More

    ಚರಂಡಿ ಇಲ್ಲದ ರಸ್ತೆ ನಿರ್ಮಾಣ!

    ಕಿರಣ ಹೂಗಾರ ಅಕ್ಕಿಆಲೂರ

    ಪಟ್ಟಣದ ಕುಮಾರ ನಗರದಲ್ಲಿ ರಸ್ತೆ ನಿರ್ವಿುಸಲಾಗುತ್ತಿದೆ. ಆದರೆ, ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿಲ್ಲ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಪಟ್ಟಣದ ಸಿಂಧೂರ ಸಿದ್ದಪ್ಪ ವೃತ್ತದಿಂದ ನರಸಿಂಗ್​ರಾವ್ ದೇಸಾಯಿ ರಸ್ತೆಯವರೆಗೆ ಮತ್ತು ಗಣೇಶ ದೇವಸ್ಥಾನದ ಎದುರಿನ ರಸ್ತೆ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು. ಲೋಕೋಪಯೋಗಿ ಇಲಾಖೆ 42 ಲಕ್ಷ ರೂ. ವೆಚ್ಚದಲ್ಲಿ 390 ಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡುತ್ತಿದೆ. ಪಟ್ಟಣದ 1 ವಾರ್ಡ್ ವ್ಯಾಪ್ತಿಗೆ ಒಳಪಡುವ ಕುಮಾರ ನಗರದ ಮೊದಲನೇ ಕ್ರಾಸ್​ನಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಆದರೆ, 390 ಮೀಟರ್ ರಸ್ತೆಗೆ ಕೇವಲ 220 ಮೀಟರ್ ಮಾತ್ರ ಚರಂಡಿ ನಿರ್ಮಾಣ ಕುರಿತು ಯೋಜನಾ ವರದಿಯಲ್ಲಿ ಪ್ರಸ್ತಾವನೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸದ್ಯ ಲೋಕೋಪಯೋಗಿ ಇಲಾಖೆ ನಿರ್ಮಾಣ ಮಾಡುತ್ತಿರುವ ರಸ್ತೆಗೆ ಚರಂಡಿ ಕೂಡಿರುವ ನಾಲ್ಕು ಕಡೆ ಸಿ.ಡಿ.(ಅಡ್ಡ ಚರಂಡಿ)ಗಳಿವೆ. ಚರಂಡಿ ನೀರು ಈ ಸಿ.ಡಿ.ಗಳ ಮೂಲಕ ಮುಂದೆ ಸಾಗಲು ಸಂಪರ್ಕ ಕಲ್ಪಿಸುವ ಚರಂಡಿ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ. ಇದನ್ನು ಗಮನಿಸದೆ ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮತ್ತು ಇಂಜಿನಿಯರ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

    ರಸ್ತೆಯ ಎರಡೂ ಬದಿಯಲ್ಲಿ ಎಲ್ಲಿಯೂ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಕೊಳಚೆ ರಸ್ತೆ ಮೇಲೆಯೇ ಹರಿಯುತ್ತಿದೆ. ಮಳೆ ಬಂದರಂತೂ ಸ್ಥಳೀಯ ನಿವಾಸಿಗಳ ಪಾಡು ಹೇಳತೀರದು. ಗಲೀಜು ನೀರು ರಸ್ತೆ ಮೇಲೆ ಹರಿದು ದುರ್ನಾತ ಬೀರುತ್ತದೆ.

    ಮೊದಲು ಎಲ್ಲ ಕಡೆಗಳಲ್ಲಿ ಸಮರ್ಪಕ ಚರಂಡಿ ನಿರ್ಮಾಣ ಮಾಡಿ, ನಂತರ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

    ಕುಮಾರ ನಗರದಲ್ಲಿ ನಿರ್ಮಾಣ ಮಾಡುತ್ತಿರುವ ರಸ್ತೆಯ ಎರಡು ಬದಿಗೂ ಚರಂಡಿ ನಿರ್ವಣವಾಗಬೇಕು. ಯೋಜನಾ ವರದಿಯಲ್ಲಿ 220 ಮೀಟರ್ ಮಾತ್ರ ಚರಂಡಿ ನಿರ್ವಣಕ್ಕೆ ಉದ್ದೇಶಿಸಿರುವುದು ಸರಿಯಲ್ಲ.

    | ಆನಂದ ಕುಬಸದ 1 ವಾರ್ಡ್ ಗ್ರಾಪಂ ಸದಸ್ಯ ಅಕ್ಕಿಆಲೂರ

    ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಮೊದಲು ರಸ್ತೆ ನಿರ್ಮಾಣ ಮಾಡಿ, ರಸ್ತೆ ಎತ್ತರಕ್ಕಿಂತ ಸ್ವಲ್ಪ ಕೆಳಗೆ ಚರಂಡಿ ನಿರ್ವಿುಸಲು ಗುತ್ತಿಗೆದಾರರ ಜತೆ ರ್ಚಚಿಸಿದ್ದೇನೆ. ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

    | ಮುರುಳಿಕೃಷ್ಣ ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts