More

    ರಸ್ತೆ ಅಭಿವೃದ್ಧಿಗೆ ಮೀನ ಮೇಷ:ರಸ್ತೆಗಳ ಅಭಿವೃದ್ಧಿ ಕೇವಲ ಜನಪ್ರತಿನಿಧಿಗಳ ಭಾಷಣಕ್ಕೆ ಸೀಮಿತ

    ಕೋಲಾರ : ಜಿಲ್ಲಾ ಕೇಂದ್ರವಾದ ಕೋಲಾರ ನಗರದಲ್ಲಿ ರಸ್ತೆಗಳ ಅಭಿವೃದ್ಧಿ ಕೇವಲ ಜನಪ್ರತಿನಿಧಿಗಳ ಭಾಷಣಕ್ಕೆ ಸೀಮಿತವಾಗಿಯೇ ಹೊರತು ಯಾವುದೇ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ.
    ನಗರ ವ್ಯಾಪ್ತಿಯಲ್ಲಿ ಇರುವ ಬಹುತೇಕ ರಸ್ತೆಗಳು ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯ ನಗರಸಭೆಗೆ ಸೇರಿದೆಯಾದರೂ ಸಮನ್ವಯ ಹಾಗೂ ಇಚ್ಛಾಶಕ್ತಿ ಕೊರತೆಯಿಂದಾಗಿ ಜನ ಹೈರಾಣರಾಗುವ ಪರಿಸ್ಥಿತಿ ತಂದೊಡ್ಡಿದೆ.

    ನಗರದ ಪ್ರಮುಖ ಎಂ.ಬಿ ರಸ್ತೆಗೆ ಕಳೆದ 10 ವರ್ಷಗಳಲ್ಲಿ ಸಾರ್ವಜನಿಕರ ತೆರಿಗೆ ಹಣ ಬಳಸಿ 3ರಿಂದ 4 ಬಾರಿ ಡಾಂಬರು ಹಾಕಿದ್ದರೂ ಗುಣಮಟ್ಟದ ಕಾಮಗಾರಿ ಇಲ್ಲದೆ ಗುಂಡಿಮಯವಾಗಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಮತ್ತು ಉಸ್ತುವಾರಿ ಇಂಜನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳದೆ ಇರುವ ಅಧಿಕಾರಿಗಳ ಬಗ್ಗೆ ಅನುವಾನ ಮೂಡಿಸಿದೆ.

    ಕೋಲಾರದ ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತ ಹಾಗೂ ್ಲೈ ಓವರ್‌ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ವ್ಯವಸ್ಥಿತವಾಗಿ ನಡೆದಿಲ್ಲ. ಪಾದಚಾರಿಗಳ ಅನುಕೂಲಕ್ಕಾಗಿ ಇರುವ ಪುಟ್‌ಪಾತ್‌ಗಳನ್ನು ರಸ್ತೆ ಬದಿ ವ್ಯಾಪಾರಿಗಳು ಒತ್ತುವರಿ ವಾಡಿಕೊಂಡಿದ್ದಾರೆ. ಖಾಸಗಿ ವಾಹನಗಳಿಗೆ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ಪುಟ್‌ಪಾತ್‌ಗಳ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ.

    ರಸ್ತೆಗಳ ಇಕ್ಕಲಗಳಲ್ಲಿ ನಿರ್ಮಿಸಿರುವ ಚರಂಡಿಗಳ ವಿನ್ಯಾಸ ಅವೈಜ್ಞಾನಿಕವಾಗಿದೆ. ಕನಿಷ್ಠ ವಾರಕ್ಕೆ ಒಮ್ಮೆ ರಸ್ತೆಗಳ ಬದುವಿನಲ್ಲಿ ಮರಳನ್ನು ತೆರವುಗೊಳಿಸದಿರುವುದರಿಂದ ಮಳೆ ನೀರು ಹರಿಯದೆ ಪರಿಸರಕ್ಕೆ ಹಾನಿಯಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮೌನಕ್ಕೆ ಶರಣಾಗಿರುವುದು ಜನರ ಆಕ್ರೋಶಕ್ಕೆ ಎಡೆ ವಾಡಿದೆ.

    ನಗರಸಭೆಯಿಂದ ವಿವಿಧ ವಾರ್ಡ್‌ಗಳಲ್ಲಿ ಅಮತಸಿಟಿ ಯೋಜನೆ, ನಗರೋತ್ಥಾನ, 14 ಮತ್ತು 15ನೇ ಹಣಕಾಸು ಯೋಜನೆಯಡಿ ಸಿಮೆಂಟ್ ರಸ್ತೆ ವಾಡಲಾಗಿದ್ದು, ಗುಣಮಟ್ಟಕ್ಕೆ ಆದ್ಯತೆ ನೀಡದಿರುವುದರಿಂದ ರಸ್ತೆಗಳಲ್ಲಿ ಗುಂಡಿ ಬಿದ್ದು ಹೊಂಡಗಳಾಗಿ ಪರಿವರ್ತನೆಗೊಂಡಿವೆ. ನಗರಸಭೆ ಸದಸ್ಯರಾಗಲೀ, ಎಂಎಲ್‌ಎ, ಎಂಎಲ್‌ಸಿಗಳು ಮೌನ ವಹಿಸಿರುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

    ಬಾಯಿ ತೆರೆದಿದೆ ವ್ಯಾನ್ ಹೋಲ್: ರಸ್ತೆ ನಿಯಮಗಳ ಪ್ರಕಾರ ಯುಜಿಡಿಗೆ ಸಂಬಂಧಿಸಿದ ವ್ಯಾನ್ ಹೋಲ್‌ಗಳನ್ನು ರಸ್ತೆಯ ಮಧ್ಯ ಭಾಗದಿಂದ ತೆರವುಗೊಳಿಸಿ ಪುಟ್‌ಪಾತ್ ಜಾಗದಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ನಿರ್ಮಿಸಬೇಕು. ಆದರೆ ನಗರದ ಬಹುತೇಕ ಕಡೆ ವ್ಯಾನ್ ಹೋಲ್‌ಗಳು ರಸ್ತೆ ಮಧ್ಯೆ ಇವೆ. ಕೆಲವು ಕಡೆ ವ್ಯಾನ್ ಹೋಲ್ ಮುಚ್ಚಳಗಳು ಬಾಯಿ ತೆರೆದುಕೊಂಡಿವೆ. ಟೇಕಲ್ ರಸ್ತೆಯ ಮಿನಿ ಹೋಟಲ್ ವೃತ್ತದ ಬಳಿ ಕಳೆದ ಐದಾರು ವರ್ಷಗಳಿಂದ ವ್ಯಾನ್ ಹೋಲ್ ದುರಸ್ತಿಗೆ ನಗರಸಭೆ ಗಮನ ಹರಿಸಿಲ್ಲ.

    ಕರೆಂಟ್ ಕಂಬಳ ತೆರವು ವಿಳಂಬ:
    ನಗರದ ಇಟಿಸಿಎಂ ಪಕ್ಕದ ರಸ್ತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ವರ್ಷದ ಹಿಂದೆ ಶಂಕುಸ್ಥಾಪನೆ ವಾಡಿದ್ದು, ಕರೆಂಟ್ ಕಂಬಳನ್ನು ತೆರವು ವಾಡಲು ಬೆಸ್ಕಾಂ ಇಲಾಖೆ ಕೇಳಿರುವ 25 ಲಕ್ಷ ರೂ. ಒದಗಿಸಿಕೊಡಲು ನಗರಸಭೆ ವಿಳಂಬ ವಾಡುತ್ತಿರುವುದರಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ಸದರಿ ರಸ್ತೆಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ಪ್ರತ್ಯೇಕ ಒಳ ಚರಂಡಿಯ ಜತೆಗೆ ಮಳೆ ನೀರು ಚರಂಡಿ ನಿರ್ವಾಣಕ್ಕೆ ಉದ್ದೇಶಿಸಿ ಸಕಾಲಕ್ಕೆ ಕಾಮಗಾರಿ ನಡೆಯದೆ ಪಾಳು ಬಿದ್ದಿದೆ. ರಸ್ತೆಗೆ ಹೊಂದಿಕೊಂಡಿರುವ ಕೆಇಬಿ ರಸ್ತೆಯಲ್ಲೂ ಗುಂಡಿಗಳು ಬಿದ್ದಿದ್ದು ಮಳೆಗಾಲದಲ್ಲಿ ಕೊಳಚೆ ನೀರು ರಸ್ತೆಗೆ ಹರಿಯುತ್ತದೆ.

     

    ಎಂಪಿ, ಎಂಎಲ್‌ಎ, ಎಂಎಲ್‌ಸಿಗಳು ಹೈಟೆಕ್ ಕಾರುಗಳಲ್ಲಿ ಓಡಾಡುವುದರಿಂದ ರಸ್ತೆ ಸಮಸ್ಯೆ ಅರಿವಿಗೆ ಬಂದಂತೆ ಕಾಣುತ್ತಿಲ್ಲ. ಗುಣಮಟ್ಟದ ರಸ್ತೆಗಳ ನಿರ್ವಾಣಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಮಂಜೂರು ವಾಡಿಸುವ ಬದಲು ದುರಸ್ತಿಗಾಗಿ ಕಂತುಗಳ ರೂಪದಲ್ಲಿ ಅನುದಾನ ತಂದು ಬೇಕಾಬಿಟ್ಟಿಯಾಗಿ ಕೆಲಸ ವಾಡಿಸುತ್ತಿರುವುದರಿಂದ ರಸ್ತೆಗಳಿಗೆ ಮುಕ್ತಿ ಸಿಗದಂತಾಗಿದೆ.
    ಕುರುಬರಪೇಟೆ ವೆಂಕಟೇಶ್, ಸಂಚಾಲಕರು, ನಾಗರೀಕ ಹಿತ ರಕ್ಷಣಾ ವೇದಿಕೆ, ಕೋಲಾರ

    ಕೋಲಾರ ನಗರದಲ್ಲಿ ರಸ್ತೆಗಳು ಹಾಳಾಗಿರುವುದರಿಂದ ಜನ ಬೇಸತ್ತಿದ್ದಾರೆ. ಅಭಿವೃದ್ಧಿಗೆ 17 ಕೋಟಿ ರೂ. ಪ್ರಸ್ತಾವನೆಯನ್ನು ಸಿಎಂಗೆ ಸಲ್ಲಿಸಲಾಗಿದೆ. ಜನರ ಅನುಕೂಲಕ್ಕೆ ಪ್ರಾವಾಣಿಕ ಪ್ರಯತ್ನ ವಾಡುತ್ತಿರುವೆ. ಅಧಿವೇಶನದಲ್ಲೂ ಕೋಲಾರ ನಗರದ ಅಭಿವೃದ್ಧಿ ವಿಚಾರವಾಗಿ ಗಮನ ಸೆಳೆಯುವೆ.
    ಇಂಚರ ಗೋವಿಂದರಾಜು, ಎಂಎಲ್‌ಸಿ, ಕೋಲಾರ

     

    ಕೋಲಾರ ನಗರದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮಂಜೂರು ಆಗಿದೆ. ಗುತ್ತಿಗೆದಾರರು ಸಕಾಲಕ್ಕೆ ಕಾಮಗಾರಿ ಕೈಗೊಳ್ಳದಿರುವುದು ವಿಳಂಬಕ್ಕೆ ಕಾರಣವಾಗಿದೆ. ಈ ಸಂಬಂಧ ಗುತ್ತಿಗೆದಾರರ ಜತೆ ಮಾತನಾಡಿರುವೆ, ಅದಷ್ಟು ಬೇಗನೆ ಕೆಲಸ ಆರಂಭ ಆಗಲಿದೆ.
    ಕೆ.ಶ್ರೀನಿವಾಸಗೌಡ, ಶಾಸಕರು, ಕೋಲಾರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts