More

    ರೋಹಿಂಗ್ಯಾ ಮುಸ್ಲಿಮರ ಕಳ್ಳ ಸಾಗಾಣಿಕೆ; ಬೆಂಗ್ಳೂರಲ್ಲೇ ಇದ್ದ ಕಿಂಗ್‌ಪಿನ್: ದೇಶದ ವಿವಿಧೆಡೆ ನೆಲೆಸಿದ್ದ 6 ಆರೋಪಿಗಳ ಬಂಧನ

    ಬೆಂಗಳೂರು: ಮಾನವ ಕಳ್ಳ ಸಾಗಾಣಿಕೆಯಲ್ಲಿ ದೇಶದ ಭದ್ರತೆಗೆ ಕುತ್ತು ತರುತ್ತಿದ್ದ ಕಿಂಗ್‌ಪಿನ್ ಸಿಲಿಕಾನ್ ಸಿಟಿಯಲ್ಲಿ ಅಡಗಿದ್ದ ಸ್ಫೋಟಕ ಮಾಹಿತಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ದೇಶದ ಗಡಿಭಾಗಗಳಾದ ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ಇನ್ನಿತರ ಭಾಗಗಳಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಮಾನವ ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ದಂಧೆಕೋರರ ವಿರುದ್ಧ ಎನ್‌ಐಎ ಅಧಿಕಾರಿಗಳು ದೇಶದ ವಿವಿಧೆಡೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

    ಅಸ್ಸಾಂ, ಮೇಘಾಲಯ ಮತ್ತು ಕರ್ನಾಟಕದಲ್ಲಿ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ರೋಹಿಂಗ್ಯಾ ಮುಸ್ಲಿಮರ ಕಳ್ಳ ಸಾಗಾಣಿಕೆ ದಂಧೆ ಕಿಂಗ್‌ಪಿನ್ ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕುಮ್‌ಕುಮ್ ಅಹ್ಮದ್ ಚೌಧರಿ ಅಲಿಯಾಸ್ ಅಸಿಕುಲ್ ಅಹ್ಮದ್, ಅಸ್ಸಾಂನ ಸಹಾಲಮ್ ಲಸ್ಕರ್ ಅಲಿಯಾಸ್ ಅಲ್ಲಾಮ್ ಲಸ್ಕರ್, ಅಹಿಯಾ ಅಹ್ಮದ್ ಚೌಧರಿ, ಬೊಪನ್ ಅಹ್ಮದ್ ಚೌಧರಿ, ಜಮಾಜುದ್ದೀನ್ ಅಹ್ಮದ್ ಚೌಧರಿ ಮತ್ತು ಮೇಘಾಲಯದ ವಂಬಿಂಗ್ ಸುಟಿಂಗ್ ಬಂಧಿತರು. ದಾಳಿ ವೇಳೆ ದಾಖಲೆಗಳು, ಡಿಜಿಟಲ್ ಉಪಕರಣ ಜಪ್ತಿ ಮಾಡಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

    2021ರಲ್ಲಿ ಗುವಾಹಟಿ ಎನ್‌ಐಎ ಕಚೇರಿಯಲ್ಲಿ ರೋಹಿಂಗ್ಯಾ ಮುಸ್ಲಿಮರ ಕಳ್ಳ ಸಾಗಾಣಿಕೆ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಎನ್‌ಐಎ ಮಾನವ ಕಳ್ಳ ಸಾಗಾಣಿಕೆ ದಂಧೆಕೋರರ ಬೆನ್ನಟ್ಟಿದ್ದಾಗ ಕುಮ್‌ಕುಮ್ ಸುಳಿವು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಅಡಗಿದ್ದ ಕುಮ್‌ಕುಮ್, ಇಲ್ಲಿಂದರೇ ದೇಶದ ಗಡಿಭಾಗದಲ್ಲಿ ನೆಲೆಸಿದ್ದ ಸಹಚರರ ಜತೆ ಸಂಪರ್ಕದಲ್ಲಿ ಇರುತ್ತಿದ್ದ. ಅಲ್ಲಿಂದ ರೋಹಿಂಗ್ಯಾ ಮುಸ್ಲಿಮರನ್ನು ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಕರೆಸಿಕೊಂಡು ಆಧಾರ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ತಯಾರಿಸಿ ಕೊಡುತ್ತಿದ್ದ. ಈ ದಾಖಲೆ ಪಡೆದ ರೋಹಿಂಗ್ಯಾ ಮುಸ್ಲಿಮರು ಪಶ್ಚಿಮ ಬಂಗಾಳ, ಅಸ್ಸಾಂ ಅಥವಾ ಮೇಘಾಲಯ ಮೂಲ ನಿವಾಸಿಗಳು ಎಂದು ಹೇಳಿಕೊಳ್ಳುತ್ತಿದ್ದರು.

    ರೋಹಿಂಗ್ಯಾ ಮುಸ್ಲಿಮರು ವೇಶ್ಯಾವಾಟಿಕೆ, ಡ್ರಗ್ಸ್, ಕಳ್ಳತನ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಇದಲ್ಲದೆ, ಉಗ್ರ ಚಟುವಟಿಕೆಗಳಲ್ಲಿಯೂ ಭಾಗಿಯಾದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿವೆ. ಇದೀಗ ರೋಹಿಂಗ್ಯಾ ಕಳ್ಳ ಸಾಗಾಣಿಕೆ ದಂಧೆಕೋರ ಸಿಲಿಕಾನ್ ಸಿಟಿಯಲ್ಲಿ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

    ಬೌದ್ಧಧರ್ಮಿಯರೇ ಟಾರ್ಗೆಟ್: ಬರ್ಮಾ ಮತ್ತು ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ಖಂಡೀಸಿದ್ದ ಜೆಎಂಬಿ ಉಗ್ರ ಸಂಘಟನೆಯ ಕೌಸರ್ ಸೇರಿದಂತೆ ಹಲವರು ಬೌದ್ಧಧರ್ಮೀಯರನ್ನು ಟಾರ್ಗೆಟ್ ಮಾಡಿದ್ದರು. ಬಿಹಾರದ ಪಾಟ್ನಾ ಜಿಲ್ಲೆ ಬೋಧ್‌ಗಯಾ ಬುದ್ಧ ಮಂದಿರಕ್ಕೆ ದೇಶ, ವಿದೇಶಗಳಿಂದ ಬೌದ್ಧಧರ್ಮೀಯರು ಬರುತ್ತಿದ್ದರು.

    2013 ಜು.7ರಂದು ಬೋಧ್‌ಗಯಾದಲ್ಲಿ ಸರಣಿ ಬಾಂಬ್ ಸ್ಫೋಟಿಸಿದ್ದ. ಭಾರತದಿಂದ ರೋಹಿಂಗ್ಯಾ ಮುಸ್ಲಿಮರನ್ನು ಹೊರಹಾಕಲು ಕೇಂದ್ರ ಸರ್ಕಾರ ವಿರುದ್ಧ ಸಮರ ಸಾರಿದ್ದರು. ಬೌಧ ಧರ್ಮಿಯರ ಜತೆಗೆ ಹಿಂದುಗಳನ್ನೂ ಟಾರ್ಗೆಟ್ ಮಾಡಿ ಬಾಂಬ್ ಸ್ಫೋಟಿಸಲು ಮುಂದಾಗಿದ್ದರು. ಬೆಂಗಳೂರಿಗೆ ಬಂದು ಸೋಲದೇವನಹಳ್ಳಿಯ ಬಾಡಿಗೆ ಮನೆಯಲ್ಲಿ ಸ್ಫೋಟಕ ತಯಾರಿಕೆ ಮಾಡಿದ್ದರು. ಈ ಬಗ್ಗೆ ಎನ್‌ಐಎ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

    ನಾನ್ಯಾರನ್ನೂ ಪ್ರೀತಿಸಿಲ್ಲ, ನನ್ನ ಸಾವಿಗೆ ಪ್ರೀತಿ ಕಾರಣವಲ್ಲ ಎಂದು ಹೇಳಿ 23ನೇ ಮಹಡಿಯಿಂದ ಹಾರಿ ಸತ್ತ ವಿದ್ಯಾರ್ಥಿ!

    ಹಿಜಾಬ್​ ತೀರ್ಪು ಏನೇ ಬಂದರೂ ಸಂಭ್ರಮಿಸುವಂತಿಲ್ಲ; ಹಲವೆಡೆ ನಿಷೇಧಾಜ್ಞೆ, ಕೆಲವೆಡೆ ಶಾಲಾ-ಕಾಲೇಜುಗಳಿಗೂ ರಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts