More

    ನದಿ ಸ್ವಚ್ಛತೆಯಲ್ಲಿ ಜಾಗೃತಿವಹಿಸಿ

    ಕಂಪ್ಲಿ: ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಕೊರತೆಯಿಂದ ನದಿಯಲ್ಲಿ ನೀರಿನ ಹರಿವು ಕುಗ್ಗುತ್ತಿದೆ. ಕುಡಿವ ನೀರು ಒದಗಿಸುವುದೇ ಕಷ್ಟವಾಗಿರುವ ವೇಳೆ ನದಿ ನೀರು ಕಲುಷಿತಗೊಳಿಸುವ ಚಟುವಟಿಕೆ ನಿರಂತರ ಸಾಗಿದ್ದು, ತುಂಗಭದ್ರೆಯ ಪಾವಿತ್ರೃತೆ, ನೈರ್ಮಲ್ಯತೆ ಕಾಪಾಡುವ ಹೊಣೆ ಯಾರದೆಂಬ ಪ್ರಶ್ನೆ ಎದುರಾಗಿದೆ.

    ಇದನ್ನೂ ಓದಿ: ಹಾಸನದ ಹೇಮಾವತಿ ನದಿ ದಂಡೆಯಲ್ಲಿ ಶ್ರೀರಾಮ ಸಂಚರಿಸಿದ ಪುರಾವೆಗಳು ಗೋಚರ!

    ಹಬ್ಬ ಹರಿದಿನಗಳಲ್ಲಿ ವಾಹನಗಳ ಸ್ವಚ್ಛತೆಗೆ, ಮೀನು ಮಾಂಸ ಶುದ್ಧೀಕರಣ ಹಾಗೂ ಮಲಮೂತ್ರ ವಿಸರ್ಜನೆಯಿಂದ ನದಿ ನೀರು ಕಲುಷಿತಗೊಳ್ಳುತ್ತಿದ್ದು, ನೀರಿನ ಹರಿವು ಕಡಿಮೆಯಾಗುತ್ತಿರುವುದರಿಂದ ಇನ್ನಷ್ಟು ಜಲಮಾಲಿನ್ಯ ಉಲ್ಬಣಗೊಳ್ಳಲಿದೆ. ಇದಕ್ಕಾಗಿ ಸೂಕ್ತ ರಕ್ಷಣೆ ಒದಗಿಸಬೇಕಿದೆ. ಜತೆಗೆ ನಾಗರೀಕರು ನೀರಿನ ಬಳಕೆಯಲ್ಲಿ ಜಾಗೃತಿತೋರಬೇಕು.

    ಪಟ್ಟಣಿಗರಿಗೆ ನೀರು ಪೂರೈಸುವ ಜಾಕ್‌ವೆಲ್ ಭಾಗದಲ್ಲಿ ಸುರಕ್ಷತೆಯಿದೆ. ಹೊಲಗದ್ದೆಗಳ ನೀರು ಸಹ ಜಾಕ್‌ವೆಲ್‌ಗೆ ಸೇರದಂತೆ, ವಾಹನಗಳನ್ನು ನದಿಗಿಳಿಸದಂತೆ ಟ್ರೆಂಚ್ ತೆಗೆದಿದೆ.

    ಜಾಕ್‌ವೆಲ್‌ಗೆ ಸರಾಗವಾಗಿ ನದಿ ನೀರು ಹರಿದು ಬರುವಂತೆ ನದಿಯಲ್ಲಿ ಮಡುವಿನಿಂದ ಕಾಲುವೆ ತೆಗೆದು ನೀರು ಪಡೆಯಲಾಗುತ್ತಿದೆ. ನದಿಯಲ್ಲಿ ಮೀನು ಮಾಂಸ, ವಾಹನ ತೊಳೆಯದಂತೆ ಕ್ರಮವಹಿಸಲಾಗುವುದು. ನಾಗರೀಕರು ನದಿ ಸ್ವಚ್ಛತೆ ಕುರಿತು ಸ್ವಯಂಜಾಗೃತಿ ತೋರಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts