More

    ಚಾಲನಾ ಪರವಾನಗಿ ಪಡೆದು ವಾಹನ ಚಲಾಯಿಸಿ

    ಬನ್ನೂರು: ಹದಿನೆಂಟು ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಗಿ ಪಡೆದು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಮನೋಜ್‌ಕುಮಾರ್ ತಿಳಿಸಿದರು.

    ಪಟ್ಟಣದದಲ್ಲಿ ರೋಟರಿ ಸಂಸ್ಥೆ, ಆರಕ್ಷಕ ಠಾಣೆ ಮತ್ತು ನವೋದಯ ಡ್ರೈವಿಂಗ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಅರಿವು ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಸ್ತೆಯಲ್ಲಿ ಹಾಕಿರುವಂತಹ ಫಲಕ ಹಾಗೂ ಟ್ರಾಫಿಕ್ ಸಂಕೇತ ಅರಿತು ವಾಹನ ಚಲಾಯಿಸುವುದರಿಂದ ಅಪಘಾತ ತಪ್ಪಿಸಬಹುದು ಎಂದು ಹೇಳಿದರು.

    ರೋಟರಿ ಮಾಜಿ ಅಧ್ಯಕ್ಷ ಎನ್.ಎಂ.ರಾಮಚಂದ್ರ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ವಾಹನ ನೀಡುವ ಮೊದಲು ಅದರಿಂದ ಆಗುವಂತಹ ಒಳಿತು ಕೆಡುಕಿನ ಬಗ್ಗೆ ತಿಳಿಸಿಕೊಡಬೇಕು. ಚಾಲನಾ ಪರವಾನಗಿ ಬಂದ ನಂತರ ವಾಹನ ನೀಡಬೇಕು ಎಂದು ಹೇಳಿದರು. ರೋಟರಿ ಇಂಟಾರ‌್ಯಾಕ್ಟ್ ಮಕ್ಕಳಿಂದ ಜಾಥಾ ನಡೆಯಿತು. ಜಯರಾಂ ನಾಯಕ್, ರಮೇಶ್, ರೋಟರಿ ಅಧ್ಯಕ್ಷ ಕೃಷ್ಣೇಗೌಡ, ರೋಟರಿ ಮಾಜಿ ಅಧ್ಯಕ್ಷ ಎನ್.ಎಂ.ರಾಮಚಂದ್ರ, ಬಿ.ಎಸ್.ಯೋಗೇಂದ್ರ, ವೆಂಕಟೇಶ್, ರಾಜೀವ್, ರಾಜೇಶ್‌ಗೌಡ, ಮುರಳಿ, ಮಾಣಿಕ್‌ಚಂದ್‌ಚೌಧರಿ, ಮಹೇಂದ್ರಸಿಂಗ್, ಪ್ರಸನ್ನ, ಒಡ್ಗಲ್ಲೇಗೌಡ ಹಲವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts