More

    100 ಕೋಟಿ ಕ್ಲಬ್​ಗೆ ರಾಬರ್ಟ್​: ದರ್ಶನ್ ಕೆರಿಯರ್​ನಲ್ಲಿ ಹೊಸ ಮೈಲಿಗಲ್ಲು

    ಬೆಂಗಳೂರು: ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಮೊದಲ ವಾರದ ಕಲೆಕ್ಷನ್ 78 ಕೋಟಿ ರೂ.ಗಳು ಎಂದು ಚಿತ್ರತಂಡವೇ ಅಧಿಕೃತವಾಗಿ ಸಂತೋಷಕೂಟದಲ್ಲಿ ಘೋಷಿಸಿತ್ತು. ಈ ಮೂಲಕ ಸದ್ಯದಲ್ಲೇ ಚಿತ್ರವು 100 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ ಎಂಬ ಸುಳಿವು ಕೊಟ್ಟಿತ್ತು. ಇದೀಗ ಚಿತ್ರ ಬಿಡುಗಡೆಯಾದ 20 ದಿನಗಳಲ್ಲಿ -ರೂ;102.43 ಕೋಟಿ ಸಂಗ್ರಹವಾಗಿದೆ ಎಂಬ ಮಾಹಿತಿಯು ಚಿತ್ರತಂಡದಿಂದ ಹೊರಬಿದ್ದಿದೆ.

    ಮಾರ್ಚ್ 11ರಂದು ಬಿಡುಗಡೆಯಾದ ಚಿತ್ರವು 20 ದಿನಗಳ ಅವದಿಯಲ್ಲಿ -ರೂ;100 ಕೋಟಿ ಸಂಗ್ರಹಿಸಿರುವುದು ಒಂದು ಕಡೆಯಾದರೆ, -ರೂ;100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಈ ಹಿಂದೆ ‘ಕೆಜಿಎಫ್ – ಚಾಪ್ಟರ್ 1’ ಮತ್ತು ‘ಕುರುಕ್ಷೇತ್ರ’ ಚಿತ್ರಗಳು ಸಹ ಒಟ್ಟು -ರೂ;100 ಕೋಟಿ ಕಲೆಕ್ಷನ್ ಮಾಡಿದ್ದವು. ಆದರೆ, ಅದು ಬರೀ ಕನ್ನಡದ ಅವತರಣಿಕೆಯಷ್ಟೇ ಅಲ್ಲ, ಒಟ್ಟು ಐದು ಭಾಷೆಗಳಿಂದ ಆ ಮೊತ್ತ ಸಂಗ್ರಹವಾಗಿತ್ತು ಎಂದು ಹೇಳಲಾಗುತ್ತಿದೆ.

    ಈ ಪೈಕಿ, ಬರೀ ಬೆಂಗಳೂರು-ಕೋಲಾರ-ತುಮಕೂರು ಪ್ರದೇಶಗಳಿಂದಲೇ -ರೂ;30 ಕೋಟಿ ಸಂಗ್ರಹವಾಗಿದೆಯಂತೆ. ಮೈಸೂರು ಪ್ರದೇಶದಿಂದ 24, ದಾವಣಗೆರೆ ಮತ್ತು ಚಿತ್ರದುರ್ಗದಿಂದ 15, ಶಿವಮೊಗ್ಗದಿಂದ 9, ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದಿಂದ ಕ್ರಮವಾಗಿ -ರೂ;13 ಮತ್ತು 9 ಕೋಟಿ ಸಂಗ್ರಹವಾಗಿದೆ ಎಂದು ಹೇಳಲಾಗುತ್ತಿದೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿರುವ ಈ ಚಿತ್ರ ಕನ್ನಡದ ಜತೆಗೆ ತೆಲುಗಿನಲ್ಲಿಯೂ ಏಕಕಾಲದಲ್ಲಿ ಬಿಡುಗಡೆ ಆಗಿ, ಅಲ್ಲಿಂದಲೂ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಕಲೆಕ್ಷನ್ ವಿಚಾರದಲ್ಲೂ ಕಮಾಲ್ ಮಾಡಿದೆ.

    ಪ್ರಶಾಂತ್ ನೀಲ್ ಜತೆ ವಿಜಯ್ ಸಿನಿಮಾ?

    ಪ್ರಾಚ್ಯವಸ್ತು ಶಾಸ್ತ್ರಜ್ಞನಾದ ಅಕ್ಷಯ್ ಬಾಲಿವುಡ್ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts