More

    ರೋಹಿತ್ ಶರ್ಮ ಆಸ್ಟ್ರೇಲಿಯಾಕ್ಕೆ ಹೋದರೂ ಟೆಸ್ಟ್ ಆಡುವುದು ಖಚಿತವಿಲ್ಲ!

    ನವದೆಹಲಿ: ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡವನ್ನು ಕೂಡಿಕೊಳ್ಳಲು ‘ಕ್ಲಿನಿಕಲಿ ಫಿಟ್’ ಆಗಿದ್ದಾರೆ ಎಂದು ಬಿಸಿಸಿಐ ಶನಿವಾರ ಅಧಿಕೃತವಾಗಿ ಘೋಷಿಸಿದೆ. ಆದರೆ ಪ್ರವಾಸದ ಕೊನೆಯ 2 ಟೆಸ್ಟ್ ಪಂದ್ಯಗಳಲ್ಲಿ ಅವರು ಆಡುವ ಕುರಿತು ಟೀಮ್ ಇಂಡಿಯಾದ ವೈದ್ಯಕೀಯ ತಂಡದ ಮರುಪರಿಶೀಲನೆಯ ಬಳಿಕ ನಿರ್ಧಾರವಾಗಲಿದೆ ಎಂದು ತಿಳಿಸಿದೆ.

    ಐಪಿಎಲ್ ವೇಳೆ ಸ್ನಾಯುಸೆಳೆತದ ಸಮಸ್ಯೆಯಿಂದ ಬಳಲಿದ್ದ ರೋಹಿತ್ ಶರ್ಮ, ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ ಸರಣಿಯಿಂದ ಹೊರಗುಳಿದಿದ್ದರು. 14 ದಿನಗಳ ಕಡ್ಡಾಯ ಕ್ವಾರಂಟೈನ್‌ನಿಂದಾಗಿ ಪ್ರವಾಸದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅವರು ಈಗಾಗಲೆ ಅಲಭ್ಯರಾಗಿದ್ದಾರೆ.

    ‘ಆಸ್ಟ್ರೇಲಿಯಾದಲ್ಲಿನ ಕ್ವಾರಂಟೈನ್ ಅವಧಿಯಲ್ಲಿ ಪಾಲಿಸಬೇಕಾದ ಫಿಟ್ನೆಸ್ ವಿಚಾರಗಳನ್ನು ಈಗಾಗಲೆ ರೋಹಿತ್ ಶರ್ಮಗೆ ವಿವರಿಸಲಾಗಿದೆ. ಕ್ವಾರಂಟೈನ್ ಬಳಿಕ ಟೀಮ್ ಇಂಡಿಯಾದ ವೈದ್ಯಕೀಯ ತಂಡ ಅವರ ಫಿಟ್ನೆಸ್ ಬಗ್ಗೆ ಮರುಪರಿಶೀಲನೆ ಮಾಡಲಿದೆ. ಬಳಿಕ ಅವರನ್ನು ಬಾರ್ಡರ್-ಗಾವಸ್ಕರ್ ಟ್ರೋಫಿಯ ಕೊನೇ 2 ಟೆಸ್ಟ್‌ಗಳಲ್ಲಿ ಆಡಿಸುವ ಕುರಿತು ನಿರ್ಧರಿಸಲಾಗುವುದು’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

    ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ರೋಹಿತ್ ಉತ್ತೀರ್ಣರಾಗಿದ್ದಾರೆ ಮತ್ತು ಸೋಮವಾರ ಆಸ್ಟ್ರೇಲಿಯಾಕ್ಕೆ ಪ್ರಯಾಣಸಲಿದ್ದಾರೆ ಎಂದು ಈಗಾಗಲೆ ವರದಿಯಾಗಿತ್ತು.

    ನವೆಂಬರ್ 19ರಿಂದ ಎನ್‌ಸಿಎಯಲ್ಲಿ ನಡೆದ ಫಿಟ್ನೆಸ್ ತರಬೇತಿ ಮತ್ತು ಪುನಶ್ಚೇತನದ ಬಳಿಕ ರೋಹಿತ್ ಅವರೀಗ ಕ್ಲಿನಿಕಲಿ ಫಿಟ್ ಆಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಎನ್‌ಸಿಎ ವೈದ್ಯಕೀಯ ತಂಡ ರೋಹಿತ್‌ರ ಫಿಟ್ನೆಸ್ ಬಗ್ಗೆ ತೃಪ್ತಿ ಹೊಂದಿದ್ದರೂ, ಅವರ ಎಂಡುರೆನ್ಸ್ (ದೀರ್ಘಕಾಲ ಆಯಾಸವನ್ನು ತಡೆದುಕೊಳ್ಳುವ ಸಾಮರ್ಥ್ಯ) ಬಗ್ಗೆ ಗಮನ ಹರಿಸಬೇಕಾಗಿದೆ ಎಂದಿದೆ. ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಮೇಲ್ವಿಚಾರಣೆಯಲ್ಲಿ ರೋಹಿತ್ ಶರ್ಮರ ಫಿಟ್ನೆಸ್ ಪರೀಕ್ಷೆ ನಡೆದಿತ್ತು.

    ಆಸ್ಟ್ರೇಲಿಯಾ ಮಾಧ್ಯಮಗಳಿಂದ ಮೊಹಮದ್ ಸಿರಾಜ್ ಗುಣಗಾನ, ಕಾರಣವೇನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts