More

    ಶ್ರೀನಗರದಲ್ಲಿ ಡ್ರೋನ್​ ಮಾರಾಟ, ಬಳಕೆ ಮೇಲೆ ನಿರ್ಬಂಧ

    ಶ್ರೀನಗರ : ಜಮ್ಮುವಿನಲ್ಲಿ ಹೋದ ಭಾನುವಾರ ಇಂಡಿಯನ್​ ಏರ್​ ಫೋರ್ಸ್​(ಐಎಎಫ್) ಬೇಸ್​ ಮೇಲೆ ಡ್ರೋನ್​ ಅಟ್ಯಾಕ್​ ನಡೆದ ಹಿನ್ನೆಲೆಯಲ್ಲಿ, ಶ್ರೀನಗರ ಜಿಲ್ಲಾ ಆಡಳಿತವು ಡ್ರೋನ್​ಗಳ ಬಳಕೆ ಮತ್ತು ಮಾರಾಟದ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಡ್ರೋನ್ ಕ್ಯಾಮೆರಾಗಳನ್ನು ಅಥವಾ ಇತರ ಅನ್​ಮ್ಯಾನ್ಡ್​ ಏರಿಯಲ್​ ವೆಹಿಕಲ್​ಗಳನ್ನು ಹೊಂದಿರುವ ನಾಗರೀಕರು, ಅವುಗಳನ್ನು ಪೊಲೀಸರ ಬಳಿ ಜಮಾ ಮಾಡಬೇಕು ಎಂದು ಸೂಚಿಸಲಾಗಿದೆ.

    “ಭದ್ರತಾ ಕಾರಣಗಳಿಂದಾಗಿ ಶ್ರೀನಗರದಲ್ಲಿ ಡ್ರೋನ್‌ಗಳನ್ನು ಹೊಂದಿರುವುದು, ಮಾರಾಟ ಮಾಡುವುದು ಮತ್ತು ಬಳಸುವುದನ್ನು ನಿಷೇಧಿಸಲಾಗಿದೆ. ಡ್ರೋನ್‌ಗಳನ್ನು ಹೊಂದಿರುವ ಜನರು ಅವುಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಜಮಾ ಮಾಡಬೇಕು” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೊಹಮ್ಮದ್​ ಐಜಾಜ್​ ಹೇಳಿದ್ದಾರೆ.

    ಇದನ್ನೂ ಓದಿ: ಕೊರಳಲ್ಲಿ ಹಾವು ಸುತ್ತಿ ಊರೆಲ್ಲಾ ತಿರುಗಾಟ: ಬೆಳಗಾವಿಯಲ್ಲೊಬ್ಬ ಆಧುನಿಕ ‘ಈಶ್ವರ’

    ಜಿಲ್ಲಾ ಮ್ಯಾಜಿಸ್ಟ್ರೇಟರ ಜುಲೈ 3 ರ ಆದೇಶದಲ್ಲಿ, ಇತ್ತೀಚಿನ ಡ್ರೋನ್​ ದುರ್ಬಳಕೆಯ ಪ್ರಕರಣದಿಂದಾಗಿ ಮಹತ್ವದ ಕಟ್ಟಡಗಳು ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳ ವಾಯುಪ್ರದೇಶವನ್ನು ಸುರಕ್ಷಿತವಾಗಿಸಲು, ಎಲ್ಲಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಒಕ್ಕೂಟಗಳಲ್ಲಿ ಕೂಡ ಡ್ರೋನ್ ಬಳಕೆಯನ್ನು ನಿಲ್ಲಿಸಬೇಕು. ಖಾಸಗಿತನವನ್ನು ಉಲ್ಲಂಘಿಸುವುದರ ಜೊತೆಗೆ ಅನ್​ಮ್ಯಾನ್ಡ್ ಏರಿಯಲ್ ವೆಹಿಕಲ್​ಗಳು ಆಕಾಶದಲ್ಲಿ ಹಾರಾಡುವುದು ವಿಪರೀತ ಅಪಾಯಕಾರಿಯಾಗಿದೆ ಎಂದು ಹೇಳಲಾಗಿದೆ.

    ಕೃಷಿ, ಪರಿಸರ ಸಂರಕ್ಷಣೆ ಮತ್ತು ವಿಪತ್ತು ತಗ್ಗಿಸುವ ಕ್ಷೇತ್ರಗಳಲ್ಲಿನ ಸಮೀಕ್ಷೆ ಮತ್ತು ಕಣ್ಗಾವಲು ಚಟುವಟಿಕೆಗಳಿಗೆ ಡ್ರೋನ್‌ಗಳನ್ನು ಬಳಸುವ ಸರ್ಕಾರಿ ಇಲಾಖೆಗಳು ಕೂಡ ಅವುಗಳನ್ನು ಬಳಸುವ ಮೊದಲು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚಿಸಲಾಗಿದೆ. ಈ ಆದೇಶವನ್ನು ತಕ್ಷಣದಿಂದ ಅನುಷ್ಠಾನಗೊಳಿಸಲು ಪೊಲೀಸ್​ ಇಲಾಖೆಗೆ ಸೂಚನೆ ನೀಡಲಾಗಿದ್ದು, ಯಾವುದೇ ಉಲ್ಲಂಘನೆಗೆ ಶಿಕ್ಷೆ ವಿಧಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

    ಆಮೀರ್​ ಖಾನ್ ಮೊದಲನೇ ಮದುವೆ ಸಾಗಿದ್ದೂ ಹದಿನಾರೇ ವರ್ಷ!

    ಎಚ್ಚರ! ಮಕ್ಕಳ ಬಗ್ಗೆ ಜಾಲತಾಣಗಳಲ್ಲಿ ವಿವರ ಶೇರ್​ ಮಾಡಬೇಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts