More

    ಗಂಡಕ್ ನದಿಯಲ್ಲಿ ದೋಣಿ ಮೇಲೆ ಮಾನವ ಸರಪಣಿ ರಚನೆ ಯಾಕೆ ಏನು?

    ಪಟನಾ: ಬಿಹಾರದಲ್ಲಿ ಮುಖ್ಯಮಂತ್ರಿಯವರ ಮಹತ್ವಾಕಾಂಕ್ಷೆಯ ಜಲ್, ಜೀವನ್, ಹರಿಯಾಲಿ ಎಂಬ ಕಾರ್ಯಕ್ರಮ ಭಾನುವಾರ ಪಟನಾದ ಗಾಂಧಿ ಮೈದಾನದಲ್ಲಿ ಉದ್ಘಾಟನೆಯಾಗಿದೆ.

    ಜಲ, ಜೀವನ ಮತ್ತು ಹಸಿರು ಎಂಬ ಈ ಕಾರ್ಯಕ್ರಮ ಹವಾಮಾನ ವೈಪರೀತ್ಯ ಮತ್ತು ಸಾಮಾಜಿಕ ಅನಿಷ್ಠಗಳನ್ನು ದೂರಗೊಳಿಸುವ ಪ್ರಯತ್ನದ ಉದ್ದೇಶ ಹೊಂದಿದೆ. ಇದರ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಇತರೆ ಸಚಿವರು ಪಾಲ್ಗೊಂಡಿದ್ದರು.

    ಈ ಕಾರ್ಯಕ್ರಮದ ಮೂಲಕ ಸರ್ಕಾರ, ಮದ್ಯಪಾನ, ಬಾಲ್ಯವಿವಾಹ, ವರದಕ್ಷಿಣೆ ಪಿಡುಗು ಇತ್ಯಾದಿ ಸಾಮಾಜಿಕ ಅನಿಷ್ಠಗಳನ್ನೂ ದೂರ ಮಾಡಲು ಪ್ರಯತ್ನಿಸುತ್ತಿದೆ. ಇಂದು ಮಾನವ ಸರಪಣಿಯನ್ನೂ ಗಾಂಧಿ ಮೈದಾನದಲ್ಲಿ ನಡೆಸಲಾಗಿತ್ತು.

    ಇದಕ್ಕೆ ಪೂರಕವಾಗಿ ಮುಜಾಫರ್​ಪುರ ಜಿಲ್ಲೆ ಬೋಛಾ ತಾಲೂಕಿನ ಗಂಡಕ್ ನದಿಯಲ್ಲಿ ದೋಣಿಗಳ ಸರಪಣಿಯನ್ನು ಅಥೂರ್ ಗ್ರಾಮದ ನಿವಾಸಿಗಳು ನಿರ್ಮಿಸಿ ಜನಜಾಗೃತಿ ಮೂಡಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts