ಚಾಲೆಂಜಿಂಗ್ ದರ್ಶನ್ ನಾಯಕನಾಗಿ ನಟಿಸಿರುವ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ವೇಳೆಗೆ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ. ಕರೊನಾ ಹಾವಳಿಯಿಂದಾಗಿ ಚಿತ್ರಮಂದಿರ ಸ್ಥಗಿತಗೊಂಡವು. ಹಾಗಾಗಿ ಸದ್ಯಕ್ಕೆ ಬಿಡುಗಡೆ ಯಾವಾಗ ಎಂಬ ಬಗ್ಗೆ ನಿಖರ ಮಾಹಿತಿ ಚಿತ್ರತಂಡದ ಬಳಿಯೂ ಇಲ್ಲ. ಈ ನಡುವೆ ಇದೇ ಚಿತ್ರತಂಡ ಅಭಿಮಾನಿಗಳಿಗೆ ಮಾತ್ರ ನಿರಾಸೆ ಮಾಡುತ್ತಿಲ್ಲ. ಒಂದಿಲ್ಲೊಂದು ಪೋಸ್ಟರ್, ಟೀಸರ್ ಹಾಡಿನ ಮೂಲಕವೇ ಕ್ರೇಜ್ ಸೃಷ್ಟಿಸಿದೆ.
ಇದನ್ನೂ ಓದಿ; ಹುಟ್ಟುಹಬ್ಬಕ್ಕೆ ಗಿಡ ನೆಡಲು ಆಶಿಕಾ ಮನವಿ
ಇದೀಗ ರಾಮಮಂದಿರ ಶಿಲಾನ್ಯಾಸ ಕುರಿತಾಗಿಯೂ ರಾಬರ್ಟ್ ತಂಡದಿಂದ ವಿಶೇಷ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಇಂಗ್ಲಿಷ್ ವರ್ಣಮಾಲೆಯ 26 ಅಕ್ಷರಗಳಿಗೆ ರಾಬರ್ಟ್ ಟಚ್ ಕೊಟ್ಟಿದ್ದಾರೆ. ಅಂದರೆ, ಸೊಷಿಯಲ್ ಮೀಡಿಯಾ ಡಿಪಿಗಳಾಗಿ ಬಳಸಿಕೊಳ್ಳುವಂತೆ ದರ್ಶನ್ ಅವರ ಶ್ರೀರಾಮ ರೂಪಿ ಫೋಟೋಗಳನ್ನೂ ಆ್ಯಡ್ ಮಾಡಿದ್ದಾರೆ. ಅವೆಲ್ಲವುಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ ತರುಣ್.
"ಜೈ ಶ್ರೀ ರಾಮ್"#JaiShreeRam #profilepic#Roberrt https://t.co/uBGBOiuxFC
— Tharun Sudhir (@TharunSudhir) August 5, 2020
ರಾಬರ್ಟ್ ಚಿತ್ರದಲ್ಲಿ ದರ್ಶನ್ ಹಲವು ಬಗೆಯ ಪೋಷಾಕು ತೊಟ್ಟಿದ್ದಾರೆ. ಅದರಲ್ಲಿ ಶ್ರೀರಾಮನ ಭಕ್ತ ಹನುಮನಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸುದಿನವನ್ನೇ ಬಳಸಿಕೊಂಡಿರುವ ನಿರ್ದೇಶಕರು, ಅಕ್ಷರಗಳಲ್ಲಿಯೇ ಶ್ರೀರಾಮನನ್ನು ಸ್ಮರಿಸಿದ್ದಾರೆ.
ಇದನ್ನೂ ಓದಿ: ಕನ್ನಡಕ್ಕೆ ಕೋಕಿಲ: ನಯನ ತಾರಾ ಪಾತ್ರದಲ್ಲಿ ರಚಿತಾ
ಸದ್ಯ ಚಿತ್ರತಂಡದ ಈ ಕ್ರಿಯೆಟಿವಿಟಿಗೆ ಅಭಿಮಾನಿ ವಲಯದಿಂದಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆಯಾ ಅಕ್ಷರಗಳ ಅನುಸಾರ ಎಲ್ಲರೂ ಡಿಪಿಗಳನ್ನು ಇಟ್ಟುಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಜನ್ಮ ದಿನದ ನಿಮಿತ್ತ ಪೋಸ್ಟರ್ ಬಿಡುಗಡೆ ಮಾಡಿ, ಶುಭಾಶಯ ಕೋರಿತ್ತು.