More

    ಕನ್ನಡಕ್ಕೆ ಬಂದ ‘ರಾಬರ್ಟ್​’ ಮಂಗ್ಲಿ …

    ಬೆಂಗಳೂರು: ‘ರಾಬರ್ಟ್​’ನ ತೆಲುಗು ಅವತರಣಿಕೆಯ ‘ಕಣ್ಣೇ ಅದಿರಿಂದಿ …’ ಹಾಡಿನ ಮೂಲಕ ಸಖತ್ ಫೇಮಸ್​ ಆದವರು ತೆಲುಗಿನ ಗಾಯಕಿ ಮಂಗ್ಲಿ. ಅದಕ್ಕೂ ಮುನ್ನ ಹಲವು ಹಾಡುಗಳನ್ನು ಅವರು ಹಾಡಿದ್ದರೂ, ‘ಕಣ್ಣೇ ಅದಿರಿಂದಿ …’ ಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ. ಈ ಹಾಡಿನ ನಂತರ ಕರ್ನಾಟಕದಲ್ಲೂ ಸಖತ್​ ಫೇಮಸ್​ ಆಗಿದ್ದಾರೆ ಮಂಗ್ಲಿ.

    ಇದನ್ನೂ ಓದಿ: ಚಿತ್ರಮಂದಿರ ಭರ್ತಿಯಾಗತ್ತಾ ಅಥವಾ ಶಾಕ್‌ ಕೊಡತ್ತಾ? ಈ ವಿಚಾರದಲ್ಲಿ ಸರ್ಕಾರದ ನಿಲುವೇನು?

    ತೆಲುಗಿನಲ್ಲಿ ಜನಪ್ರಿಯ ಗಾಯಕಿಯಾಗಿರುವ ಮಂಗ್ಲಿ, ಈಗ ಕನ್ನಡಕ್ಕೂ ಎಂಟ್ರಿ ಕೊಟ್ಟಿದ್ದಾರೆ. ‘ಕರಿಯಾ ಐ ಲವ್​ ಯೂ’ ಎಂಬ ಹೊಸ ಚಿತ್ರದಲ್ಲಿ ಅವರೊಂದು ಹಾಡು ಹಾಡಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.

    ‘ಕರಿಯ ಐ ಲವ್ ಯೂ’ ಚಿತ್ರವನ್ನು ಶ್ರೀ ಮಂಜು ಪ್ರೊಡಕ್ಷನ್ಸ್​ನಡಿ ಮಂಜುನಾಥ್​ ಮಠದ್​ ನಿರ್ಮಿಸುವುದರ ಜತೆಗೆ, ಚಿತ್ರದ ಹೀರೋ ಆಗಿಯೂ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ರಚಿಸುವುದರ ಜತೆಗೆ ನಿರ್ದೆಶನವನ್ನು ತಿಪ್ಪೇಶ್​ ಹಾಲುವರ್ತಿ ಮಾಡುತ್ತಿದ್ದಾರೆ.

    ಈ ಚಿತ್ರಕ್ಕೆ ಲೋಕಿ ಸಂಗೀತ ಸಂಯೋಜಿಸಿದ್ದು, ಇತ್ತೀಚೆಗಷ್ಟೇ ಮಂಗ್ಲಿ ಅವರಿಂದ ಒಂದು ಹಾಡನ್ನು ಹಾಡಿಸಲಾಗಿದೆ. ಇದು ಮಂಗ್ಲಿ ಹಾಡಿರುವ ಮೊದಲ ಕನ್ನಡ ಹಾಡಾಗಿದ್ದು, ಹಾಡು ಹೇಗೆ ಮೂಡಿಬಂದಿದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.

    ಇದನ್ನೂ ಓದಿ: ಬಿಡುಗಡೆಗಿದು ಸಕಾಲ.. ಕನ್ನಡ ಚಿತ್ರರಂಗದಲ್ಲೀಗ 50:50

    ‘ಕರಿಯ ಐ ಲವ್​ ಯೂ’ ಚಿತ್ರದಲ್ಲಿ ಮಂಜು ಬಳ್ಳಾರಿ ಜತೆಗೆ ಶಾಕುಂತಲ, ಆಂಜನಪ್ಪ, ಗಿರೀಶ್​ ಜತ್ತಿ, ಚಂದ್ರಪ್ರಭ ಮುಂತಾದವರು ನಟಿಸುತ್ತಿದ್ದು, ಸದ್ಯದಲ್ಲೇ ಈ ಚಿತ್ರ ಬಿಡುಗಡೆಯಾಗಲಿದೆ.

    45 ಜನರಿಗೆ ಕರೊನಾ ಪಾಸಿಟಿವ್; ಅಕ್ಷಯ್ ಅಭಿನಯದ ರಾಮ್​ಸೇತು ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts