More

    ಮೀಸಲು ತಾರತಮ್ಯ ಹೋಗಲಾಡಿಸಲು ವಾಲ್ಮೀಕಿ ಸಮುದಾಯ ಆಗ್ರಹ

    ಹೂವಿನಹಡಗಲಿ: ಎಸ್ಟಿ ಜನರ ಅಭಿವೃದ್ಧಿಗೆ ಮೀಸಲು ಪ್ರಮಾಣ ಶೇ.3 ರಿಂದ ಶೇ 7.5ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ ವಾಲ್ಮೀಕಿ ಸಮುದಾಯ ಶನಿವಾರ ತಹಸೀಲ್ದಾರ್ ವಿಶ್ವಜಿತ್ ಮೆಹತಾಗೆ ಮನವಿ ಸಲ್ಲಿಸಿತು.

    ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಔದ್ಯೋಗಿಕ ಮೀಸಲು ಶೇ.4 ಇರುವುದರಿಂದ ಉದ್ಯೋಗ, ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕಳೆದ 43 ವರ್ಷಗಳಿಂದಲೂ ಮಿಸಲಿನಲ್ಲಿ ತಾರತಮ್ಯವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ , ಕೂಡಲೇ ಸಚಿವ ಸಂಪುಟದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ ಅನುಮೋದನೆ ಮಾಡಬೇಕು. ಪರಿಶಿಷ್ಟ ಪಂಗಡದವರಿಗೆ ಶೇ.7.5 ಮೀಸಲು ಕಲ್ಪಿಸಬೇಕೆಂದು ಮುಖಂಡರು ಒತ್ತಾಯಿಸಿದರು. ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ಎಲ್.ಜಿ.ಹೊನ್ನಪ್ಪನವರ್, ಗೌರವ ಅಧ್ಯಕ್ಷ ಯು.ಹನುಮಂತಪ್ಪ, ಎನ್.ಕೋಟೆಪ್ಪ, ದೀಪದ ಕೃಷ್ಣಪ್ಪ, ಪುರಸಭೆ ಸದಸ್ಯ ಹನುಮಂತಪ್ಪ, ಚಿಂತಿ ಮಾಲತಿ, ಚಿಂತಿ ವಿಶ್ವನಾಥ, ಬಂಗಾರಿ ಶಿವಾನಂದಪ್ಪ, ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts