More

    ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿಕೊಂಡ ‘ರಾಬರ್ಟ್’?!

    ಬೆಂಗಳೂರು: ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏ. 9ಕ್ಕೆ ರಾಬರ್ಟ್​ ಸಿನಿಮಾ ಬಿಡುಗಡೆ ಆಗಿರುತ್ತಿತ್ತು. ಇಷ್ಟೊತ್ತಿಗಾಗಲೇ ಚಿತ್ರದ ಗಳಿಕೆ ಮತ್ತು ಅದರ ಅಸಲಿಯತ್ತು ಗೊತ್ತಾಗಿರುತ್ತಿತ್ತು. ಆದರೂ ಈಗ ಕಾಲ ಮಿಂಚಿಲ್ಲ. ಅಂದರೆ, ಬಿಡುಗಡೆಗೆ ಮುನ್ನವೇ ಸಿನಿಮಾ ಕೋಟಿ ಕೋಟಿ ಮೊತ್ತವನ್ನೇ ಬಾಚಿಕೊಂಡಿದೆ. ಅರೇ ಸಿನಿಮಾನೇ ಬಿಡುಗಡೆ ಆಗಿಲ್ಲ ಅದ್ಹೇಗೆ ಸಿನಿಮಾ ಕೋಟಿ ಕಮಾಯಿ ಮಾಡಿತು? ಎಂಬ ಲೆಕ್ಕಾಚಾರ ಹಾಕುತ್ತಿದ್ದೀರಾ ಅದಕ್ಕೆ ಇಲ್ಲಿದೆ ಉತ್ತರ.
    ಹೌದು ದರ್ಶನ ಸಿನಿಮಾ ಅಂದಮೇಲೆ ನಿರೀಕ್ಷೆ ತುಸು ಜಾಸ್ತಿನೇ. ಈಗಾಗಲೇ ಪೋಸ್ಟರ್​, ಹಾಡು, ಟೀಸರ್​ ಮೂಲಕವೇ ಸದ್ದು ಮಾಡುತ್ತಿರುವ ‘ರಾಬರ್ಟ್’ ಬಿಡುಗಡೆಗೂ ಮುನ್ನ ಒಳ್ಳೇ ಗಳಿಕೆ ಮಾಡಿದೆ. ಟಿವಿ ಹಕ್ಕುಗಳನ್ನು ಉದಯ ಟಿವಿ ಪಡೆದುಕೊಂಡಿದ್ದು, ಒಟ್ಟು 8.2 ಕೋಟಿ ರೂ ನೀಡಿ ಹಕ್ಕುಗಳನ್ನು ಪಡೆದುಕೊಂಡಿದೆಯಂತೆ. ಅದೇ ರೀತಿ ಓಟಿಟಿ ಪ್ಲಾಟ್​ಫಾರ್ಮ್​ ಅಮೆಜಾನ್​ ಪ್ರೈಂ ಕಡೆಯಿಂದ 6.1 ಕೋಟಿಗೆ ಸೇಲ್​ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಷ್ಟೊಂದು ಮೊತ್ತ ನೀಡಿ ಹಕ್ಕುಗಳನ್ನು ಪಡೆದುಕೊಂಡಿದ್ದು ದರ್ಶನ್​ ಸಿನಿಮಾ ಕರಿಯರ್​ನಲ್ಲೇ ಇದೇ ಮೊದಲು ಎಂಬ ಮಾತುಗಳೂ ಕೇಳಿಬರುತ್ತಿವೆ.
    ಒಟ್ಟಿನಲ್ಲಿ ಈಗಾಗಲೇ ಕ್ರೇಜ್​ ಸೃಷ್ಟಿಸಿರುವ ‘ರಾಬರ್ಟ್‘ ಯಾವಾಗ ಬಿಡುಗಡೆ ಆಗಲಿದೆ ಎಂಬುದಕ್ಕೆ ಉತ್ತರ ಇಲ್ಲ. ಕರೊನಾ ತಣ್ಣಗಾದ ತಕ್ಷಣ ಚಿತ್ರಮಂದಿರಕ್ಕೆ ಬರಲಿದೆ ಎಂಬುದನ್ನೂ ಹೇಳುವುದು ಅಸಾಧ್ಯ. ತರುಣ್​ ಕಿಶೋರ್​ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ತೆಲುಗಿನಲ್ಲೂ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.​

    ‘ಸ್ಟೇ ಹೋಮ್​.. ಸ್ಟೇ ಸೇಫ್’​ ಎನ್ನುತ್ತಿವೆ ಉಪೇಂದ್ರ ‘ಕಬ್ಜ’ದ ಹೊಸ ಪೋಸ್ಟರ್​ಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts