More

    ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ಸಾರಥಿ ನೇಮಕ

    ಮುಂಬೈ: ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಮುಂಬರುವ 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುನ್ನಡೆಸಲಿದ್ದಾರೆ. ಹಿಂದಿನ ಆವೃತ್ತಿಯ ನಾಯಕ ಶ್ರೇಯಸ್ ಅಯ್ಯರ್ ಎಡಭುಜದ ನೋವಿನಿಂದ ಟೂರ್ನಿಗೆ ಅಲಭ್ಯರಾದ ಹಿನ್ನೆಲೆಯಲ್ಲಿ ರಿಷಭ್ ಪಂತ್‌ಗೆ ಈ ಮಹತ್ವದ ಜವಾಬ್ದಾರಿ ಒಲಿದು ಬಂದಿದೆ. ಇತ್ತೀಚೆಗೆ ನಡೆದ ಭಾರತ-ಇಂಗ್ಲೆಂಡ್ ನಡುವಿನ ಏಕದಿನ ಸರಣಿ ವೇಳೆ ಶ್ರೇಯಸ್ ಅಯ್ಯರ್ ಭುಜದ ನೋವಿಗೆ ತುತ್ತಾಗಿದ್ದರು. 23 ವರ್ಷದ ರಿಷಭ್ ಪಂತ್, ಪ್ರಸಕ್ತ ವರ್ಷ ಭರ್ಜರಿ ಾರ್ಮ್‌ನಲ್ಲಿದ್ದು, ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 6 ಇನಿಂಗ್ಸ್‌ಗಳಿಂದ 270 ರನ್ ಕಲೆಹಾಕಿದ್ದರು. ಅಲ್ಲದೆ, ಏಕದಿನ ಸರಣಿಯಲ್ಲಿ ಆಡಿದ 2 ಪಂದ್ಯಗಳಿಂದ ಕ್ರಮವಾಗಿ 77 ಹಾಗೂ 78 ರನ್ ಪೇರಿಸಿದ್ದರು. ಇದಕ್ಕೂ ಮೊದಲು ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿ ಗೆಲುವಿನಲ್ಲಿ ಪಂತ್ ಪ್ರಮುಖ ಪಾತ್ರವಹಿಸಿದ್ದರು.

    ಇದನ್ನೂ ಓದಿ: ಐಪಿಎಲ್ ಸಮರಕ್ಕೆ ಆರ್‌ಸಿಬಿ ಸಿದ್ಧತೆ, ಚೆನ್ನೈನಲ್ಲಿ ತರಬೇತಿ ಆರಂಭ..

    ‘ಶ್ರೇಯಸ್ ಅಯ್ಯರ್ ಅದಷ್ಟು ಬೇಗ ಗುಣಮುಖರಾಗಲಿ. ಅವರ ನಾಯಕತ್ವದಲ್ಲಿಯೇ ಮೊದಲ ಬಾರಿಗೆ ತಂಡ ಫೈನಲ್ ಪ್ರವೇಶಿಸಿತ್ತು. ಶ್ರೇಯಸ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ತಂಡ ಮುನ್ನಡೆಲಿದ್ದಾರೆ’ ಎಂದು ಡೆಲ್ಲಿ ತಂಡ ಚೇರ್ಮನ್ ಹಾಗೂ ಸಹ ಮಾಲೀಕ ಕಿರಣ್ ಕುಮಾರ್ ಗ್ರಾಂಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದ ಬಗ್ಗೆ ಎರಡು ಮಾತಿಲ್ಲ. ರಿಷಭ್ ಪಂತ್ ಈ ವರ್ಷ ತಂಡ ಮುನ್ನಡೆಸಲಿದ್ದಾರೆ. ದೆಹಲಿ ತಂಡ ಮುನ್ನಡೆಸಿದ ಅನುಭವ ರಿಷಭ್‌ಗಿದ್ದು, ಈ ಬಾರಿಯೂ ಉತ್ತಮ ನಿರ್ವಹಣೆ ತೋರಲಿದ್ದಾರೆ’ ಎಂದು ಮತ್ತೋರ್ವ ಸಹ ಮಾಲೀಕ ಪಾರ್ಥ್ ಜಿಂದಾಲ್ ಹೇಳಿದ್ದಾರೆ.

    ಇದನ್ನೂ ಓದಿ: ಬಯೋಬಬಲ್​ನಲ್ಲಿ ಭಾರತ ಬಲಿಷ್ಠ; ವಿಂಡೀಸ್​, ಆಸೀಸ್​ ಪ್ರಾಬಲ್ಯ ನೆನಪಿಸಿದ ಕೊಹ್ಲಿ ಪಡೆ

    ಇದಕ್ಕೂ ಮೊದಲು ವೀರೇಂದ್ರ ಸೆಹ್ವಾಗ್ (2008-12), ಗೌತಮ್ ಗಂಭೀರ್ (2009 ಮತ್ತು 2018), ದಿನೇಶ್ ಕಾರ್ತಿಕ್ (2010-14), ಜೇಮ್ಸ್ ಹೋಪ್ಸ್ (2011), ಮಹೇಲ ಜಯವರ್ಧನೆ (2012-13), ಡೇವಿಡ್ ವಾರ್ನರ್ (2013), ಕೆವಿನ್ ಪೀಟರ್ಸೆನ್ (2014), ಜೆಪಿ ಡುಮಿನಿ (2015/16), ಜಹೀರ್ ಖಾನ್ (2016/17), ಕರುಣ್ ನಾಯರ್ (2017), ಶ್ರೇಯಸ್ ಅಯ್ಯರ್ (2018-20) ಡೆಲ್ಲಿ ಕ್ಯಾಪಿಟಲ್ಸ್ (ಡೆಲ್ಲಿ ಡೇರ್‌ಡೆವಿಲ್ಸ್) ತಂಡ ಮುನ್ನಡೆಸಿದ್ದರು.

    ಇದನ್ನೂ ಓದಿ: ಕ್ರೀಡೆಯಲ್ಲೂ ಮಿಂಚುತ್ತಿದ್ದಾರೆ ಈ ಗ್ಲಾಮರ್ ನಟಿ, ಸರ್ಫಿಂಗ್‌ನಲ್ಲಿ ಚಿನ್ನದ ಪದಕ ಸಾಧನೆ!

    * ತರಬೇತಿ ಆರಂಭಿಸಿದ ಡೆಲ್ಲಿ
    ಅಜಿಂಕ್ಯ ರಹಾನೆ, ಇಶಾಂತ್ ಶರ್ಮ ಹಾಗೂ ಉಮೇಶ್ ಯಾದವ್ ಒಳಗೊಂಡಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಮಂಗಳವಾರ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದರು. ಬ್ಯಾಟಿಂಗ್, ಬೌಲಿಂಗ್‌ಗೆ ಅಭ್ಯಾಸ ನಡೆಸಿದ ಬಳಿಕ ದೈಹಿಕ ಕಸರತ್ತಿಗೆ ಮೊರೆ ಹೋದರು. ರಿಷಭ್ ಪಂತ್, ಅನುಭವಿ ಸ್ಪಿನ್ನರ್ ಆರ್.ಅಶ್ವಿನ್, ಅಕ್ಷರ್ ಪಟೇಲ್, ಮುಖ್ಯಕೋಚ್ ರಿಕಿ ಪಾಂಟಿಂಗ್ ಸೋಮವಾರವಷ್ಟೇ ತಂಡದ ಹೋಟೆಲ್ ಸೇರಿಕೊಂಡರು. ವೆಸ್ಟ್ ಇಂಡೀಸ್ ತಂಡದ ಶಿಮ್ರೋನ್ ಹೆಟ್ಮೆಯೆರ್, ಇಂಗ್ಲೆಂಡ್‌ನ ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ವೋಕ್ಸ್, ಟಾಮ್ ಕರ‌್ರನ್ ತಂಡದ ಪ್ರಮುಖ ಆಟಗಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts