More

    ವಿಧಿವಿಧಾನಗಳಿಂದ ಜರುಗಿದ ಯಜ್ಞೋಪವೀತಾಧರಣೆ

    ಗಂಗಾವತಿ: ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ ದೇವಾಲಯದಲ್ಲಿ ಶುಕ್ಲ ಯಜುರ್ವೇದಗಳಿಗಾಗಿ ಸಾಮೂಹಿಕ ಯಜ್ಞೋಪವೀತಾಧರಣೆ ಉಪಾಕರ್ಮ ಧಾರ್ಮಿಕ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು.

    ಇದನ್ನೂ ಓದಿ: ದಾವಣಗೆರೆಯಲ್ಲಿ ಉಚಿತ ಸಾಮೂಹಿಕ ಉಪನಯನ

    ಶ್ರೀ ಯೋಗೀಶ್ವರ ಯಾಜ್ಞವಲ್ಕ ವಿಶ್ವಸ್ಥ ಮಂಡಳಿಯಿಂದ ಆಯೋಜಿಸಿದ್ದು, ಬೆಳಗ್ಗೆಯಿಂದ ಹನುಮಂತ, ಗಣೇಶ ಮತ್ತು ಯಾಜ್ಞವಲ್ಕ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ,ಪೂಜೆ, ಹೋಮ, ಪೂರ್ಣಾಹುತಿ, ಸಾಮೂಹಿಕ ಯಜ್ಞೋಪವೀತ ಧಾರಣೆ ಮತ್ತು ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು.

    ಪವಿತ್ರ ಯಜ್ಞಪವೀತದ ಮಹತ್ವ, ಧಾರಣೆ ವಿಧಾನ ಮತ್ತು ಸಂಧ್ಯಾವಂದನೆ ಕ್ರಮಗಳ ಬಗ್ಗೆ ಅರ್ಚಕ ಪ್ರದೀಪಚಾರ್ ಮಾಹಿತಿ ನೀಡಿದರು. ದೇವಾಲಯ ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ, ವಿಪ್ರ ಸಮಾಜದ ತಾಲೂಕು ಅಧ್ಯಕ್ಷ ಮೇಗೂರು ರಾಘವೇಂದ್ರ,

    ದೇವಾಲಯ ಸಮಿತಿ ಪದಾಧಿಕಾರಿಗಳಾದ ತಿರುಮಲರಾವ್ ಆಲ್ಲಂಪಲ್ಲಿ, ಲೆಕ್ಕಿಹಾಳ್ ರಾಘವೇಂದ್ರ, ಆಲಂಪಲ್ಲಿ ನರಸಿಂಹಮೂರ್ತಿ, ರವಿ ವೀರಾಪುರ, ಸತೀಶ ಜೋಶಿ, ಕನಸಾವಿ ರಾಮಕೃಷ್ಣ, ವಿ.ಸತ್ಯಕುಮಾರ, ರಂಗನಾಥ ವಟಗಲ್, ಗುರುರಾಜ್ ಮರಳಿ, ಮನೋಹರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts