ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಆಫ್​ ಡೆತ್ ಎನಿಸಿದ 1ನೇ ಗುಂಪಿನಲ್ಲಿ ಸೆಮೀಸ್ ಲೆಕ್ಕಾಚಾರ ಹೇಗಿದೆ ಗೊತ್ತಾ?

ದುಬೈ: ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಒಳಗೊಂಡ ಗ್ರೂಪ್-2ರಲ್ಲಿ ಪಾಕಿಸ್ತಾನ ಈಗಾಗಲೆ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದ್ದರೆ, ನ್ಯೂಜಿಲೆಂಡ್ 2ನೇ ನೆಚ್ಚಿನ ತಂಡವೆನಿಸಿದೆ. ಕಿವೀಸ್ ಇನ್ನೊಂದು ಪಂದ್ಯ ಸೋತರಷ್ಟೇ ಭಾರತ ಅಥವಾ ಅಫ್ಘಾನಿಸ್ತಾನ ಸೆಮಿಫೈನಲ್‌ಗೇರುವ ಅವಕಾಶ ಹೊಂದಿದೆ. ಮತ್ತೊಂದೆಡೆ ‘ಗ್ರೂಪ್ ಆಫ್​ ಡೆತ್’ ಎನಿಸಿದ್ದ ಸೂಪರ್-12ರ ಗ್ರೂಪ್-1ರಲ್ಲಿ ಸೆಮಿಫೈನಲ್ ಲೆಕ್ಕಾಚಾರ ಭಾರಿ ಕುತೂಹಲ ಮೂಡಿಸಿದೆ. ಇಂಗ್ಲೆಂಡ್ ತಂಡ ಇದುವರೆಗೆ ಆಡಿದ ನಾಲ್ಕೂ ಪಂದ್ಯ ಜಯಿಸಿದ್ದರೂ, ಸೆಮೀಸ್ ಪ್ರವೇಶ ಖಚಿತಗೊಂಡಿಲ್ಲ. ಆದರೆ ಉತ್ತಮ ರನ್‌ರೇಟ್ ಕೂಡ ಹೊಂದಿರುವುದು ಆಂಗ್ಲರ ಹಾದಿ ಸುಗಮವಾಗಿಸಿದೆ. … Continue reading ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಆಫ್​ ಡೆತ್ ಎನಿಸಿದ 1ನೇ ಗುಂಪಿನಲ್ಲಿ ಸೆಮೀಸ್ ಲೆಕ್ಕಾಚಾರ ಹೇಗಿದೆ ಗೊತ್ತಾ?