More

    ಕರ್ನಾಟಕ ನನ್ನ ಕರ್ಮಭೂಮಿ; ಕನ್ನಡದಲ್ಲೇ ಮುಂದುವರಿಯುತ್ತೇನೆ ಎಂದ ರಿಷಭ್​ ಶೆಟ್ಟಿ

    ಮುಂಬೈ: ‘ಕಾಂತಾರ’ ಚಿತ್ರದ ನಂತರ ಆ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಭ್​ ಶೆಟ್ಟಿ ಅವರನ್ನು ಬೇರೆ ಚಿತ್ರರಂಗಗಳತ್ತ ಸೆಳೆಯಲು ದೊಡ್ಡ ಮಟ್ಟದ ಪ್ರಯತ್ನಗಳು ನಡೆಯುತ್ತಿವೆ. ಅವರಿಗೆ ಬೇರೆ ಭಾಷೆಗಳಲ್ಲಿ ಚಿತ್ರ ಮಾಡುವುದುಕ್ಕೆ ದೊಡ್ಡ ಆಫರ್​ಗಳನ್ನು ನೀಡಲಾಗುತ್ತಿದ್ದು, ರಿಷಭ್​ ಅವೆಲ್ಲವನ್ನೂ ನಿರಾಕರಿಸಿ, ಕನ್ನಡದಲ್ಲೇ ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ನಿಮಗೆ ನಾಚಿಕೆಯಾಗಬೇಕು; ‘ದಿ ಕಾಶ್ಮೀರ್ ಫೈಲ್ಸ್’ ಖಂಡಿಸಿದ ನಡಾವ್​ಗೆ ಇಸ್ರೇಲಿ ರಾಯಭಾರಿ ಗಿಲಾನ್​ ತರಾಟೆ

    ಈಗ ಮತ್ತೊಮ್ಮೆ ರಿಷಭ್​ಗೆ ಬೇರೆ ಭಾಷೆಗಳಲ್ಲಿ ಕೆಲಸ ಮಾಡುತ್ತೀರಾ ಎಂಬ ಪ್ರಶ್ನೆ ಎದುರಾಗಿದೆ. ಆದರೆ, ರಿಷಭ್​ ಮಾತ್ರ ನೋ ಎಂದು ಹೇಳಿದ್ದಾರೆ. ಇದಾಗಿದ್ದು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ. ಈ ಸಮಾರಂಭದಲ್ಲಿ ಬಾಲಿವುಡ್​ ನಟ ಅನುಪಂ ಖೇರ್​ ಮತ್ತು ಖ್ಯಾತ ಕಾದಂಬರಿಕಾರ ಚೇತನ್​ ಭಗತ್​ ಸಹ ಭಾಗವಹಿಸಿದ್ದಾರೆ. ಈ ಸಮಾರಂಭದಲ್ಲಿ ಮಾತನಾಡುವ ಸಂದರ್ಭದಲ್ಲಿ, ನೀವು ಬಾಲಿವುಡ್​ ಚಿತ್ರಗಳಲ್ಲಿ ಕೆಲಸ ಮಾಡುತ್ತೀರಾ ಎಂದು ರಿಷಭ್​ ಶೆಟ್ಟಿ ಅವರನ್ನು ಚೇತನ್​ ಭಗತ್​ ಪ್ರಶ್ನಿಸಿದ್ದಾರೆ.

    ಇದಕ್ಕೆ ಉತ್ತರಿಸಿರುವ ರಿಷಭ್​, ‘ನಾನು ಇವತ್ತು ಇಲ್ಲಿದ್ದೀನಿ ಎಂದರೆ ಅದಕ್ಕೆ ಕಾರಣ ಕನ್ನಡ ಚಿತ್ರರಂಗ. ನಾನೊಬ್ಬ ನಟನಾಗಿ, ನಿರ್ದೇಶಕನಾಗಿ ಮೊದಲು ವೇದಿಕೆ ಕೊಟ್ಟಿದ್ದು ಕನ್ನಡ ಚಿತ್ರರಂಗ. ಇವತ್ತು ನನ್ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರೆ ಅದಕ್ಕೆ ಕಾರಣ ಕನ್ನಡ ಚಿತ್ರರಂಗ. ಬೇರೆ ಭಾಷೆಗಳ ಜನರಿಗೆ ನನ್ನ ಕನ್ನಡ ಚಿತ್ರಗಳು ಇಷ್ಟವಾದರೆ, ಆ ಚಿತ್ರಗಳನ್ನು ಆಯಾ ಭಾಷೆಗಳಿಗೆ ಡಬ್​ ಮಾಡುತ್ತೇನೆ. ಈಗ ಭಾಷೆಯ ಗಡಿ ಮೀರಿ ಚಿತ್ರರಂಗ ಬೆಳೆದಿದೆ. ಜನ ಎಲ್ಲಾ ಭಾಷೆಯ ಚಿತ್ರಗಳನ್ನೂ ನೋಡುತ್ತಿದ್ದಾರೆ. ಕನ್ನಡ ನನ್ನ ಕರ್ಮಭೂಮಿ ಮತ್ತು ನಾನು ಅಲ್ಲಿ ಕೆಲಸ ಮುಂದುವರೆಸುತ್ತೇನೆ’ ಎಂದು ರಿಷಭ್​ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಶುಭ ಹಾರೈಸಿದವರಿಗೆ ಜಪಾನ್​ನಿಂದಲೇ ಥ್ಯಾಂಕ್ಸ್​ ಹೇಳಿದ ರಮ್ಯಾ

    ಒಂದು ಪಕ್ಷ ಹೊರಗಿನ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದಕ್ಕೆ ಆಸೆಪಟ್ಟರೆ, ಅವರಿಗೆ ಅವಕಾಶ ಸಿಗುತ್ತದಾ? ಎಂಬ ಪ್ರಶ್ನೆಯನ್ನು ಅನುಪಂ ಖೇರ್​ ಮುಂದಿಟ್ಟಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ‘ಎಲ್ಲರಿಗೂ ಇಲ್ಲಿ ಸ್ವಾಗತವಿದೆ. ಅದರಲ್ಲೂ ಅನುಪಂ ಖೇರ್​ ಬಂದರೆ ಇನ್ನಷ್ಟು ಖುಷಿಯಾಗುತ್ತದೆ. ಏಕೆಂದರೆ, ಅವರು ನನ್ನ ಮೆಚ್ಚಿನ ನಟ’ ಎಂದು ಹೇಳಿಕೊಂಡಿದ್ದಾರೆ.

    ಮದುವೆ ವದಂತಿ ಹಬ್ಬಿದ ಬೆನ್ನಲ್ಲೇ ಕೈಕೈ ಹಿಡಿದು ದುಬೈಗೆ ಹಾರಿದ ಹರಿಪ್ರಿಯಾ-ವಸಿಷ್ಠ ಜೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts