More

    ಡಿಕೆಶಿ ಎಸೆದ ಹೊಸ ದಾಳಕ್ಕೆ ಜೆಡಿಎಸ್​ ನಾಯಕರು ಜಂಪ್​​ ಆಗ್ತಾರಾ?

    ಬೆಂಗಳೂರು: ತಮ್ಮ ಪಕ್ಷಗಳಿಂದ ಬಿಜೆಪಿಗೆ ವಲಸೆ ಹೋದವರ ಕ್ಷೇತ್ರಗಳಲ್ಲಿ ರಿವರ್ಸ್ ಆಪರೇಷನ್ ನಡೆಸುವುದು ಹಾಗೂ ಜೆಡಿಎಸ್‌ನ ಅಸಮಾಧಾನಿತರಿಗೆ ಆದ್ಯತೆ ಕೊಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದಾರೆ.

    ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು ‘ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ. ಮಸ್ಕಿ, ಹೊಸಕೋಟೆಯಲ್ಲಿ ಪಕ್ಷ ಬಿಟ್ಟು ಹೋದವರ ಜಾಗಕ್ಕೆ ಬೇರೆಯವರು ಬಂದಿದ್ದಾರೆ. ಹೀಗೆ ಒಬ್ಬರು ಖಾಲಿಯಾದರೆ ಆ ಸ್ಥಾನಕ್ಕೆ ಬೇರೆಯವರು ಬರುತ್ತಾರೆ. ಜೆಡಿಎಸ್‌ನಿಂದ ಸೋತವರು ಅರ್ಜಿ ಹಾಕಿದ್ದಾರೆ. ರಾಜಕೀಯ ನಿಂತ ನೀರಲ್ಲ, ಏನೂಬೇಕಾದರೂ ಸಾಧ್ಯವಾಗಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

    ವಲಸಿಗ ಸಚಿವರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಕೊರತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಕ್ಷೇತ್ರಗಳಲ್ಲಿ ಸರ್‌ಪ್ರೈಸ್ ಇದೆ. ಯಾರು ಅಭ್ಯರ್ಥಿಗಳು ಅನ್ನೋದನ್ನ ಕಾದು ನೋಡಿ ಎಂದರು.

    ಶಿವರಾಂ ಹೆಬ್ಬಾರ್ ಕ್ಷೇತ್ರದಲ್ಲಿ ಪಾಟೀಲ್ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಬಣಕಾರ್ ಬರಿ ಎರಡು ಮೂರು ಸಾವಿರ ಮತಗಳಲ್ಲಿ ಸೋತಿದ್ದರು. ಬಣಕಾರ್ ಈಗ ನಮ್ಮ ಪಕ್ಷ ಸೇರಿದ್ದಾರೆ. ಶರತ್ ಬಚ್ಚೇಗೌಡ, ಮಧು ಬಂಗಾರಪ್ಪ ನಮ್ಮ ಪಕ್ಷಕ್ಕೆ ಬಂದಿಲ್ಲವೇ? ಎಂದು ಪ್ರಶ್ನಿಸಿಸಿದ ಅವರು ರಾಜಕೀಯ ನಿಂತ ನೀರಲ್ಲ. ನಾನು ಈ ಕುರ್ಚಿ ಬಿಟ್ಟರೆ ಪಕ್ಕದಲ್ಲಿ ಇರುವವರೇ ಬಂದು ಕುಳಿತುಕೊಳ್ಳುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.

    ದಲಿತ ಸಿಎಂ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಏಕೆ ಆಗಬಾರದು? ದಲಿತರು ಏಕೆ ಮುಖ್ಯಮಂತ್ರಿ ಆಗಬಾರದು? ನಾನು ಬೇರೆಯವರಂತೆ ಮುಸಲ್ಮಾನರನ್ನು ಮುಖ್ಯಮಂತ್ರಿ ಮಾಡುತ್ತೇನೆ, ದಲಿತರನ್ನು ಮಾಡುತ್ತೇನೆ ಎಂದು ಹೇಳುವುದಿಲ್ಲ ಎಂದು ಜೆಡಿಎಸ್ ನಾಯಕರನ್ನು ಕುಟುಕಿದರು.

    ಕಾಂಗ್ರೆಸ್‌ನಲ್ಲಿ ದಲಿತರು ಮುಖ್ಯಮಂತ್ರಿ ಆಗುವ ಅವಕಾಶವಿದೆ. ಅವರಿಗೆ ಅರ್ಹತೆ ಹಾಗೂ ಹಿರಿತನ ಎರಡೂ ಇದೆ. ಅವರು ಪಕ್ಷಕ್ಕೆ ಶ್ರಮಿಸಿದ್ದಾರೆ. ಕಾಂಗ್ರೆಸ್ ನಮ್ಮ ಮನೆ ಆಸ್ತಿ ಅಲ್ಲ. ಇದು ಎಲ್ಲ ವರ್ಗದವರಿಗೂ ಸೇರಿರುವ ಪಕ್ಷ. ಇದೇ ನಮ್ಮ ಪಕ್ಷದ ಶಕ್ತಿ. ವೀರಪ್ಪ ಮೋಯ್ಲಿ, ಧರಂ ಸಿಂಗ್, ಬಂಗಾರಪ್ಪನವರ ಸಮಾಜ ಎಷ್ಟು ಸಂಖ್ಯೆಯಲ್ಲಿತ್ತು? ಹಿಂದುಳಿದ ವರ್ಗದ ಸಮುದಾಯದವರು ಮುಖ್ಯಮಂತ್ರಿಗಳಾಗಿಲ್ಲವೇ? ಗುಂಡೂರಾವ್ ಅವರು ಆಗಿಲ್ಲವೇ? ನಮ್ಮಲ್ಲಿ ಅನೇಕ ಸಮರ್ಥರಿದ್ದಾರೆ ಎಂದರು.

    ದುಬೈನಲ್ಲಿ ಕರ್ನಾಟಕದ ಬಗ್ಗೆ ಸಂಘಟನೆಗಳು ಅಧಿಕಾರಿಗಳು, ಸರ್ಕಾರ ಕೊಡುತ್ತಿರುವ ಕಿರುಕುಳವನ್ನ ತೋಡಿಕೊಂಡರು. ಅವರ ಸಮಸ್ಯೆ ನಾನು ಆಲಿಸಿದ್ದೇನೆ. ಅನಿವಾಸಿಗಳ ಹಿತಕ್ಕಾಗಿಯೇ ಪ್ರತ್ಯೇಕ ಸಚಿವಾಲಯ ರಚನೆಯ ಭರವಸೆ ನೀಡಿದ್ದೇನೆ. ಅದರಂತೆ ನಮ್ಮ ಪ್ರಣಾಳಿಕೆಯಲ್ಲಿ ಅದನ್ನ ಪ್ರಸ್ತಾಪಿಸುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts