More

    ಯಶಸ್ವಿ ಜೈಸ್ವಾಲ್​, ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್​: ರೋಹಿತ್​ ಶರ್ಮ ಪಡೆಗೆ ಟಿ20 ಸರಣಿ

    ಇಂದೋರ್​: ಆರಂಭಿಕ ಯಶಸ್ವಿ ಜೈಸ್ವಾಲ್​ (68 ರನ್​, 34 ಎಸೆತ, 5 ಬೌಂಡರಿ, 6 ಸಿಕ್ಸರ್​) ಹಾಗೂ ಶಿವಂ ದುಬೆ (63* ರನ್​, 32 ಎಸೆತ, 5 ಬೌಂಡರಿ, 4 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಟೀಮ್​ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ಎದುರು 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿ ಪಂದ್ಯ ಬಾಕಿಯಿರುವಂತೆಯೇ ರೋಹಿತ್​ ಶರ್ಮ ಪಡೆ 20 ವಶಪಡಿಸಿಕೊಂಡಿದೆ.

    ಹೋಳ್ಕರ್​ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತ ಅ್ಘಾನಿಸ್ತಾನ ತಂಡ, ಗುಲ್ಬಾದಿನ್​ ನೈಬ್​ (57 ರನ್​, 35 ಎಸೆತ, 5 ಬೌಂಡರಿ, 4 ಸಿಕ್ಸರ್​) ಅರ್ಧಶತಕದ ನಡುವೆಯೂ ಭರ್ತಿ 20 ಓವರ್​ಗಳಲ್ಲಿ 172 ರನ್​ಗಳಿಗೆ ಆಲೌಟ್​ ಆಯಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್​& ಹಾಗೂ ಶಿವಂ ದುಬೆ ಜತೆಯಾಟದ ಬಲದಿಂದ 15.4 ಓವರ್​ಗಳಲ್ಲಿ 4 ವಿಕೆಟ್​ಗೆ 173 ರನ್​ಗಳಿಸಿ ಜಯದ ಕೇಕೆ ಹಾಕಿತು.

    ಮತ್ತೆ ನಿರಾಸೆ ಮೂಡಿಸಿದ ರೋಹಿತ್​: ಸವಾಲಿನ ಮೊತ್ತ ಬೆನ್ನತ್ತಿದ್ದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (0) ವಿಕೆಟ್​ ಕಳೆದುಕೊಂಡಿತು. ತಾನೆದುರಿಸಿದ ಮೊದಲ ಎಸೆತದಲ್ಲಿ ಬೌಲ್ಡ್​ ಆದ ರೋಹಿತ್​ ಪುನರಾಗಮನ ಸರಣಿಯಲ್ಲಿ ಸತತ 2ನೇ ಬಾರಿಗೆ ಸೊನ್ನೆ ಸುತ್ತಿದರು. ಬಳಿಕ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಜತೆಯಾದ ಅನುಭವಿ ವಿರಾಟ್​ ಕೊಹ್ಲಿ (29) ತಂಡಕ್ಕೆ ಚೇತರಿಕೆ ಒದಗಿಸಿದರು. ಇವರಿಬ್ಬರು 2ನೇ ವಿಕೆಟ್​ಗೆ 28 ಎಸೆತಗಳಲ್ಲಿ 57 ರನ್​ಗಳಿಸಿದರು. ಮೊದಲ ಆರು ಓವರ್​ಗಳಲ್ಲಿ 69 ರನ್​ ಕಲೆಹಾಕಿದ ಟೀಮ್​ ಇಂಡಿಯಾ ಉತ್ತಮ ಆರಂಭ ಪಡೆಯಿತು.

    ಗೆಲುವಿನ ಜತೆಯಾಟ: ವಿರಾಟ್​ ಕೊಹ್ಲಿ ನಿರ್ಗಮನದ ಬಳಿಕ ಯಶಸ್ವಿ ಜೈಸ್ವಾಲ್​ ಜತೆಯಾದ ಆಲ್ರೌಂಡರ್​ ಶಿವಂ ದುಬೆ ಆ್ಘನ್​ ಬೌಲರ್​ಗಳನ್ನು ದಂಡಿಸಿದರು. ಮನಸೋಇಚ್ಛೆ ದಂಡಿಸಿದ ಇವರಿಬ್ಬರು 3ನೇ ವಿಕೆಟ್​ಗೆ 42 ಎಸೆತಗಳಲ್ಲಿ 92 ರನ್​ ಕಸಿದರು. ಆರಂಭಿದಿಂದಲೂ ಅಬ್ಬರಿಸಿದ ಯಶಸ್ವಿ ಜೈಸ್ವಾಲ್​ 27 ಎಸೆತಗಳಲ್ಲಿ ಅರ್ಧಶತಕಗಳಿಸಿದರೆ, ಇವರಿಗೆ ಉತ್ತಮ ಬೆಂಬಲ ನೀಡಿದ ಶಿವಂ ದುಬೆ 22 ಎಸೆತದಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. 13ನೇ ಓವರ್​ನಲ್ಲಿ ಜೈಸ್ವಾಲ್​, ಜಿತೇಶ್​ ಶರ್ಮ ವಿಕೆಟ್​ ಪಡೆದ ಆ್ಘನ್​ ತಿರುಗೇಟು ನೀಡಲು ಯತ್ನಿಸಿತು, ಆದರೆ 5ನೇ ವಿಕೆಟ್​ಗೆ ದುಬೆ ಹಾಗೂ ರಿಂಕು ಸಿಂಗ್​ (9) ಗೆಲುವಿನ ದಡ ಸೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts