More

    ರಸ್ತೆಯಲ್ಲಿ ವಾಹನಗಳೇ ಇಲ್ಲ, ರಿಪೇರಿಗೆ ಇದೇ ಸಕಾಲ: ಡಾಂಬರು ಹಾಕಲು ಆದೇಶಿಸಿದ ತೆಲಂಗಾಣ ಸಿಎಂ

    ಹೈದರಾಬಾದ್​: ರಸ್ತೆ ದುರಸ್ತಿಗಾಗಿ ಸಂಚಾರ ನಿರ್ಬಂಧಿಸಿದಾಗ ಅಥವಾ ವಾಹನ ದಟ್ಟಣೆ ಉಂಟಾದಾಗ, ರಜಾ ಅವಧಿಯಲ್ಲಿ, ವಾಹನ ಸಂಚಾರ ಕಡಿಮೆ ಇರುವ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬಾರದೇಕೆ ಎಂದು ಸ್ಥಳೀಯಾಡಳಿತಕ್ಕೆ ಶಾಪ ಹಾಕಿರುತ್ತೇವೆ. ಅಂತೆಯೇ, ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನಗಳೇ ಇಲ್ಲ ಎನ್ನುವಂತಾಗಿದೆ. ಹೀಗಿರುವಾಗ ರಸ್ತೆ ರಿಪೇರಿ ಮಾಡಿಸಬಾರದೇ ಎಂಬ ಯೋಚನೆ ನಮ್ಮಲ್ಲಿ ಕೆಲವರಲ್ಲಾದರೂ ಬಂದಿರಲಿಕ್ಕೆ ಸಾಕು. ಇಂಥದ್ದೇ ಯೋಚನೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ ರಾವ್​ ಅವರಿಗೂ ಬಂದಿದೆ. ಹೀಗಾಗಿ ಹೈದರಾಬಾದ್​ನ ಎಲ್ಲ ಪ್ರಮುಖ ರಸ್ತೆಗಳ ಸುಸ್ಥಿತಿಗೆ ಕ್ರಮ ಕೈಗೊಳ್ಳುವಂತೆ ಗುರುವಾರ ಸೂಚಿಸಿದ್ದಾರೆ. ಹೀಗಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಗರಾಭಿವೃದ್ಧಿ ಇಲಾಖೆ ಕಾಯರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

    ಸದ್ಯ ಹೈದರಾಬಾದ್​ನಲ್ಲಿ ಜನ ಸಂಚಾರ ಅತ್ಯಂತ ವಿರಳವಾಗಿದೆ. ರಾಜಧಾನಿಯಲ್ಲಿರುವ ಬಹುತೇಕರು ಲಾಕ್​ಡೌನ್​ ಘೋಷಣೆ ಬಳಿಕ ಹಳ್ಳಿಗಳತ್ತ ಮುಖಮಾಡಿದ್ದಾರೆ. ಹೈದರಾಬಾದ್​ಗೆ ಹೊಂದಿಕೊಂಡಂತ ಜಿಲ್ಲೆಗಳಲ್ಲಿ ಜನರು ಹೆಚ್ಚಾಗಿರುವುದು ಕಂಡು ಬಂದಿದೆ.

    ಈ ನಡುವೆ, ಕರೊನಾ ಹಬ್ಬುವುದನ್ನು ತಡೆಗಟ್ಟಲು ರಸ್ತೆಗಳಲ್ಲಿ ಉಗಿಯುವುದನ್ನು ತೆಲಂಗಾಣ ಸರ್ಕಾರ ನಿಷೇಧಿಸಿದೆ. ಪಾನ್​ ಮಸಾಲಾ, ಗುಟ್ಕಾ, ಎಲೆಅಡಿಕೆ, ತಂಬಾಕು ಹಾಗೂ ತಂಬಾಕು ಉತ್ಪನ್ನ ಮೊದಲಾದವುಗಳನ್ನು ಸೇವಿಸಿ ರಸ್ತೆ ಮೇಲೆ, ಸಾರ್ವಜನಿಕ ಸ್ಥಳಗಳು ಹಾಗೂ ಸಂಸ್ಥೆಗಳಲ್ಲಿ ಉಗಿಯುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

    ಪಿಲಾನಿಯ ಬಿರ್ಲಾ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಆ್ಯಂಡ್​ ಸೈನ್ಸ್​ ವಿದ್ಯಾರ್ಥಿಗಳು ಕರೊನಾ ಮುಂಚೂಣಿ ಪಡೆಯವರಿಗಾಗಿ ಮರುಬಳಕೆಯ ಫೇಸ್​ಶೀಲ್ಡ್​ಗಳನ್ನು ತಯಾರಿಸಿದ್ದಾರೆ. ಒಂದು ಫೇಸ್​ಶೀಲ್ಡ್​ ತಯಾರಿಕಾ ವೆಚ್ಚ 40 ರೂ. ಎಂದು ಅಂದಾಜಿಸಲಾಗಿದೆ.

    ಈ ನಡುವೆ, ಹೈದರಾಬಾದ್​ನಲ್ಲಿ ಕೋವಿಡ್​ನ 12 ಹಾಟ್​ಸ್ಪಾಟ್​ಗಳನ್ನು ಗುರುತಿಸಲಾಗಿದೆ ಎಮದು ಅಧಿಕಾರಿಗಳು ತಿಳಿಸಿದ್ದಾರೆ.

    ಸರ್ಕಾರದ ಪರಿಹಾರ ಸಾಮಗ್ರಿಗೆ ಫೋಟೋ ಅಂಟಿಸಿಕೊಂಡಿರುವ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಮಾಜಿ ಸಿಎಂ ಎಚ್​ಡಿಕೆ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts