More

    ಈ ಊರಲ್ಲಿದ್ಯಂತೆ ಕರೊನಾಗಿಂತಲೂ ವೇಗವಾಗಿ ಹರಡುವ ವಿಚಿತ್ರ ರೋಗ; ಎಲೆಕ್ಷನ್​ ಆಮೇಲೆ, ಮೊದ್ಲು ಇಂಜೆಕ್ಷನ್ ಕೊಡಿ ಅಂದ್ರು ಮಾಜಿ ಸಚಿವ!

    ಹಾಸನ: ಕರೊನಾ ಬಂದು ಹೋದ ಮೇಲೆ ಬಗೆಬಗೆಯ ರೋಗಗಳು ಬಂದಿರುವುದು ಹೊಸದೇನಲ್ಲ. ಮತ್ತೊಂದೆಡೆ ಕರೊನಾ ಮೂರನೇ ಅಲೆಯ ಆತಂಕದ ನಡುವೆಯೇ ಇನ್ನೊಂದು ವಿಚಿತ್ರ ರೋಗ ಕಾಡುತ್ತಿದೆ ಎಂದು ಮಾಜಿ ಸಚಿವರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಚುನಾವಣೆ ಆಮೇಲೆ ಮಾಡಿ, ಮೊದಲು ಲಸಿಕೆ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಹಾಸನದಲ್ಲಿ ಹೊಸದೊಂದು ಕಾಯಿಲೆ ಕಾಡುತ್ತಿದೆ. ಯಾವ ಥರದ ರೋಗ ಎಂಬುವುದು ಕೂಡ ಗೊತ್ತಾಗುತ್ತಿಲ್ಲ. ಇದು 24 ಗಂಟೆಗಳಲ್ಲಿ ವೇಗವಾಗಿ ಹರಡುತ್ತಿದೆ ಎಂದು ಮಾಜಿ ಸಚಿವ ಎಚ್​.ಡಿ. ರೇವಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಶಾಲೆಗೆ ಹೋಗಿ ಬಂದಿದ್ದಕ್ಕೂ ಮನೆಯಲ್ಲಿ ವಿಶೇಷ ಸ್ವಾಗತ; ತೆಂಗಿನಕಾಯಿ ಒಡೆದು, ಮಗನಿಗೆ ಹಾರ ಹಾಕಿ ಸ್ವಾಗತಿಸಿದ ತಂದೆ-ತಾಯಿ

    ಅಂದಹಾಗೆ ಹಾಸನದಲ್ಲಿ ಇಂಥದ್ದೊಂದು ವಿಚಿತ್ರ ಕಾಯಿಲೆ ಕಾಡುತ್ತಿರುವುದು ಹಸುಗಳನ್ನು. ನಾವು ಕಾಯಿಲೆ‌ ಬಂದಾಗ ಇಂಜೆಕ್ಷನ್ ಹಾಕಿಸಿಕೊಳ್ಳುತ್ತೇವೆ. ದನಕರುಗಳು ಏನು ಮಾಡುತ್ತವೆ? ಎಂದಿರುವ ರೇವಣ್ಣ, ಈ ಜಿಲ್ಲೆಯಲ್ಲಿ ಎಷ್ಟು ಹಸುಗಳಿವೆ, ಎಷ್ಟು ದನಗಳಿಗೆ ಲಸಿಕೆ ಹಾಕಿದ್ದಾರೆ ಲೆಕ್ಕ‌ ಕೊಡಿ ಎಂದು ಕೇಳಿದ್ದಾರೆ. ಮಾತ್ರವಲ್ಲ, ಹಸುಗಳನ್ನು ಕಾಡುವ ಈ ರೋಗ ಕರೊನಾಗಿಂತಲೂ ವೇಗವಾಗಿ ಹಬ್ಬುತ್ತಿದೆ, ಜಿಲ್ಲಾಧಿಕಾರಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ನಡೆದುಹೋಯ್ತು ಭೀಕರ ಕೊಲೆ; ವೃದ್ಧನನ್ನು ದಾಯಾದಿಗಳೇ ಹೊಡೆದು ಕೊಂದರು..

    ಈಗಾಗಲೇ 2,500 ಹಸುಗಳು ಕಾಯಿಲೆಯಿಂದ ಸಾವಿಗೀಡಾಗಿವೆ. ಪಶುಸಂಗೋಪನೆ ಮಂತ್ರಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಫೋನ್ ಮಾಡಿ ಮಾತನಾಡಿದರೆ ಬೀದರ್​ನಲ್ಲಿ ಕಸ ಗುಡಿಸುತ್ತು ಇದ್ದೇನೆ ಎನ್ನುತ್ತಾರೆ. ಬೀದರ್ ಆಮೇಲೆ ಕ್ಲೀನ್ ಮಾಡ್ಲಿ, ಮೊದಲು ಹಸುಗಳನ್ನು ನೋಡ್ಲಿ ಎಂದಿರುವ ರೇವಣ್ಣ, ಎಲೆಕ್ಷನ್​ ಆಮೇಲೆ ಮಾಡೋಣ, ಕೂಡಲೇ ಇಂಜೆಕ್ಷನ್​ ಕೊಡಬೇಕು ಎಂದಿದ್ದಾರೆ.

    ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    18 ವರ್ಷಕ್ಕೆ ಕೊಲೆ ಮಾಡಿದ್ದವ 36 ವರ್ಷಕ್ಕೇ ಕೊಲೆಯಾಗಿ ಹೋದ; ಜೈಲಿಂದ ಬಿಡುಗಡೆಯಾದ ಮೂರೇ ದಿನದಲ್ಲಿ ಈ ಲೋಕದಿಂದಲೇ ಬಿಡುಗಡೆ!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts