More

    ರಸ್ತೆ ಮಾರಾಟಕ್ಕಿದೆ..!

    ಕಾರವಾರ: ಹಾಳಾದ ರಸ್ತೆ ರಿಪೇರಿ ಮಾಡಿಲ್ಲ ಎಂಬ ಕಾರಣಕ್ಕೆ ಅದೇ ಜಾಗ ಮಾರಾಟಕ್ಕಿದೆ ಎಂದು ಫಲಕ ಅಳವಡಿಸಿ ಜಾಲತಾಣಗಳಲ್ಲಿ ಹರಿಬಿಟ್ಟ ಸ್ಥಳೀಯನೊಬ್ಬ ವಿಭಿನ್ನ ಪ್ರತಿಭಟನೆ ನಡೆಸಿದ್ದಾನೆ. ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಗುಂಡಬಾಳ ಬಳಿ ವರ್ಷದ ಹಿಂದೆ ಧರೆ ಕುಸಿದು ವಾಹನ ಸಂಚಾರಕ್ಕೆ ವ್ಯಾತ್ಯಯ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಕುಸಿದ ಭಾಗದಲ್ಲಿ ಒಂದು ಕಂಪೌಂಡ್ ಕಟ್ಟಿ ಬಿಟ್ಟಿದೆ. ಯಾವುದೇ ಶಾಶ್ವತ ಕಾಮಗಾರಿ ನಡೆಸಿಲ್ಲ.

    ಇದರಿಂದ ಗುಂಡಬಾಳದ ರಾಜೇಶ ಶೇಟ್ ಎಂಬುವವರು ಅಲ್ಲೊಂದು ಫಲಕ ಅಳವಡಿಸಿ, ‘ಜಾಗ ಮಾರಾಟಕ್ಕಿದೆ. ವ್ಯವಸ್ಥಾಪಕರು -ಶಾಸಕರು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ’ ಎಂದು ಬರೆದಿದ್ದಾರೆ. ಅಲ್ಲದೆ, ಅಲ್ಲಿನ ಪರಿಸ್ಥಿತಿಯನ್ನು ಫೋಟೋ ಹಾಗೂ ವಿವರಗಳನ್ನು ಫೇಸ್​ಬುಕ್​ನಲ್ಲಿ ಬರೆದಿದ್ದು, ಫೋಟೋ ಸಾಕಷ್ಟು ವೈರಲ್ ಆಗಿದೆ.

    ಶಿರಸಿ -ಕುಮಟಾ ದೇವಿಮನೆ ಘಟ್ಟ ಬಂದಾದರೆ ಕರಾವಳಿಯಿಂದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ 206 ಪ್ರಮುಖವಾಗಲಿದೆ. ಆದರೆ, ಒಂದುವರೆ ವರ್ಷ ಕಳೆದರೂ ಶಾಶ್ವತ ಕಾಮಗಾರಿ ಕೈಗೊಳ್ಳದೆ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ ಎಂದು ಅವರು ದೂರಿದ್ದಾರೆ.

    ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಕೈ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts