More

    ವಾಣಿಜ್ಯ ಮಳಿಗೆಗಳಲ್ಲಿ ಕಾದಿದೆ ಅಪಾಯ!

    ಮುಂಡರಗಿ: ತಾಪಂ ಆವರಣದ ವಾಣಿಜ್ಯ ಮಳಿಗೆಗಳ ಮೇಲ್ಛಾವಣಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದ (ಬೃಂದಾವನ ಸರ್ಕಲ್) ಹತ್ತಿರದ ತಾಪಂ ಕಚೇರಿ ಮುಂಭಾಗದ ಜಾಗದಲ್ಲಿ ತಾಪಂನಿಂದ 1998-99ನೇ ಸಾಲಿನಲ್ಲಿ 8 ವಾಣಿಜ್ಯ ಮಳಿಗೆಗಳನ್ನು ನಿರ್ವಿುಸಲಾಗಿದೆ. ಅವುಗಳ ಮೇಲ್ಛಾವಣಿ ಶಿಥಿಲಗೊಂಡು ನಾಲ್ಕೈದು ವರ್ಷಗಳಾಗಿವೆ. ಅವುಗಳಲ್ಲಿ ತೀರ ಶಿಥಿಲಗೊಂಡ 3 ಮಳಿಗೆಗಳನ್ನು ಬಂದ್ ಮಾಡಿದ್ದು, ಉಳಿದ 5 ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಆದರೆ, ಅವು ಸಹ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಯಾವಾಗಲಾದರೂ ಕುಸಿಯುವ ಸ್ಥಿತಿಯಲ್ಲಿವೆ. ಅಪಾಯ ಸಂಭವಿಸುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಮಾಡಿಸಬೇಕಾದ ಅವಶ್ಯಕತೆಯಿದೆ.

    ನಾಲ್ಕೈದು ವರ್ಷಗಳಿಂದ ತಾಪಂ ವಾಣಿಜ್ಯ ಮಳಿಗೆಗಳ ಮೇಲ್ಛಾವಣಿ ಶಿಥಿಲಗೊಂಡಿದೆ. ಕೆಲವರು ಮಳಿಗೆಗಳಲ್ಲಿ ಬಾಡಿಗೆಗೆ ಇದ್ದಾರೆ. ಅದರಿಂದ ಯಾರಿಗಾದರೂ ಅಪಾಯವಾಗುವ ಸಂಭವವಿದೆ. ಅವಘಡ ಸಂಭವಿಸುವ ಮುನ್ನ ಅಧಿಕಾರಿಗಳು ಮೇಲ್ಛಾವಣಿ ದುರಸ್ತಿಗೊಳಿಸಿ ಪುನಃ ಬಾಡಿಗೆಗೆ ಕೊಡಬೇಕು.
    | ಮಂಜುನಾಥ ಮುಧೋಳ, ಅಡಿವೆಪ್ಪ ಚಲವಾದಿ, ಸಾಮಾಜಿಕ ಕಾರ್ಯಕರ್ತರು, ಮುಂಡರಗಿ

    ಮೇಲ್ಛಾವಣಿ ಶಿಥಿಲಗೊಂಡ ಮಳಿಗೆಗಳಲ್ಲಿ ಬಾಡಿಗೆ ಇರುವವರಿಗೆ ಖಾಲಿ ಮಾಡುವಂತೆ ಈಗಾಗಲೇ ನೋಟಿಸ್ ನೀಡಲಾಗಿದೆ. ಖಾಲಿ ಮಾಡಿಸಿ ಮಳಿಗೆಗಳನ್ನು ದುರಸ್ತಿಗೊಳಿಸಿ ಆನಂತರ ಬಾಡಿಗೆಗೆ ನೀಡಲಾಗುವುದು.
    | ಎಸ್.ಎಸ್. ಕಲ್ಮನಿ, ಮುಂಡರಗಿ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts