More

    ಆಸೀಸ್ ಪ್ರವಾಸದ ಮೊದಲ 2 ಟೆಸ್ಟ್‌ನಿಂದ ರೋಹಿತ್, ಇಶಾಂತ್ ಶರ್ಮ ಔಟ್

    ನವದೆಹಲಿ: ಗಾಯದಿಂದ ಇನ್ನೂ ಸಂಪೂರ್ಣ ಚೇತರಿಕೆ ಕಾಣದಿರುವ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಮತ್ತು ಅನುಭವಿ ವೇಗಿ ಇಶಾಂತ್ ಶರ್ಮ ಆಸ್ಟ್ರೇಲಿಯಾ ಪ್ರವಾಸದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಕೊನೆಯ 2 ಟೆಸ್ಟ್ ಪಂದ್ಯಗಳಿಗೂ ಅವರು ಲಭ್ಯರಾಗುವ ಬಗ್ಗೆ ಅನುಮಾನಗಳಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿರುವ ರೋಹಿತ್ ಮತ್ತು ಇಶಾಂತ್ ಮ್ಯಾಚ್ ಫಿಟ್ ಆಗಲು ಒಂದು ತಿಂಗಳ ಕಾಲಾವಕಾಶ ಬೇಕು ಎನ್ನಲಾಗಿದೆ. ರೋಹಿತ್ ಶರ್ಮಗೆ ಏಕದಿನ ಮತ್ತು ಟಿ20 ಸರಣಿಯಿಂದ ಈಗಾಗಲೆ ವಿಶ್ರಾಂತಿ ನೀಡಲಾಗಿದ್ದು, ಟೆಸ್ಟ್ ಸರಣಿಗೆ ಕೊನೇ ಕ್ಷಣದಲ್ಲಿ ರೋಹಿತ್ ಮತ್ತು ಇಶಾಂತ್ ಅವರನ್ನು ಸೇರ್ಪಡೆಗೊಳಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿನ 14 ದಿನಗಳ ಕಡ್ಡಾಯ ಕ್ವಾರಂಟೈನ್ ನಿಯಮಗಳಿಂದಾಗಿ ಇವರಿಬ್ಬರು ಕೊನೇ ಟೆಸ್ಟ್‌ಗಳಲ್ಲಿ ಆಡುವುದು ಕೂಡ ಅನಿಶ್ಚಿತವೆನಿಸಿದೆ. ‘ರೋಹಿತ್ ಮತ್ತು ಇಶಾಂತ್ ಮ್ಯಾಚ್ ಫಿಟ್ ಆಗಲು ಕನಿಷ್ಠ 3-4 ವಾರಗಳು ಅಗತ್ಯವಿದೆ ಎಂದು ಎನ್‌ಸಿಎ ವರದಿ ಸಲ್ಲಿಸಿದೆ’ ಎಂದು ಮಂಡಳಿಯ ಮೂಲಗಳು ಮಂಗಳವಾರ ತಿಳಿಸಿವೆ.

    ಸ್ನಾಯು ಸೆಳೆತದ ಸಮಸ್ಯೆಯಿಂದ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದೇನೆ ಎಂದು ರೋಹಿತ್ ಶರ್ಮ ಕಳೆದ ವಾರ ತಿಳಿಸಿದ್ದರು. ಐಪಿಎಲ್‌ನ ಪ್ಲೇಆ್ ಪಂದ್ಯಗಳಲ್ಲಿ ಆಡಿದ ಬಳಿಕ ರೋಹಿತ್ ದೀಪಾವಳಿ ಹಬ್ಬವನ್ನು ಮುಗಿಸಿ ಬೆಂಗಳೂರಿನಲ್ಲಿ ಫಿಟ್ನೆಸ್ ತರಬೇತಿ ಆರಂಭಿಸಿದ್ದರು. ಇಶಾಂತ್ ಶರ್ಮ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ವೇಳೆ ಗಾಯಗೊಂಡಿದ್ದು, ಟೂರ್ನಿಯ ನಡುವೆಯೇ ಬೆಂಗಳೂರಿಗೆ ಆಗಮಿಸಿದ್ದರು.

    ಟೆಸ್ಟ್ ಸರಣಿ ಡಿ. 17ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿದ್ದು, ಬಳಿಕ ಮೆಲ್ಬೋರ್ನ್ (ಡಿ. 26-30), ಸಿಡ್ನಿ (ಜ. 7-11) ಮತ್ತು ಬ್ರಿಸ್ಬೇನ್‌ನಲ್ಲಿ (ಜ. 15-19) ಪಂದ್ಯಗಳು ನಡೆಯಲಿವೆ. ಪತ್ನಿ ಅನುಷ್ಕಾ ಶರ್ಮ ಜನವರಿಯಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮರಳಲಿದ್ದು, ಇದೀಗ ರೋಹಿತ್, ಇಶಾಂತ್ ಅಲಭ್ಯತೆ ಮತ್ತಷ್ಟು ಸಂಕಷ್ಟ ತಂದಿದೆ.

    ಶ್ರೇಯಸ್ ಬದಲಿ ಆಟಗಾರ?
    ರೋಹಿತ್ ಗೈರಿನಲ್ಲಿ ಮುಂಬೈನ ಮತ್ತೋರ್ವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರಿಗೆ ಏಕದಿನ, ಟಿ20 ಸರಣಿಯ ಬಳಿಕ ಟೆಸ್ಟ್ ತಂಡದ ಜತೆಗೆ ಮೀಸಲು ಬ್ಯಾಟ್ಸ್‌ಮನ್ ಆಗಿ ಉಳಿದುಕೊಳ್ಳಲು ಬಿಸಿಸಿಐ ಸೂಚಿಸುವ ನಿರೀಕ್ಷೆ ಇದೆ. ಇಶಾಂತ್ ಶರ್ಮ ಸ್ಥಾನದಲ್ಲೂ ಸೀಮಿತ ಓವರ್ ಸರಣಿಯಿಂದ ಓರ್ವ ವೇಗಿಯನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

    ಕ್ವಾರಂಟೈನ್‌ನಿಂದ ಹಿನ್ನಡೆ
    ‘ಇಶಾಂತ್ ಮತ್ತು ರೋಹಿತ್ ಈಗಲೇ ಆಸೀಸ್‌ಗೆ ಪ್ರಯಾಣ ಬೆಳೆಸಿದರೆ, ವಾಣಿಜ್ಯ ವಿಮಾನದ ಮೂಲಕ ತೆರಳಬೇಕಾಗುತ್ತದೆ. ಆಗ ಅವರು ಹಾರ್ಡ್ ಕ್ವಾರಂಟೈನ್‌ಗೆ ಒಳಗಾಗಬೇಕಾತ್ತದೆ. ಹಾರ್ಡ್ ಕ್ವಾರಂಟೈನ್‌ನಲ್ಲಿ ಭಾರತ ತಂಡದ ಇತರ ಸದಸ್ಯರಂತೆ ಇವರಿಗೆ ಅಭ್ಯಾಸ ನಡೆಸುವ ಅವಕಾಶ ಲಭಿಸುವುದಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ಸರ್ಕಾರದ ಮನ ಒಲಿಸಿದರೆ ಮಾತ್ರ ಅವರಿಗೆ ಕ್ವಾರಂಟೈನ್‌ನಲ್ಲೂ ಅಭ್ಯಾಸಕ್ಕೆ ಅವಕಾಶ ಸಿಗಬಹುದು’ ಎಂದು ಬಿಸಿಸಿಐ ಮೂಲಗಳು ವಿವರಿಸಿವೆ. ಭಾರತ ತಂಡದ ಆಟಗಾರರು ಐಪಿಎಲ್ ಮುಗಿಸಿ ಯುಎಇಯಿಂದಲೇ ವಿಶೇಷ ಬಾಡಿಗೆ ವಿಮಾನದ ಮೂಲಕ ಸಿಡ್ನಿ ತಲುಪಿರುವುದರಿಂದ ಅವರಿಗೆ 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಅಭ್ಯಾಸ ನಡೆಸುವ ಅವಕಾಶ ನೀಡಲಾಗಿದೆ.

    ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಲಿದೆ ಭಾರತ-ಆಸೀಸ್ ಕ್ರಿಕೆಟ್​ ಸರಣಿಯ ಕಾಮೆಂಟರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts