವುದು ಬಹುತೇಕ ಖಚಿತವೆನಿಸಿದೆ. ಇದೇ ವೇಳೆ ರೋಹಿತ್ ಶರ್ಮ ನಾಯಕರಾದಾಗ ಉಪನಾಯಕತ್ವಕ್ಕೆ ಕನ್ನಡಿಗ ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಜಸ್‌ಪ್ರೀತ್ ಬುಮ್ರಾ ಹೆಸರು ಕೇಳಿಬಂದಿತ್ತು. ಇದೀಗ ದಿಗ್ಗಜ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಹುದ್ದೆಗೇರಲು ಸಜ್ಜಾಗಿದ್ದು, ಟಿ20 ತಂಡದ ನಾಯಕತ್ವಕ್ಕೆ ರೋಹಿತ್ ಶರ್ಮರನ್ನು ನೇಮಿಸುವ ಬಗ್ಗೆ ಅವರು ಯಾವುದೇ ತಕರಾರು ಹೊಂದಿಲ್ಲ. ಇದರ ಜತೆಗೆ ಉಪನಾಯಕ ಸ್ಥಾನಕ್ಕೆ ಕೆಎಲ್ ರಾಹುಲ್ ಅವರನ್ನು ನೇಮಿಸಲು ದ್ರಾವಿಡ್ ಒಲವು ಹೊಂದಿದ್ದಾರೆ ಎನ್ನಲಾಗಿದೆ.

    ಕೊಹ್ಲಿ ಟಿ20 ನಾಯಕತ್ವ ತ್ಯಜಿಸುವ ಸುದ್ದಿ ಬಂದಾಗ ದ್ರಾವಿಡ್ ಸಂದರ್ಶನವೊಂದರಲ್ಲಿ ರೋಹಿತ್ ಅವರನ್ನೇ ಮುಂದಿನ ನಾಯಕರಾಗಿ ಹೆಸರಿಸಿದ್ದರು. ಜತೆಗೆ ಕೆಎಲ್ ರಾಹುಲ್ 2ನೇ ಆಯ್ಕೆ ಎಂದೂ ಹೇಳಿದ್ದರು. ರೋಹಿತ್ ಶರ್ಮ ಶೀಘ್ರದಲ್ಲೇ 35ನೇ ವಯಸ್ಸಿನಲ್ಲೇ ಕಾಲಿಡಲಿರುವ ನಡುವೆಯೂ, ಮುಂದಿನ ವರ್ಷ ಮತ್ತೆ ಟಿ20 ವಿಶ್ವಕಪ್ ನಡೆಯಲಿರುವುದರಿಂದ ದ್ರಾವಿಡ್ ಕೂಡ ಅನುಭವಿ ಆಟಗಾರನಿಗೆ ಆದ್ಯತೆ ನೀಡಬಹುದು ಎನ್ನಲಾಗಿದೆ. ಇನ್ನು 29 ವರ್ಷದ ಕೆಎಲ್ ರಾಹುಲ್ ತಮ್ಮದೇ ರಾಜ್ಯದ ಆಟಗಾರ ಎನ್ನುವುದಕ್ಕಿಂತ ಹೆಚ್ಚಾಗಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರ ಮೇಲೆ ದ್ರಾವಿಡ್ ಒಲವು ತೋರಿದ್ದಾರೆ ಎನ್ನಲಾಗಿದೆ.

    ಟಿ20 ವಿಶ್ವಕಪ್ ಬಳಿಕ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ರೋಹಿತ್ ಶರ್ಮ ವಿಶ್ರಾಂತಿ ಪಡೆದರೆ, ಆಗ ಕೆಎಲ್ ರಾಹುಲ್ ಅವರೇ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.

    ಪ್ರತ್ಯೇಕ ನಾಯಕತ್ವ ಇಷ್ಟವಿಲ್ಲ?
    ಏಕದಿನ ಮತ್ತು ಟಿ20 ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಿಸುವ ಬಗ್ಗೆ ಬಿಸಿಸಿಐ ಮತ್ತು ದ್ರಾವಿಡ್‌ಗೆ ಒಲವು ಇಲ್ಲ ಎನ್ನಲಾಗಿದೆ. ಇದರಿಂದಾಗಿ ಕೊಹ್ಲಿ ಟಿ20 ವಿಶ್ವಕಪ್ ಬಳಿಕ ಏಕದಿನ ತಂಡದ ನಾಯಕತ್ವವನ್ನೂ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. 2023ರಲ್ಲಿ ತವರಿನಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಕಟ್ಟಲು ಇನ್ನೂ 2 ವರ್ಷಗಳ ಅವಕಾಶವಿದ್ದು, ಈ ನಿಟ್ಟಿನಲ್ಲಿ ದ್ರಾವಿಡ್ ಮಾರ್ಗದರ್ಶನದಲ್ಲಿ ಸಮರ್ಥ ಯೋಜನೆಯೊಂದು ರೂಪುಗೊಳ್ಳಲಿದೆ. ಭಾರತ ತಂಡ ಮುಂದಿನ ಏಕದಿನ ಸರಣಿಯನ್ನು ವರ್ಷಾಂತ್ಯದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡಲಿದೆ. ಅದಕ್ಕೆ ಹೊಸ ನಾಯಕ ನೇಮಕಗೊಂಡರೆ, ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಕೊನೇ ಪಂದ್ಯವೇ ಕೊಹ್ಲಿ ನಾಯಕತ್ವದಲ್ಲಿ ಕೊನೇ ಸೀಮಿತ ಓವರ್ ಪಂದ್ಯವೂ ಆಗಿರಲಿದೆ.

    ಮುಂದಿನ ವಾರ ತಂಡ ಆಯ್ಕೆ
    ಟಿ20 ವಿಶ್ವಕಪ್ ಬೆನ್ನಲ್ಲೇ ನವೆಂಬರ್ 17ರಿಂದ ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20, ಟೆಸ್ಟ್ ಸರಣಿ ಆಡಲಿದೆ. ಅದಕ್ಕೆ ತಂಡ ಆಯ್ಕೆಗಾಗಿ, ಸೋಮವಾರ ನಮೀಬಿಯ ವಿರುದ್ಧ ಕೊನೇ ಲೀಗ್ ಪಂದ್ಯ ಆಡಿದ ಬಳಿಕ ಆಯ್ಕೆ ಸಮಿತಿ ಸಭೆ ನಡೆಯಲಿದೆ ಎನ್ನಲಾಗಿದೆ. ಈ ಸಭೆಯಲ್ಲಿ ದ್ರಾವಿಡ್ ಕೂಡ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದಲೇ ಅವರನ್ನು ಹೊಸ ಕೋಚ್ ಆಗಿ ಬುಧವಾರವೇ ಬಿಸಿಸಿಐ ನೇಮಕ ಮಾಡಿದೆ ಎನ್ನಲಾಗುತ್ತಿದೆ.

    ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಆಫ್​ ಡೆತ್ ಎನಿಸಿದ 1ನೇ ಗುಂಪಿನಲ್ಲಿ ಸೆಮೀಸ್ ಲೆಕ್ಕಾಚಾರ ಹೇಗಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts