More

    ಶಾಲೆಗೆ ತೆರಳುವ ರಸ್ತೆ ದುರವಸ್ಥೆಗೆ ಬೇಸತ್ತು ವಿದ್ಯಾರ್ಥಿಗಳೇ ದುರಸ್ತಿ ಮಾಡಿದ್ರು; ಮಕ್ಕಳ ದಿನಾಚರಣೆಯಂದು ಶ್ರಮದಾನ

    ಉಡುಪಿ: ಶಾಲೆಗೆ ತೆರಳುವರ ರಸ್ತೆಯ ದುರವಸ್ಥೆಯನ್ನು ನೋಡಿ ನೋಡಿ ಬೇಸತ್ತು ರೋಸಿ ಹೋದ ವಿದ್ಯಾರ್ಥಿಗಳೇ ಅದನ್ನು ದುರಸ್ತಿ ಮಾಡಿದ ಪ್ರಕರಣವೊಂದು ಮಕ್ಕಳ ದಿನಾಚರಣೆಯಂದು ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

    ಬೈಂದೂರು ತಾಲೂಕು ತಗ್ಗರ್ಸೆ ಗ್ರಾಮ ಮೂಡಣ ಬೈಲು ರಸ್ತೆ ಮೂಲಕ ಶಾಲೆಗೆ ತೆರಳುತ್ತಿದ್ದು, ಅದನ್ನು ವಿದ್ಯಾರ್ಥಿಗಳೇ ಇಂದು ದುರಸ್ತಿ ಮಾಡಿದರು. ಜಿಲ್ಲಾ ಪಂಚಾಯತ್​ ರಸ್ತೆ ಇದಾಗಿದ್ದು, ದುರವಸ್ಥೆಗೆ ಒಳಗಾಗಿ ಬಹಳ ಸಮಯವಾಗಿದ್ದರೂ ದುರಸ್ತಿ ಆಗಿರಲಿಲ್ಲ.

    ಸ್ಥಳೀಯರು ಈ ಕುರಿತು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಡಾಂಬರ್ ರಸ್ತೆಯ ಕೆಲವೆಡೆ ಸಂಪೂರ್ಣ ಕಿತ್ತು ಹೋಗಿ ಸಂಚಾರಕ್ಕೆ ತೊಡಕಾಗಿದ್ದಷ್ಟೇ ಅಲ್ಲದೆ, ಶಾಲಾ-ಕಾಲೇಜು ಮಕ್ಕಳು ನಿತ್ಯ ಸಂಚರಿಸುವ ಈ ರಸ್ತೆಯನ್ನು ದುರಸ್ತಿಗೊಳಿಸಲು ಅಧಿಕಾರಿಗಳು ಮನಸು ಮಾಡಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳೇ ಇಂದು ಹಾರೆ ಹಿಡಿದು ರಸ್ತೆಯನ್ನು ತಕ್ಕಮಟ್ಟಿಗೆ ದುರಸ್ತಿ ಪಡಿಸಿದರು.

    ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

    ಮೂರು ವರ್ಷದ ಮಗುವನ್ನೂ ಬಿಡದ ಕಾಮುಕ ಮುದುಕ; ಅತ್ಯಾಚಾರ ಆರೋಪಿಯ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts