More

    ಅರಾಟೆ ಸಂಪರ್ಕ ಸಂಚಾರ ದುಸ್ತರ, ಮಳೆ ನೀರಿಗೆ ಕೊಚ್ಚಿಹೋದ ಕಚ್ಚಾರಸ್ತೆ

    ಬಿ.ರಾಘವೇಂದ್ರ ಪೈ ಗಂಗೊಳ್ಳಿ

    ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮದ ಅರಾಟೆ ನಾವಡರಕೇರಿಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೊಳಿಸಬೇಕೆಂದು ಜನ ಆಗ್ರಹಿಸಿದ್ದಾರೆ.
    ಕಂಬಾಳಬೆಟ್ಟು, ನಾವಡರ ಕೆರೆ, ಶೇಡಿಗುಡಿ ಮಕ್ಕಿ, ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಸಂಚಾರ ಕಷ್ಟವಾಗುತ್ತಿದೆ. ಹಲವು ವರ್ಷಗಳ ಹಿಂದೆ ಮಣ್ಣಿನ ರಸ್ತೆಗೆ ದೊಡ್ಡ ಗಾತ್ರದ ಜಲ್ಲಿಕಲ್ಲು ಹಾಕಿ ಕಚ್ಚಾರಸ್ತೆ ಮಾಡಲಾಗಿತ್ತು. ಬಳಿಕ ಮಳೆ ನೀರಿನ ಹೊಡೆತಕ್ಕೆ ಮಣ್ಣು ಕೊಚ್ಚಿಕೊಂಡು ಹೋಗಿ ಜಲ್ಲಿ ಕಲ್ಲುಗಳು ಎದ್ದಿವೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ಸಾಹಸದ ವಿಷಯ ಎಂಬಂತಾಗಿದೆ. ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ಹರಿಯುವುದರಿಂದ ಕೆಸರಿನಿಂದ ಆವೃತ್ತವಾದ ರಸ್ತೆಯಲ್ಲಿ ಶಾಲೆಗೆ ಮಕ್ಕಳು ತೆರಳಲು, ಆಸ್ಪತ್ರೆಗೆ ಹೋಗಲು ನಿತ್ಯ ಪ್ರಯಾಣಕ್ಕೆ ತೊಂದರೆಯಾಗಿದೆ.

    ರಸ್ತೆ ಅಭಿವೃದ್ಧಿಗೆ ಬೇಡಿಕೆ
    ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೊಂಡಲ್ಲಿ ಈ ಕೇರಿಯಲ್ಲಿ ವಾಸವಾಗಿರುವ 20ಕ್ಕೂ ಅಧಿಕ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಮಣ್ಣಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಿಕೊಡಬೇಕು ಎಂದು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ.

    ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಪ್ರಯಾಣ ಕಷ್ಟಕರವಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಕೆಸರಿನಿಂದ ಕೂಡಿರುತ್ತದೆ. ಮಕ್ಕಳು ಶಾಲೆಗೆ ತೆರಳಲು, ಆಸ್ಪತ್ರೆಗೆ ಹೋಗಲು ಈ ದಾರಿಯಲ್ಲಿ ಸಂಚರಿಸಲು ಕಷ್ಟವಾಗುತ್ತದೆ. ಹೊಸಾಡು ಗ್ರಾಮ ಪಂಚಾಯಿತಿ ಹಾಗೂ ಹಿಂದಿನ ಶಾಸಕರಿಗೆ ರಸ್ತೆ ಅಭಿವೃದ್ಧಿಪಡಿಸುವಂತೆ ಮನವಿ ನೀಡಲಾಗಿತ್ತು. ಶಾಸಕರು ರಸ್ತೆ ಅಭಿವೃದ್ಧಿ ಪಡಿಸುವ ಕುರಿತು ಗಮನ ಹರಿಸಬೇಕು.
    ವಿಶ್ವಂಭರ ಐತಾಳ್, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts