More

    ಪಠ್ಯ ಪರಿಷ್ಕರಣೆ ಜನಪ್ರತಿನಿಽಗಳ ಕೆಲಸವಲ್ಲ

    ಸಾಗರ: ಪಠ್ಯಪುಸ್ತಕ ತಯಾರಿಕೆ ಸಂದರ್ಭದಲ್ಲಿ ರಾಜಕೀಯ ಹಸ್ತಕ್ಷೇಪ ಆಗಬಾರದು. ಇದು ಚುನಾಯಿತ ಪ್ರತಿನಿಽಗಳ ಕೆಲಸವಲ್ಲ. ತಜ್ಞರ ಸಲಹೆ ಪಡೆದು ಪರಿಷ್ಕರಣೆ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಕಿವಿಮಾತು ಹೇಳಿದರು.

    ಗುರುವಾರ ಪಟ್ಟಣದ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಚಾರ್ಯರ ಸಂಘದಿAದ ಹಮ್ಮಿಕೊಳ್ಳಲಾಗಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ಹಿಂದೆ ನಾವೆಲ್ಲ ಓದುತ್ತಿದ್ದಾಗ ರಾಮಾಯಣ, ಮಹಾಭಾರತ ಸೇರಿ ವಿವಿಧ ಕವಿ ಶ್ರೇಷ್ಠರ ಕೃತಿಗಳನ್ನು ಜ್ಞಾನಾರ್ಜನೆಗಾಗಿ ಅಳವಡಿಸಿಕೊಳ್ಳುತ್ತಿದ್ದೆವು. ಅಂದು ಇಲ್ಲದ ವಿವಾದ ಇಂದು ಸೃಷ್ಟಿಯಾಗುತ್ತಿರುವುದಕ್ಕೆ ಕಾರಣ ಪಠ್ಯಪುಸ್ತಕ ತಯಾರಿಕೆ ಸಂದರ್ಭದಲ್ಲಿನ ರಾಜಕೀಯ ಹಸ್ತಕ್ಷೇಪ. ಮಕ್ಕಳ ಸಮಗ್ರ ಜ್ಞಾನವಿಕಾಸಕ್ಕೆ ಪೂರಕವಾದ ಪಠ್ಯವನ್ನು ಅಳವಡಿಸುವತ್ತ ಗಮನಹರಿಸಬೇಕು. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದರು.
    ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಪಿಯು ಉಪನಿರ್ದೇಶಕ ಬಿ.ಕೃಷ್ಣಪ್ಪ, ಪ್ರಾಚಾರ್ಯರು ಮತ್ತು ಉಪನ್ಯಾಸಕ ವರ್ಗ ಫಲಿತಾಂಶ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರ ವರ್ತನೆ ಬಗ್ಗೆ ಸಾಕಷ್ಟು ದೂರುಗಳಿವೆ. ಅದನ್ನು ತಿದ್ದುಕೊಳ್ಳುವತ್ತ ಗಮನ ಹರಿಸಬೇಕು. ಗುರುಶಿಷ್ಯರ ಸಂಬAಧ ತಂದೆ ಮಗುವಿನ ಸಂಬAಧದAತೆ ಇರಬೇಕು. ಇಲಾಖೆ ಜಾರಿಗೊಳಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಎಲ್ಲರೂ ಪ್ರಯತ್ನಿಸಬೇಕು. ಮಕ್ಕಳ ಜ್ಞಾನಾರ್ಜನೆಯಲ್ಲಿ ಉಪನ್ಯಾಸಕರ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.
    ಸಂಘದ ಅಧ್ಯಕ್ಷ ಅಣ್ಣೋಜಿರಾವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಚಂದ್ರಪ್ಪ ಗುಂಡಪಲ್ಲಿ, ಅರುಣಕುಮಾರ್, ಯೋಗೀಶ್, ಕೆ.ಪ್ರಸನ್ನ, ಕೆ.ಭೂಷಣ್, ದೇವಪ್ಪ ಶಿಕಾರಿಪುರ, ರವಿಶಂಕರ್, ಅರವಿಂದ್, ಮಲ್ಲಿಕಾರ್ಜುನ್, ದಿನಕರ್, ಘನಶ್ಯಾಮ್, ಡಿ.ಎನ್.ಗಿರೀಶ್, ಎಲ್.ಎಂ.ಹೆಗಡೆ, ಜಿ.ಪರಮೇಶ್ವರಪ್ಪ, ಶಿವರಾಮ್ ಕೆ. ವಿ.ಸಿ.ಪಾಟೀಲ್ ಇತರರಿದ್ದರು.

    ಅನೇಕ ಸವಾಲುಗಳ ನಡುವೆ ನಮ್ಮ ಶಿಕ್ಷಕ, ಉಪನ್ಯಾಸಕ ವರ್ಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಶಿಕ್ಷಕರ ಕೊರತೆ ಸೇರಿ ಅನೇಕ ಸಮಸ್ಯೆಗಳಿದ್ದರೂ ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದ್ದೀರಿ. ಮಕ್ಕಳನ್ನು ಅಂಕದ ಹಿಂದೆ ಓಡುವಂತೆ ಮಾಡುವ ಜತೆಗೆ ಅವರಿಗೆ ಜೀವನ ಮೌಲ್ಯ, ನೈತಿಕ ಶಿಕ್ಷಣ ನೀಡಿ. ಇದರೊಂದಿಗೆ ಸಂಸ್ಕಾರವನ್ನೂ ಕಲಿಸಿ ಭವಿಷ್ಯ ರೂಪಿಸಿಕೊಳ್ಳುವತ್ತ ಸಜ್ಜುಗೊಳಿಸಬೇಕು.
    |ಎಸ್.ಎಲ್.ಭೋಜೇಗೌಡ
    ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts