More

    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ

    ಸಂಡೂರು: ಸಾರ್ವಜನಿಕ ಸೇವೆಯಲ್ಲಿರುವವರು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಲೋಕಾಯುಕ್ತ ಎಸ್ಪಿ ಶಶಿಧರ್ ಹೇಳಿದರು.

    ಪಟ್ಟಣದ ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆಯ ಸಭೆಯಲ್ಲಿ ಬುಧವಾರ ಮಾತನಾಡಿದರು.

    ಸರ್ಕಾರಿ ಅಧಿಕಾರಿಗಳ ಕುಟುಂಬದವರು ನಿಮ್ಮ ಹೆಸರು ಹೇಳದೆ ಸರ್ಕಾರಿ ಕಚೇರಿಗಳಿಗೆ ಕೆಲಸಗಳನ್ನು ಮಾಡಿಸಿಕೊಂಡು ಬರಲು ಹೇಳಿದರೆ ಅಲ್ಲಿನ ಪರಿಸ್ಥಿತಿ, ಅಧಿಕಾರಿಗಳ ವರ್ತನೆ ಹೇಗಿರುತ್ತದೆ ಎಂಬುದು ಗೊತ್ತಾಗುತ್ತದೆ. ಆದ್ದರಿಂದ ವಿವಿಧ ಕಾರ್ಯನಿಮಿತ್ತ ಬರುವ ಜನರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಅವರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡಬೇಕು ಎಂದು ತಿಳಿಸಿದರು.

    ದೋಣಿಮಲೆಯ ಎನ್‌ಎಂಡಿಸಿ ಸ್ವಾಗತಕಾರ್ತಿಯಾಗಿ ಕೆಲಸ ಮಾಡುತ್ತಿರುವ ತಾರಾನಗರ ಮೂಲದ ನೇತ್ರಾವತಿ ಮಾತನಾಡಿ, ಪದವೀಧರೆಯಾಗಿರುವ ನಾನು ಹುಟ್ಟಿದ ಮೂರು ವರ್ಷದಲ್ಲೇ ದೃಷ್ಟಿ ಕಳೆದುಕೊಂಡಿರುವೆ. 2022ರ ಆ.16ರಂದು ಸವದತ್ತಿ ಯಲ್ಲಮ್ಮ ದೇವಿಯ ದರ್ಶನಕ್ಕೆ ಹೋದಾಗ ಅಲ್ಲಿ ನೀಲೇಶ ಎಂಬ ವ್ಯಕ್ತಿ ಪರಿಚಯವಾಗಿದ್ದಾನೆ. ಆತ ಲಕ್ಷ್ಮಣ ಪಾಟೀಲ್ ಎನ್ನುವವರು ಔಷಧ ನೀಡುತ್ತಾರೆ. ಮುಧೋಳಕ್ಕೆ ಕರೆಸಿಕೊಂಡು ಮೂರು ತಿಂಗಳು ಔಷಧ ನೀಡಿದ್ದಾರೆ. ಲಕ್ಷ್ಮಣ ಪಾಟೀಲ್‌ಗೆ 68,410 ರೂ. ಹಣ ಹಾಕಿದ್ದೇನೆ. ಆದರೆ, ದೃಷ್ಟಿ ಬಂದಿಲ್ಲ. ಈ ಕುರಿತು ಲಕ್ಷ್ಮಣಗೆ ಕೇಳಿದರೆ ಹಾರಿಕೆ ಉತ್ತರ ನೀಡತ್ತಿದ್ದಾರೆ ಎಂದು ದೂರು ನೀಡಿದರು.

    ತಹಸೀಲ್ದಾರ್ ಜಿ.ಅನಿಲ್ ಕುಮಾರ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅವರ ಕೆಲಸಗಳಿಗೆ ಎರಡ್ಮೂರು ಬಾರಿ ತಿರುಗಿ ಸಾಕಾದಾಗ ಲೋಕಾಯುಕ್ತರ ಹತ್ತಿರ ಹೋಗುತ್ತಾರೆ ಎಂದ ಅವರು, ಪ್ರಚಾರದ ಕೊರತೆಯಿಂದ ಎರಡು ಸಭೆಗಳಲ್ಲಿ ಜನರ ಕೊರತೆ ಕಾಣುತ್ತಿದೆ ಎಂದರು.

    ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಂಎಲ್‌ಕೆ ನಾಯ್ಡು ಮಾತನಾಡಿ, ಅದಿರು ಲಾರಿಗಳ ಸಂಚಾರದಿಂದ ಜೈಸಿಂಗಪುರ, ವೆಂಕಟಗಿರಿ ಗ್ರಾಮಗಳ ಗಣಿ ರಸ್ತೆಯಿಂದ ಹೊಸಪೇಟೆ ಮುಖ್ಯರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದಿವೆ. ಅತಿಯಾದ ಧೂಳು ಅವರಿಸುತ್ತಿದ್ದು, ಗಂಭೀರವಾಗಿ ಪರಿಗಣಿಸಬೇಕೆಂದು ಕೋರಿದರು. ವಿಠಲಾಪುರದ ತಿರುಮಲ, ಲೋಕಾಯುಕ್ತ ಸಿಪಿಐ ಮಹಮ್ಮದ್ ರಫೀಕ್ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts