More

    ಗಲಭೆ ಹತ್ತಕ್ಕಿ ಶಾಂತಿ ಮರುಸ್ಥಾಪಿಸಿ

    ಕುಷ್ಟಗಿ: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣ ಖಂಡಿಸಿ ಮಾನವ ಹಕ್ಕುಗಳ ಒಕ್ಕೂಟದ ಪದಾಧಿಕಾರಿಗಳು ರಾಜ್ಯಪಾಲರಿಗೆ ಬರೆದ ಪತ್ರವನ್ನು ಶಿರಸ್ತೇದಾರ್ ವಿಜಯಾ ಮುಂಡರಗಿಗೆ ಬುಧವಾರ ಸಲ್ಲಿಸಿದರು.

    ಇದನ್ನೂ ಓದಿ:http://ಗಲಭೆ ಹತ್ತಕ್ಕಿ ಶಾಂತಿ ಮರುಸ್ಥಾಪಿಸಿ
    ಮಣಿಪುರದಲ್ಲಿ ನಡೆದ ಘಟನೆ ಇಡೀ ಮನುಕುಲವೇ ತಲೆತಗ್ಗಿಸುವಂತಹದ್ದು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳದಿರುವುದು ಆತಂಕಕಾರಿಯಾಗಿದೆ.

    ಪ್ರಕರಣಗಳ ಗಂಭೀರತೆ ಅರಿತು ಜವಾಬ್ದಾರಿಯುತ ಸರ್ಕಾರಗಳು ಗಲಭೆಗಳನ್ನು ಹತ್ತಕ್ಕಿ ಕಾರ್ಯವನ್ನು ಮಾಡಬೇಕು. ಜನರು ನೆಮ್ಮದಿ, ಶಾಂತಿಯಿಂದ ಬದುಕಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


    ಒಕ್ಕೂಟದ ರಾಜ್ಯಾಧ್ಯಕ್ಷ ಸೈಯದ್ ಮುರ್ತುಜಾ, ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಫಕೀರಪ್ಪ ಹೊಸಹೊಕ್ಕಲ್, ತಾಲೂಕು ಘಟಕದ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಗೌರವ ಅಧ್ಯಕ್ಷ ಶಾಂತರಾಜ ಗೋಗಿ, ಪದಾಧಿಕಾರಿಗಳಾದ ಅಜಯ್ ಹಿರೇಮಠ, ಮೌನೇಶ ಬಡಿಗೇರ, ಮಹಮ್ಮದ್ ಅಫ್ತಾಬ್, ಅಬ್ದುಲ್ ರಹೀಮ್, ಸಂಗಮೇಶ ಶಿವನಗುತ್ತಿ, ಶಶಿಧರ ಕುಂಬಾರ್, ಹನುಮಂತರಾವ್ ದೇಸಾಯಿ, ರವಿಕುಮಾರ ಸರಗಣಾಚಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts