More

    ಜಾತ್ಯತೀತ ರಾಷ್ಟ್ರದ ಪರಿಕಲ್ಪನೆಯ ಕೊರತೆ

    ಚಿತ್ರದುರ್ಗ: ದೇಶದ ಅನೇಕರಿಗೆ ಇನ್ನೂ ಸಂವಿಧಾನದ ಕುರಿತಾದ ಅರಿವು, ಪ್ರಜಾಪ್ರಭುತ್ವ, ಜಾತ್ಯತೀತ ರಾಷ್ಟ್ರದ ಪರಿಕಲ್ಪನೆಯೇ ಇಲ್ಲ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಹೇಳಿದರು.

    ನಗರದ ಸರಸ್ವತಿ ಕಾನೂನು ಕಾಲೇಜಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ರಚನೆ ಮತ್ತು ಅದರ ಮೂಲ ಲಕ್ಷಣಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಡುಗೆಯಾಗಿ ಕೊಟ್ಟಿರುವ ಭಾರತದ ಸಂವಿಧಾನವೆಂಬುದು ವಿಧಾನಶಾಸ್ತ್ರವಾಗಿದೆ. ಕಲ್ಯಾಣರಾಜ್ಯದ ನಿರ್ಮಾಣ ಸಂವಿಧಾನದ ಆಶಯವಾಗಿದೆ. ಜಗತ್ತಿನ 190 ದೇಶಗಳು ಸಂವಿಧಾನದ ಆಡಳಿತ ಬಯಸುತ್ತಿದ್ದಾರೆ. ನಮ್ಮ ಸಂವಿಧಾನದಲ್ಲಿ ಏನೇನಿದೆ. ನಮ್ಮ ಹಕ್ಕುಗಳು ಏನೆಂಬುದರ ಅರಿವು ನಾಡಿನ ಅನೇಕರಿಗೆ ತಿಳಿದಿಲ್ಲ. ಪ್ರಜಾಪ್ರಭುತ್ವ, ಜಾತ್ಯತೀತ ರಾಷ್ಟ್ರ ಎಂದರೆ ಏನೆಂದು ಅರ್ಥಮಾಡಿಕೊಂಡಿಲ್ಲ ಎಂದರು.

    ಸಂವಿಧಾನ ಜಾರಿಯಾದ ಬಳಿಕ ನಿಜವಾದ ಭಾರತ ರಚನೆಯಾಯಿತು. ಭಾರತವೀಗ ಶ್ರೀಮಂತ ದೇಶವಾಗಿದ್ದರೆ ಅದು ಸಂವಿಧಾನದ ಕೊಡುಗೆ ಎಂಬುದನ್ನು ಗಮನಿಸಬೇಕು. ಸ್ವಾತಂತ್ರೃಪೂರ್ವದಲ್ಲಿ ಶೇ.15 ರಷ್ಟಿದ್ದ ಸಾಕ್ಷರತೆ ಈಗ ಶೇ.79 ಕ್ಕೇರಿದೆ. ಶೇ.70 ರಷ್ಟಿದ್ದ ಬಡತನದ ಪ್ರಮಾಣ ಶೇ.21ಕ್ಕೆ ಇಳಿದಿದೆ. ಆಹಾರದ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗುವುದರೊಂದಿಗೆ ಗಣನೀಯ ಪ್ರಮಾಣದಲ್ಲಿ ರಪ್ತು ಮಾಡಲಾಗುತ್ತಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಒಂದಾಗಿದೆ. ಈ ಎಲ್ಲ ಅಭಿವೃದ್ಧಿಗೆ ಸಂವಿಧಾನವೇ ಕಾರಣವಾಗಿದೆ ಎಂದು ವಿವರಿಸಿದರು.

    ಹೈಕೋರ್ಟ್ ವಕೀಲ ಅನಂತ್‌ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಆಶಯ, ಮೌಲ್ಯಗಳನ್ನು ಗಾಳಿಗೆ ತೂರಿ ಆಡಳಿತ ನಡೆಯುತ್ತಿದೆ. ಸಂವಿಧಾನದ ರಕ್ಷಣೆಯಿಂದ ಮಾತ್ರ ದೇಶ ಉಳಿಯಲು ಸಾಧ್ಯವೆಂದರು.

    ಸರಸ್ವತಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಡಿ.ಕೆ.ಶೀಲಾ, ಆಡಳಿತಾಧಿಕಾರಿ ಡಿ.ಎಚ್.ನಟರಾಜ್, ಆಡಳಿತ ಮಂಡಳಿ ಸದಸ್ಯರಾದ ಅಬ್ದುಲ್ ರೆಹಮಾನ್, ಚಂದ್ರಶೇಖರ್, ಪ್ರಾಚಾರ‌್ಯೆ ಎಂ.ಎಸ್.ಸುಧಾದೇವಿ, ಡಿ.ಎಚ್.ನಟರಾಜ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts