More

    ಆಸ್ಟ್ರೇಲಿಯಾ ಮಾಧ್ಯಮಗಳಿಂದ ಮೊಹಮದ್ ಸಿರಾಜ್ ಗುಣಗಾನ, ಕಾರಣವೇನು ಗೊತ್ತೇ?

    ಸಿಡ್ನಿ: ತಂದೆಯ ಸಾವಿನ ನಡುವೆಯೂ ತವರಿಗೆ ಮರಳದೆ ಭಾರತ ತಂಡದೊಂದಿಗೆ ಮುಂದುವರಿಯುವ ಮೂಲಕ ಎಲ್ಲರ ಮನಗೆದ್ದಿದ್ದ ವೇಗಿ ಮೊಹಮದ್ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದ ಇದೀಗ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಹರ್ನಿಶಿ ಅಭ್ಯಾಸ ಪಂದ್ಯದ ವೇಳೆ ಅವರು ತೋರಿದ ಕ್ರೀಡಾಸ್ಫೂರ್ತಿಯ ನಡೆಯಿಂದ ಆಸ್ಟ್ರೇಲಿಯಾದ ಮಾಧ್ಯಮಗಳಿಂದ ಭಾರಿ ಪ್ರಶಂಸೆಗೆ ಭಾಜನರಾಗಿದ್ದಾರೆ.

    ಅಹರ್ನಿಶಿ ತ್ರಿದಿನ ಅಭ್ಯಾಸ ಪಂದ್ಯದ ಮೊದಲ ದಿನ ಜಸ್‌ಪ್ರೀತ್ ಬುಮ್ರಾ ಸ್ಟ್ರೈಟ್ ಡ್ರೈವ್ ಮಾಡಿದ ಚೆಂಡು ಬೌಲರ್ ಕ್ಯಾಮರಾನ್ ಗ್ರೀನ್ ತಲೆಗೆ ಬಡಿದಿತ್ತು. ಆಗ ನಾನ್-ಸ್ಟ್ರೈಕರ್‌ನಲ್ಲಿದ್ದ ಮೊಹಮದ್ ಸಿರಾಜ್ ಕೂಡಲೆ ಓಡಿಬಂದು ಗ್ರೀನ್ ಅವರನ್ನು ವಿಚಾರಿಸಿಕೊಂಡಿದ್ದರು. ಕೈಯಲ್ಲಿದ್ದ ಬ್ಯಾಟ್ ಎಸೆದು ಬಂದಿದ್ದ ಸಿರಾಜ್ ಗ್ರೀನ್ ಬಗ್ಗೆ ಕಾಳಜಿ ತೋರಿದ್ದರು. ಬಳಿಕ ಬುಮ್ರಾ ಮತ್ತು ಗ್ರೀನ್ ಸಹ-ಆಟಗಾರರು ಕೂಡ ಅವರನ್ನು ಕೂಡಿಕೊಂಡಿದ್ದರು. ಕನ್‌ಕಷನ್‌ನಿಂದಾಗಿ ಗ್ರೀನ್ ಬಳಿಕ ಪಂದ್ಯದಲ್ಲಿ ಮುಂದುವರಿದಿರಲಿಲ್ಲ. ಈ ನಡುವೆ ಮೊಹಮದ್ ಸಿರಾಜ್ ಅವರ ಕ್ರೀಡಾಸ್ಫೂರ್ತಿಯ ವರ್ತನೆ ಆತಿಥೇಯರ ಮನಗೆದ್ದಿದೆ.

    ಆಸ್ಟ್ರೇಲಿಯಾದ ‘9ನ್ಯೂಸ್ ಆಸ್ಟ್ರೇಲಿಯಾ’, ‘ಎಬಿಸಿ ಡಾಟ್ ನೆಟ್’, ‘ಕ್ರಿಕೆಟ್ ಡಾಟ್ ಕಾಮ್’ ಮುಂತಾದ ಮಾಧ್ಯಮಗಳು ಸಿರಾಜ್ ಕ್ರೀಡಾಸ್ಫೂರ್ತಿಯನ್ನು ಕೊಂಡಾಡಿವೆ. ಆಸ್ಟ್ರೇಲಿಯಾದ ಕೆಲ ನೆಟ್ಟಿಗರು ಕೂಡ ಟ್ವಿಟರ್‌ನಲ್ಲಿ ಸಿರಾಜ್ ಬ್ಯಾಟ್ ಎಸೆದು ಓಡಿದ್ದನ್ನು ಮೆಚ್ಚಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts