More

    ಈ ದೇಶದಲ್ಲಿ ಬಾಲಕಿಯರು ಶಾಲೆ ಬಿಡಬೇಕೆಂದು ಉಸಿರಿಗೇ ವಿಷ ಹಾಕಿದರು!

    ಇರಾನ್: ಬಾಲಕಿಯರು ಶಿಕ್ಷಣವನ್ನು ಸ್ಥಗಿತಗೊಳಿಸಬೇಕು ಎಂಬ ಉದ್ದೇಶದಿಂದ “ಕೆಲವರು” ಇರಾನ್​ನ ಪವಿತ್ರ ನಗರವಾದ ಕೋಮ್‌ನಲ್ಲಿ ಶಾಲಾ ಬಾಲಕಿಯರಿಗೆ ವಿಷ ಉಣಿಸುತ್ತಿದ್ದಾರೆ ಎಂದು ಇರಾನ್ ಉಪಮಂತ್ರಿಯೊಬ್ಬರು ಭಾನುವಾರ ಹೇಳಿರುವ ಬಗ್ಗೆ ಅಲ್ಲಿನ ಮಾಧ್ಯಮ ವರದಿ ಮಾಡಿದೆ.

    ನವೆಂಬರ್ ಕೊನೆ ವಾರದಿಂದ, ತೆಹ್ರಾನ್‌ನ ದಕ್ಷಿಣದ ಕೋಮ್‌ನಲ್ಲಿ ಶಾಲಾಮಕ್ಕಳಲ್ಲಿ ನೂರಾರು ವಿಷಕಾರಿ ಉಸಿರಾಟದ ಪ್ರಕರಣಗಳು ವರದಿಯಾಗಿವೆ. ಕೆಲವರಿಗೆ ಚಿಕಿತ್ಸೆಯ ಅಗತ್ಯವಿದೆ.

    ಭಾನುವಾರ ಉಪ ಆರೋಗ್ಯ ಸಚಿವ ಯುನೆಸ್ ಪನಾಹಿ, ವಿಷವನ್ನು ಉದ್ದೇಶಪೂರ್ವಕವಾಗಿ ದೃಢಪಡಿಸಿದರು. “ಕೋಮ್ ಶಾಲೆಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿಷಪ್ರಾಶನದ ನಂತರ, ಕೆಲವು ಜನರು ಎಲ್ಲಾ ಶಾಲೆಗಳನ್ನು, ವಿಶೇಷವಾಗಿ ಬಾಲಕಿಯರ ಶಾಲೆಗಳನ್ನು ಮುಚ್ಚಬೇಕೆಂದು ಬಯಸುತ್ತಾರೆ ಎಂದು ಕಂಡುಬಂದಿದೆ” ಎಂದು IRNA ರಾಜ್ಯ ಸುದ್ದಿ ಸಂಸ್ಥೆ ಪನಾಹಿಯನ್ನು ಉಲ್ಲೇಖಿಸಿದೆ. ಈ ಸಂದರ್ಭ ಅವರು ಘಟನೆಯ ಬಗ್ಗೆ ಹೆಚ್ಚು ವಿವರಿಸಲಿಲ್ಲ. ಇಲ್ಲಿಯವರೆಗೆ, ವಿಷಕ್ಕೆ ಸಂಬಂಧಿಸಿದ ಯಾವುದೇ ಬಂಧನಗಳಾಗಿಲ್ಲ.

    ಫೆಬ್ರವರಿ 14ರಂದು, ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಗಳ ಪೋಷಕರು ನಗರದ ಗವರ್ನರೇಟ್ ಹೊರಗೆ ಜಮಾಯಿಸಿ ಅಧಿಕಾರಿಗಳಿಂದ ವಿವರಣೆಯನ್ನು ಕೋರಿದರು ಎಂದು IRNA ವರದಿ ಮಾಡಿದೆ.

    ಮರುದಿನ ಸರ್ಕಾರದ ವಕ್ತಾರ ಅಲಿ ಬಹದೋರಿ ಜಹ್ರೋಮಿ, ಗುಪ್ತಚರ ಮತ್ತು ಶಿಕ್ಷಣ ಸಚಿವಾಲಯಗಳು ವಿಷದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು. ಕಳೆದ ವಾರ, ಪ್ರಾಸಿಕ್ಯೂಟರ್ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದರು. ಮಹಿಳೆಯರಿಗಾಗಿ ದೇಶದ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಉಲ್ಲಂಘಿಸಿದ ಆರೋಪದ ಮೇಲೆ 22 ವರ್ಷದ ಇರಾನಿನ ಕುರ್ದ್ ಮಹ್ಸಾ ಅಮಿನಿ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಇದಾದ ಮೇಲೆ ಡಿಸೆಂಬರ್ 16ರಿಂದ ಇರಾನ್ ಪ್ರತಿಭಟನೆಗಳಿಂದ ತತ್ತರಿಸಿ ಹೋಗಿರುವ ಕಾರಣ ಈ ವಿಷ ಪ್ರಾಶನ ಪ್ರಕರಣ ಸಂಭವಿಸಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts