More

    ಲಾಕ್‌ಡೌನ್‌ಗೆ ಪಪ್ಪಾಯಿ ಬೆಳೆಗಾರ ಕಂಗಾಲು

    ರೇವತಗಾಂವ: ಸಮೀಪದ ಉಮರಜ ಗ್ರಾಮದಲ್ಲಿ 4 ಎಕರೆಯಲ್ಲಿ ಬೆಳೆದ ಪಪ್ಪಾಯಿ ಮಾರುಕಟ್ಟೆಗೆ ಸಾಗಿಸಲಾಗದೇ ಭೂಮಿ ಪಾಲಾಗುತ್ತಿದೆ.
    ಗ್ರಾಮದ ಗಿರಮಲ್ಲ ರುದ್ರಾಕ್ಷಿ ಎಂಬುವವರು ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿರುವ ಈ ಪಪ್ಪಾಯಿ ಸಲು ಇದೀಗ ಪಕ್ವವಾಗಿ ಕೈಸೇರಲಿದೆ. ಅದನ್ನು ಸಾಗಣೆ ಮಾಡಲು ಹಾಗೂ ಕೃಷಿ ಮಾರುಕಟ್ಟೆಗೆ ಕೊಂಡೊಯ್ಯುಲು ಕರೊನಾ ಅಡ್ಡಿಯಾಗಿದೆ.
    ಕರೊನಾ ಹಿನ್ನೆಲೆಯಲ್ಲಿ ಕೃಷಿ ಮಾರುಕಟ್ಟೆ ಸ್ತಬ್ಧವಾಗಿದ್ದರಿಂದ ಗಿರಿಮಲ್ಲ ರುದ್ರಾಕ್ಷಿಯವರು 4 ಎಕರೆಯಲ್ಲಿ 3.20 ಲಕ್ಷ ರೂ. ಖರ್ಚು ಮಾಡಿ ಬೆಳೆದ ಪಪ್ಪಾಯಿ ಫಸಲನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಕಂಗಾಲಾಗಿದ್ದಾರೆ. ಪಕ್ವವಾದ ಪಪ್ಪಾಯಿ ಹಣ್ಣುಗಳು ಉದುರಿ ಬಿದ್ದು, ಭೂಮಿ ಪಾಲಾಗುತ್ತಿವೆ. ಅವನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರೈತ ಕೈಕೈ ಹಿಚುಕಿಕೊಳ್ಳುತ್ತಿದ್ದಾನೆ. ಖರ್ಚು ಮಾಡಿದಷ್ಟು ಹಣ ವಾಪಸ್ ಬಂದರೆ ಸಾಕು ಎಂದು ಗೋಳಾಡುತ್ತಿದ್ದಾರೆ.

    ಉತ್ತಮ ಬೆಲೆ ಸಿಗುತ್ತದೆಂಬ ನಿರೀಕ್ಷೆಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ಪಪ್ಪಾಯಿ ಬೆಳೆದಿದ್ದೇನೆ. ಆದರೆ, ಕರೊನಾ ಭೀತಿಯಿಂದ ಮಾರ್ಕೆಟ್‌ಗಳು ಸ್ತ್ತಬ್ಧವಾಗಿದ್ದರಿಂದ ದಿಕ್ಕು ತೋಚದಂತಾಗಿದೆ. ಅಧಿಕಾರಿಗಳು ಬೆಳೆ ಸಾಗಾಣಿಕೆಗೆ ಮುಕ್ತ ಅವಕಾಶ ಮಾಡಿಕೊಡಬೇಕಿದೆ.
    ಗಿರಿಮಲ್ಲ ರುದ್ರಾಕ್ಷಿ, ಉಮರಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts