More

    ಶಿಲುಬೆ ಧ್ವಂಸಗೊಳಸಿದ್ದನ್ನು ಖಂಡಿಸಿ ತಹಸೀಲ್ದಾರ್‌ಗೆ ಮನವಿ

    ಸಿರವಾರ: ಪಟ್ಟಣದ ಪರಮಾನಂದ ಗುಡ್ಡದ ಮೇಲಿರುವ ಶಿಲುಬೆ ಧ್ವಂಸಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಬೇಕು. ಶಿಲುಬೆಯನ್ನು ಮರು ಸ್ಥಾಪಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ರವಿ ಎಸ್.ಅಂಗಡಿಗೆ ಕ್ರೈಸ್ತ ಸಮುದಾಯಗಳ ಒಕ್ಕೂಟದಿಂದ ಬುಧವಾರ ಮನವಿ ಸಲ್ಲಿಸಲಾಯಿತು.

    ಪರಮಾನಂದ ಗುಡ್ಡದ ಮೇಲೆ 45 ವರ್ಷಗಳ ಹಿಂದೆ ಶಿಲುಬೆ ಪ್ರತಿಷ್ಠಾಪಿಸಲಾಗಿತ್ತು. ಕ್ರಿಸ್‌ಮಸ್, ಗುಡ್ ಫ್ರೈಡೆ ಹಾಗೂ ಕ್ರಿಶ್ಚಿಯನ್ನರ ಇತರ ಹಬ್ಬಗಳಿಗೆ ಹೋಲಿ ಕ್ರಾಸ್ ಮತ್ತು ಮೆಥೋಡಿಸ್ಟ್ ಚರ್ಚ್‌ಗೆ ಆಗಮಿಸುವ ಸಿರವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕ್ರೈಸ್ತ ಭಕ್ತರು ಗುಡ್ಡದ ಮೇಲಿನ ಶಿಲುಬೆ ಸ್ಥಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆಯಾಗಿದೆ ಎಂದರು.

    ಶಿಲುವೆ ಧ್ವಂಸದಿಂದ ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಕೋಮು ಗಲಭೆ ಸೃಷ್ಟಿಸುವ ಕೆಲವು ಕುತಂತ್ರಿಗಳು ಷಡ್ಯಂತ್ರ ನಡೆಸಿದ್ದಾರೆ. ಗೃಹ ಇಲಾಖೆಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ರವಿ ಎಸ್.ಅಂಗಡಿಗೆ ಸಲ್ಲಿಸಲಾಯಿತು.

    ಪ್ರಮುಖರಾದ ಅಬ್ರಾಹಂ ಹೊನ್ನುಟಗಿ, ಗ್ಯಾನಪ್ಪ, ದೇವಪ್ಪ ಕೆಂಪು, ಮಲ್ಲಪ್ಪ ದೊಡ್ಮನಿ, ಬಡ್ಡ ಹನುಮಂತ, ಸಾಮುವೇಲಪ್ಪ, ಎಂ ಪ್ರಕಾಶಪ್ಪ, ಎಲ್.ಕೆ ಮರಿಯಣ್ಣ , ಇಮಾನುವೇಲಪ್ಪ, ಎಂ ಬಸವರಾಜ ಭಂಡಾರಿ, ಭಾಸ್ಕರ್, ತಾಯಪ್ಪ, ಸವಾರೆಪ್ಪ, ಅರುಣ್ ಕುಮಾರ್, ಮೌನೇಶ ಪಿತಗಲ್, ಸುದರ್ಶನ್, ಸೂರಿ, ಗ್ಯಾನಪ್ಪ ಹೀರಾ, ಜಯರಾಜ್, ನಾಗರಾಜ ಕರಿಬಿಲ್ಕರ್, ಅರಳಪ್ಪ, ಮೇಷಾಕ್ ದೊಡ್ಮನಿ, ಎಂ.ಮನೋಹರ, ದಾನಪ್ಪ, ವಿನಯ ಕುಮಾರ್, ಶಿವಕುಮಾರ್, ದುರ್ಗಾ ಪ್ರಸಾದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts