More

    ಸಂಪನ್ಮೂಲ ರಕ್ಷಣೆ ಎಲ್ಲರ ಹೊಣೆ-ಕೇಂದ್ರ ಸಚಿವ ಸುರೇಶ ಅಂಗಡಿ

    ಬೆಳಗಾವಿ: ನಾವೆಲ್ಲ ಅಗತ್ಯಗಳಿಗಷ್ಟೇ ನೈಸರ್ಗಿಕ ಸಂಪನ್ಮೂಲ ಬಳಸಿ ಭವಿಷ್ಯಕ್ಕೆ ಉಳಿಸಿ ಎಲ್ಲರ ಬದುಕನ್ನು ಪರಿಸರ ಸ್ನೇಹಿಯಾಗಿಸುವ ಸಂಕಲ್ಪ ಮಾಡೋಣ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

    ನಗರದ ಅನ್ನಪೂರ್ಣಾ ವಾಡಿಯ ಶಿವಯೋಗೇಶ್ವರ ಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಮತ್ತು ರಾಜ್ಯ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಅಂಗವಾಗಿ ಪ್ರತಿ ಬೂತ್ ಮಟ್ಟದಲ್ಲಿ 5 ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಕೋವಿಡ್-19 ಲಾಕ್‌ಡೌನ್ ನಮ್ಮೆಲ್ಲರ ಜೀವನಕ್ಕೆ ಒಂದು ಪಾಠವಾದಂತಾಗಿದೆ. ಪರಿಸರದ ಸ್ವಚ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕು. ಜಾಗತೀಕರಣದ ಈ ಯುಗದಲ್ಲಿ ಸುಸ್ಥಿರ ಸಮಾಜಕ್ಕೆ ಅಡಿಪಾಯ ಹಾಕಲು ಆರೋಗ್ಯಕರ ಪರಿಸರ ಮುಖ್ಯ. ಭವಿಷ್ಯದ ಪೀಳಿಗೆಗೆ ಪರಿಸರವನ್ನು ಉಳಿಸುವ ಮತ್ತು ಸಂರಕ್ಷಿಸುವ ಸಲುವಾಗಿ ಪ್ರತಿವರ್ಷ ಜು. 28ರಂದು ವಿಶ್ವ ಪರಿಸರ ಸಂರಕ್ಷಣಾ ದಿನ ಆಚರಿಸಿಕೊಂಡು ಬರುತ್ತಿದ್ದೇವೆ. ದೈನಂದಿನ ಜೀವನಕ್ಕೆ ಬೇಕಾದ ನೀರು, ಗಾಳಿ, ಮಣ್ಣು, ಖನಿಜಗಳು, ಮರಗಳು, ಪ್ರಾಣಿಗಳು, ಆಹಾರ ಮತ್ತು ಅನಿಲಗಳಂತಹ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಎಲ್ಲರೂ ಅವಲಂಬಿತರಾಗಿದ್ದೇವೆ. ಹಾಗಾಗಿ ನಾವು ಪರಿಸರ ಉಳಿಸಿ, ಬೆಳಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

    ಬಿಜೆಪಿ ಮುಖಂಡ ರಾಜು ಚಿಕ್ಕನಗೌಡರ, ಮಾರುತಿ ಅಸ್ಟಗಿ, ದಾದಾಗೌಡ ಬಿರಾದಾರ, ವಿಜಯ ಕೊಡಗಣ್ಣನವರ, ಮಂಜುನಾಥ ಪೊಮ್ಮಾರ ಹಾಗೂ ಇತರ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts